Khanapur

ತಾಲೂಕಾ ಪಂಚಾಯತ ಸಭಾ ಭವನದಲ್ಲಿ ರಾಷ್ಟ್ರೀಯ ನಾಯಕರ ಭಾವಚಿತ್ರ ಹಾಕದೆ ಅವಮಾನ ಮಾಡಿದ ಕಾರ್ಯನಿರ್ವಾಹಕ ಅದಿಕಾರಿ

Share

ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲೂಕಿನ ತಾಲೂಕು ಪಂಚಾಯಿತಿ ಕಾರ್ಯಾಲಯದ ನೂತನ ಸಭಾ ಭವನದಲ್ಲಿ ರಾಷ್ಟ್ರೀಯ ನಾಯಕರ ಯಾವ ಭಾವಚಿತ್ರವು ಅಳವಡಿಸದೆ ಮಹಾತ್ಮರಿಗೆ ಅವಮಾನ ಮಾಡಿರುವ ಘಟನೆ ನಡೆದಿದೆ

ಕಾರ್ಯನಿರ್ವಾಹಕ ಅಧಿಕಾರಿಗಳಾದ ರಮೇಶ ಮೇತ್ರಿ ಅವರು ತಾಲೂಕಿನ ಮುಖ್ಯ ಕಛೇರಿಗಳಲ್ಲಿ ಒಂದಾದ ತಾಲೂಕು ಪಂಚಾಯತಿ ಸಭಾ ಭವನದಲ್ಲಿ ರಾಷ್ಟ್ರೀಯ ನಾಯಕರ ಭಾವಚಿತ್ರ ಹಾಕದಿರುವದರಿಂದ ಸಮಾಜ ಸೇವಕ ಜ್ಯೋತಿಬಾ ಬೆಂಡಿಗೇರಿ ಹಾಗೂ ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣರಾಗಿದ್ದಾರೆ ಗ್ರಾಮ ಪಂಚಾಯತ ಕಾರ್ಯಾಲಯಗಳ ಸಭಾ ಭವನಗಳಲ್ಲಿ ಎಲ್ಲಾ ರಾಷ್ಟ್ರೀಯ ನಾಯಕರ ಫೋಟೊಗಳನ್ನ ಹಾಕಿ ಗೌರವ ಸಲ್ಲಿಸುತ್ತಿದ್ದರೆ ಕಾರ್ಯನಿರ್ವಾಹಕ ಅದಿಕಾರಿಗಳು ಮಾತ್ರ ತನಗೆ ಯಾವುದು ಸಂಭಂಧವಿಲ್ಲದಂತೆ ಅಗೌರವ ತೋರುತ್ತಿರುವದು ದುರದುಷ್ಟಕರ ಸಂಗತಿ ಒಟ್ಟಿನಲ್ಲಿ ಒಂದಲ್ಲಾ ಒಂದು ಸುದ್ದಿಯಿಂದ ತಾಲೂಕಾ ಪಂಚಾಯತ್ ಅಧಿಕಾರಿಗಳು ಚರ್ಚೆಯಲ್ಲಿ ಇದ್ದಾರೆ ಇತ್ತಿಚೆಗೆ ಅಷ್ಟೇ ತಾಲೂಕಾ ಪಂಚಾಯತ್ ಎಮ್ ಜಿ ಎನ್ ಆರ್ ಇಜಿ ಸಹಾಯಕ ನಿರ್ದೇಶಕಿ ರೂಪಾ ಬಡಕುಂದ್ರಿ ಅವರು ರಜೆಯ ದಿನ ಸರ್ಕಾರಿ ವಾಹನವನ್ನು ಬಳಕೆ ಮಾಡಿ ಚರ್ಚೆಗೆ ಗ್ರಾಸವಾಗಿದ್ದರು ಈಗ ನೋಡಿದರೆ ರಾಷ್ಟ್ರೀಯ ನಾಯಕರ ಭಾವಚಿತ್ರ ಹಾಕದೇ ತಾಲೂಕಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ರಮೇಶ್ ಮೇತ್ರಿ ಅವರು ನಡೆದುಕೊಂಡಿದ್ದಾರೆ ಇದರಲ್ಲಿ ವಿಶೇಷವೆನ್ನೆಂದರೆ ತಾಲೂಕಾ ಪಂಚಾಯತ್ ಸೇರಿದಂತೆ ಇನ್ನಿತರ ಗ್ರಾಮ ಪಂಚಾಯಿತಿಗಳ ಸಮಸ್ಯೆ ಗಳ ಕುರಿತು ವಿಚಾರಣೆ ಮಾಡಲು ಫೋನ್ ಮಾಡಿದರೂ ಕೂಡ ಸ್ಪಂದಿಸುವ ಕಾರ್ಯ ಮಾಡುವುದಿಲ್ಲ ಒಟ್ಟಿನಲ್ಲಿ ಖಾನಾಪೂರ ತಾಲೂಕಾ ಪಂಚಾಯತ್ ಅಧಿಕಾರಿಗಳು ನಡೆಯ ಬಗ್ಗೆ ಸಾರ್ವಜನಿಕರಲ್ಲಿ ಬೇಸರದ ಭಾವನೆ ಮೂಡಿದಂತಾಗಿದೆ

ಈ ಸುದ್ದಿ ನೋಡಿಯಾದರು ಸಂಭಂಧಪಟ್ಟ ಮೇಲದಿಕಾರಿಗಳು ಯಾವ ರೀತಿ ಕ್ರಮ ಕೈಗೋಳ್ಳುತ್ತಾರೆಂದು ಕಾದು ನೋಡಬೇಕು

Tags:

error: Content is protected !!