Vijaypura

ನ್ಯಾಯವಾದಿ ಮೇಲಿನ ಮಾರಣಾಂತಿಕ ಹಲ್ಲೆ: ವಿಜಯಪುರ ಬಾರ್ ಅಸೋಸಿಯೇಷನ್‌ನಿಂದ ನ್ಯಾಯಾಲಯ ಕಾರ್ಯ ಬಹಿಷ್ಕಾರ

Share

ವಿಜಯಪುರ ಬಾರ್ ಅಸೋಸಿಯೇಷನ್‌ ಸದಸ್ಯ ನ್ಯಾಯವಾದಿ ಎಂ.ಎಂ. ಇಂಡಿಕರ್ ಅವರ ಮೇಲೆ ಫೆ. 24, 2026ರಂದು ರಾತ್ರಿ ಕೊಲೆಗೆ ಯತ್ನಿಸಿ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆಗೆ ಸಂಘ ತೀವ್ರ ಖಂಡನೆ ವ್ಯಕ್ತಪಡಿಸಿದೆ. ಈ ಘಟನೆಗೆ ವಿರೋಧ ವ್ಯಕ್ತಪಡಿಸಿ ವಿಜಯಪುರ ನ್ಯಾಯವಾದಿಗಳ ಸಂಘವು ನ್ಯಾಯಾಲಯ ಹಾಗೂ ಕಂದಾಯ ಇಲಾಖೆಯ ಎಲ್ಲಾ ನ್ಯಾಯಾಲಯಗಳ ಕಾರ್ಯಚಟುವಟಿಕೆಗಳಿಂದ ದೂರ ಉಳಿದು ವಿಜಯಪುರ ಜಿಲ್ಲಾಧಿಕಾರಿ ಕಛೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿತು. ಹಲ್ಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಸಂಘದ ಪದಾಧಿಕಾರಿಗಳು ಆಗ್ರಹಿಸಿದರು.
ಸಂಘದ ಪ್ರಕಟಣೆಯಲ್ಲಿ, ನ್ಯಾಯವಾದಿ ಎಂ.ಎಂ. ಇಂಡಿಕರ್ ಅವರ ಮೇಲೆ ನಡೆದ ಕೊಲೆ ಯತ್ನ ಮತ್ತು ಮಾರಣಾಂತಿಕ ಹಲ್ಲೆಗೆ ಪ್ರಯತ್ನಿಸಿದ ಆರೋಪಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಮನವು ಮಾಡಲಾಗಿದೆ.
ನ್ಯಾಯಾಂಗ ವೃತ್ತಿಯ ಭದ್ರತೆ ಮತ್ತು ಗೌರವ ಕಾಪಾಡಲು ಸಂಬಂಧಪಟ್ಟವರು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಸಂಘವು ಒತ್ತಾಯಿಸಿತು.

Tags:

error: Content is protected !!