Belagavi

ದೇವಗಿರಿಯಲ್ಲಿ ರೈತ ಶಕ್ತಿಯ ಸಂಗಮ: ನೇಗಿಲಯೋಗಿ ಸುರಕ್ಷಾ ರೈತ ಸಂಘದ ಜಿಲ್ಲಾಧ್ಯಕ್ಷರಾಗಿ ರಾಮು ಕುಂಬರಗಿ ನೇಮಕ!

Share

ಬೆಳಗಾವಿ ತಾಲೂಕಿನ ದೇವಗಿರಿ ಗ್ರಾಮದಲ್ಲಿ ಇಂದು ರೈತ ಸಂಘಟನೆಯ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಬ್ರಹ್ಮ ದೇವರ ಅಭಿಷೇಕದ ಪವಿತ್ರ ಸಂದರ್ಭದಲ್ಲಿ ನೇಗಿಲಯೋಗಿ ಸುರಕ್ಷಾ ರೈತ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಜರುಗಿದೆ.

ತಾಲೂಕಿನ ದೇವಗಿರಿ ಗ್ರಾಮದಲ್ಲಿ ಶ್ರೀ ಬ್ರಹ್ಮ ದೇವರ ಅಭಿಷೇಕದ ನಿಮಿತ್ತ ಹಮ್ಮಿಕೊಂಡಿದ್ದ ವಿಶೇಷ ಸಮಾರಂಭದಲ್ಲಿ ‘ನೇಗಿಲಯೋಗಿ ಸುರಕ್ಷಾ ರೈತ ಸಂಘ’ದ ಸಂಘಟನಾ ಪರ್ವಕ್ಕೆ ಚಾಲನೆ ನೀಡಲಾಯಿತು. ಸಂಘದ ರಾಜ್ಯಾಧ್ಯಕ್ಷರಾದ ಧರ್ಮರಾಜ ಚ. ಗೌಡರವರು, ರಾಮು ಕುಂಬರಗಿ ಅವರನ್ನು ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಜಿಲ್ಲಾಧ್ಯಕ್ಷರನ್ನಾಗಿ ಅಧಿಕೃತವಾಗಿ ನೇಮಕ ಮಾಡಿ, ಶಾಲು ಹೊದಿಸುವ ಮೂಲಕ ಸಂಘಟನಾ ದೀಕ್ಷೆ ನೀಡಿದರು. ಈ ವೇಳೆ ಮಾತನಾಡಿದ ಗೌಡರವರು, ರೈತರ ಹಿತರಕ್ಷಣೆಗಾಗಿ ಸಂಘಟನೆಯನ್ನು ಬಲಪಡಿಸುವುದು ಇಂದಿನ ಅಗತ್ಯವಾಗಿದೆ ಎಂದು ತಿಳಿಸಿದರು

.
ಈ ಸಮಾರಂಭದಲ್ಲಿ ರಾಜ್ಯ ಉಪಾಧ್ಯಕ್ಷ ಬಸವನಗೌಡ ಪಾಟೀಲ್, ಪ್ರಮುಖರಾದ ಗಣೇಶ್ ಜಾದವ್, ಗುರುಬಸಪ್ಪ ಮಾಲಪನ್ನವರ್, ಖಾದರ್ ಮಾಣಿಕಬಾರ್ ಹಾಗೂ ಅನೇಕ ರೈತ ಮುಖಂಡರು ಭಾಗವಹಿಸಿದ್ದರು. ದೇವಗಿರಿ ಗ್ರಾಮದ ಸಮಸ್ತ ಪುರುಷರು ಮತ್ತು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಂಘಟನೆಯ ಉದ್ದೇಶಗಳಿಗೆ ಬೆಂಬಲ ಸೂಚಿಸಿದರು. ನೂತನ ಜಿಲ್ಲಾಧ್ಯಕ್ಷ ರಾಮು ಕುಂಬರಗಿ ಅವರು, ತಮಗೆ ನೀಡಲಾದ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿಭಾಯಿಸಿ, ಜಿಲ್ಲೆಯಾದ್ಯಂತ ರೈತರ ಸಮಸ್ಯೆಗಳಿಗೆ ಧ್ವನಿಯಾಗುವುದಾಗಿ ಭರವಸೆ ನೀಡಿದರು

Tags:

error: Content is protected !!