ಸಾಧಿಸುವ ಛಲವಿದ್ದರೆ ವಯಸ್ಸು ಅಡ್ಡಿಯಾಗದು ಎಂಬುದನ್ನು ಬೆಳಗಾವಿಯ ಎಮಿನೆಂಟ್ ಕೋಚಿಂಗ್ ಕ್ಲಾಸಿಸ್ನ ವಿದ್ಯಾರ್ಥಿನಿಯರು ಸಾಬೀತುಪಡಿಸಿದ್ದಾರೆ. ಫೆಬ್ರವರಿ 1ರಂದು ನಡೆದ ಕಿತ್ತೂರು ರಾಣಿ ಚೆನ್ನಮ್ಮ ಸೈನಿಕ ಶಾಲೆಯ ಪ್ರವೇಶ ಪರೀಕ್ಷೆಯಲ್ಲಿ ಈ ಸಂಸ್ಥೆಯ ಬರೋಬ್ಬರಿ 21 ವಿದ್ಯಾರ್ಥಿನಿಯರು ಆಯ್ಕೆಯಾಗುವ ಮೂಲಕ ರಾಜ್ಯದ ಗಮನ ಸೆಳೆದಿದ್ದಾರೆ.”

ದಿನಾಂಕ : 01-02-2026 ರವಿವಾರದಂದು ನಡೆದ ಕಿತ್ತೂರು ರಾಣಿ ಚೆನ್ನಮ್ಮ ಸೈನಿಕ ಶಾಲೆ ಕಿತ್ತೂರು ಶಾಲೆಯ 6ನೇ ವರ್ಗದ ಪ್ರವೇಶ ಪೂರ್ವ ಪರೀಕ್ಷೆಯಲ್ಲಿ ಎಮಿನೆಂಟ್ ಕೋಚಿಂಗ್ ಕ್ಲಾಸಿಸ್ನ ಪರೀಕ್ಷೆ ಬರೆದ ಒಟ್ಟು 26 ವಿದ್ಯಾರ್ಥಿನಿಯರಲ್ಲಿ 21 ವಿದ್ಯಾರ್ಥಿನಿಯರು ಆಯ್ಕೆಯಾಗುವುದರ ಮೂಲಕ ಸಂಸ್ಥೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಆಯ್ಕೆಯಾದ ವಿದ್ಯಾರ್ಥಿಗಳು 1) ಕು. ಆದ್ಯಾ ಪಾಟೀಲ 2) ಕು. ಸುಖ ಹೋಳಿಕಟ್ಟಿ 3) ಕು. ಪ್ರಥ್ವಿ ಚಂದರಗಿ 4)ಕು. ಸಂತೃಪ್ತಿ ಗುಳಪ್ಪಗೋಳ 5)ಕು. ಶಾಂಭವಿ ಮೇಟಿ 6)ಕು. ಸಮೃದ್ಧಿ ಕೊರಗಿ 7) ಕು. ಖುಷಿ ಪಾಟೀಲ 8) ಕು. ವಚನಾ ತುರಮರಿ 9)ಕು. ವರ್ಷಿಣಿ ಯರಗಾನವಿ 10) ಕು. ಸಂಯುಕ್ತಾ ಮುದ್ದವ್ವಗೋಳ 11) ಕು. ಖುಷಿ ಬಂಡಿ 12) ಕು. ಅಲವೀನಾ ಅಲೀಸಾಬನವರ 13) ಕು. ಅಮೃತಾ ಅಲಿಯಾಬಾದ 14) ಕು. ಭಕ್ತಿ ಕರ್ಜಗಿಮಠ 15) ಕು. ಇನಾಯಾ ದೇಸಾಯಿ 16) ಕು. ನಿವೇದಿತಾ ಉಳ್ಳಾಗಡ್ಡಿ 17) ಕು. ಸಾನವಿ ಕುರಬೇಟ 18) ಕು. ಶೀತಲ ಗಿರಪ್ಪಗೌಡರ 19) ಕು. ನಂದಿನಿ ಪಾಂಡಗಾಂವಿ 20) ಕು. ಪೂರ್ವಾ ಕಣೇಗಾಂವಕರ 21) ಸನ್ನಿಧಿ ಹಿರೇಮಠ ಸತತವಾಗಿ ಅಭ್ಯಾಸ ಮಾಡಿದ ವಿದ್ಯಾರ್ಥಿನಿಯರಿಗೆ, ಶ್ರದ್ಧೆಯಿಂದ ಕಾರ್ಯನಿರ್ವಸಿದ ಶಿಕ್ಷಕರಿಗೆ ಹಾಗೂ ಸಹಕರಿಸಿದ ಪಾಲಕ ಮಹನೀಯರಿಗೆ ಸಂಸ್ಥೆಯ ಸಂಸ್ಥಾಪಕ ಚೇರ್ಮನ್ರಾದ ಶ್ರೀಯುತ. ಮಂಜುನಾಥ ಗು. ಕೌಲಗಿ, ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಮತಿ, ಭಾಗ್ಯಲಕ್ಷ್ಮೀ ಮಂ. ಕೌಲಗಿ ಹಾಗೂ ಆಡಳಿತಾಧಿಕಾರಿಗಳಾದ ಶ್ರೀಯುತ. ಸದಾನಂದ ಬನ್ನೂರ ರವರು ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಶಿಕ್ಷಕರು ಮತ್ತು ಶಿಕ್ಷಕೇತರ ಸಿಬ್ಬಂದಿಯವರು ಹರ್ಷ ವ್ಯಕ್ತ ಪಡಿಸುವ ಮೂಲಕ ತಮ್ಮ ಸಂತೋಷವನ್ನು ಇಮ್ಮಡಿಗೊಳಿಸಿಕೊಂಡಿದ್ದಾರೆ. ಸಂಸ್ಥೆ ಪ್ರಾರಂಭವಾದ ಕೇವಲ 2 ವರ್ಷಗಳಲ್ಲಿ ಅಮೋಘ ಸಾಧನೆಯನ್ನು ಮಾಡಿದೆ. ಕಳೆದ ವರ್ಷದಲ್ಲಿ ಅಖಿಲ ಭಾರತ ಸೈನಿಕ ಶಾಲೆಗೆ-32 ವಿದ್ಯಾರ್ಥಿಗಳು, ಕಿತ್ತೂರು ಸೈನಿಕ ಶಾಲೆಗೆ-08 ವಿದ್ಯಾರ್ಥಿನೀಯರು, ನವೋದಯ ಶಾಲೆಗೆ- 04 ವಿದ್ಯಾರ್ಥಿಗಳು ಮತ್ತು ಆರ್.ಎಂ.ಎಸ್. ಶಾಲೆಗೆ ಓರ್ವ ವಿದ್ಯಾರ್ಥಿ ಆಯ್ಕೆಯಾಗುವುದರೊಂದಿಗೆ ಸಂಸ್ಥೆಯು ಪ್ರಥಮ ವರ್ಷದ ಪಲಿತಾಂಶವನ್ನು ನೀಡುವುದರ ಮೂಲಕ ಬೆಳಗಾವಿ ನಗರದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಕ್ಕಳನ್ನು ತರಬೇತಿಗೊಳಿಸುವಲ್ಲಿ ಯಶಸ್ವಿ ತರಬೇತಿ ಕೇಂದ್ರವಾಗಿ ಹೊರಹೊಮ್ಮಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :
