ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಯಲ್ಲಮ್ಮನ ಗುಡ್ಡದಲ್ಲಿ ಈಗ ಕಣ್ಣು ಹಾಯಿಸಿದ ಕಡೆ ಎಲ್ಲ ಭಕ್ತ ಸಾಗರ, ಭಾರತ ಹುಣ್ಣಿಮೆಯ ನಿಮಿತ್ತ ರಾಜ್ಯ ಸೇರಿ ಅಕ್ಕಪಕ್ಕದ ರಾಜ್ಯದ ಭಕ್ತರು ಶ್ರದ್ಧಾಭಕ್ತಿಯಿಂದ ಯಲ್ಲಮ್ಮದೇವಿಯ ದರ್ಶನಕ್ಕೆ ಬರುತ್ತಿದ್ದಾರೆ. ಆದರೆ ಅಸಂಖ್ಯಾತ ಭಕ್ತ ಸಮೂಹ ಹೊಂದಿರುವ ಯಲ್ಲಮ್ಮನ ಗುಡ್ಡದಲ್ಲಿ ಕೂಡ್ರಿಂಕ್ಸ್ ಅಂಗಡಿಯವರು ತಂಪು ಪಾನಿಯ ವ್ಯಾಪರ ನಡೆಸುವುದನ್ನು ಬಿಟ್ಟು ಹಣದಾಸೆಗೆ ಕದ್ದು ಮುಚ್ಚಿ ಸರಾಯಿ ಮಾರಾಟ ಜೋರಾಗಿದೆ.

ಹೌದು… ಭಕ್ತ ಸಮೂಹ ಕರೆಯ ಮೇರೆಗೆ ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ಯಲ್ಲಮ್ಮನ ಗುಡ್ಡದಲ್ಲಿನ ಕೂಡ್ರಿಂಕ್ಸ್ ಅಂಗಡಿಗಳ ಸರಾಯಿ ಕದ್ದು ಮುಚ್ಚಿ ಮಾರಾಟ ಮಾಡುವ ಕರಾಳ ಮುಖ ಬಯಲಾಗಿದೆ. ಭಾರತ ಹುಣ್ಣುಮೆ ನಿಮಿತ್ತ ಅಸಂಖ್ಯಾತ ಭಕ್ತ ಸಮೂಹ ರೇಣುಕಾ- ಯಲ್ಲಮ್ಮ ದೇವಿಯ ದರ್ಶನಕ್ಕೆ ಬರುವುದನ್ನೇ ಬಂಡವಾಳ ಮಾಡಿಕೊಂಡಿರುವ ಇಲ್ಲಿನ ಹಲವು ಕೂಡ್ಲ್ರಿಂಕ್ಸ್ ಅಂಗಡಿಗಳು ಹುಣ್ಣುಮೆ ಮುಗಿಯುಷ್ಟರಲ್ಲಿ ಹಣಗಳಿಸಲು ಮುಂದಾಗಿದೆ. ಪೊಲೀಸ್ ಹಾಗೂ ಅಬಕಾರಿ ಇಲಾಖೆಯ ಕಣ್ಣಿಗೆ ಮಣ್ಣು ಏರಚಿ ಇಲ್ಲಿನ ತಂಪು ಪಾನಿಯ ಹೆಸರಿನ ಬಹುತೇಕ ಶಾಪ್ಗಳು ಅಕ್ರಮ ಸರಾಯಿ ಮಾರಾಟ ಅಡ್ಡೆಗಳಾಗಿ ಪರಿವರ್ತನೆಯಾಗಿದ್ಲದೇ, ಡಬಲ್ ತ್ರಿಪಲ್ ರೇಟಗೆ ತಮ್ಮ ಹಣದಾಹ ತೀರಿಸಿಕೊಳ್ಳುತ್ತಿವೆ. ಮಹಾಲಕ್ಷ್ಮಿ ಕೋಲ್ಡ್ರೀಂಕ್ಸ್ ಶಾಪನಲ್ಲಿ ಮಹಿಳೆಯೊಬ್ಬರು ಚೀಲದಲ್ಲಿ ಸರಾಯಿ ತುಂಬಿಕೊಂಡು ಬಂದು ನೀಡುತ್ತಾಳೆ. ಹಾಗೇ ಶ್ರೀನಿವಾಸ ಕೋಲ್ಡ್ರಿಂಕ್ಸ್, ಮಹಾಲಕ್ಷ್ಮಿ ಕೋಲ್ಡ್ರೀಂಕ್ಸ ಬಹುತೇಕ ಕೋಲ್ಡ್ರೀಂಕ್ಸ್ ಅಂಗಡಿಗಳು ಅಕ್ರಮ ಸರಾಯಿ ಅಡ್ಡೆಗಳಾಗಿ ಮಾರ್ಪಾಡು ಆಗಿವೆ. ಈ ಎಲ್ಲ ಅಂಗಡಿಗಳಿಗೆ ರಿಯಾಲಿಟಿ ಚೆಕ್ ಮಾಡಲು ಹೋದ ಸಂದರ್ಭದಲ್ಲಿ ಹಾಟ್ ಸರಾಯಿ ಹಾಗೂ ಬಿಯರ್ ಮಾರಾಟ ಅಸಲಿ ಕಥೆ ಬಯಲಿಗೆ ಬಂದಿದೆ. ಗೋವಾ, ಮಹಾರಾಷ್ಟ್ರ ಸೇರಿ ರಾಜ್ಯದ ಅಸಂಖ್ಯಾತ ಭಕ್ತ ಸಮೂಹ ಹೊಂದಿರುವ ರೇಣುಕಾ ಯಲ್ಲಮ್ಮ ಗುಡ್ಡದಲ್ಲಿ ಕೋಲ್ಡ್ರಿಂಕ್ಸ್ ಶಾಪಗಳು ಗುಡ್ಡದಲ್ಲಿ ಭಕ್ತಿಭಾವಕ್ಕೆ ತರುವ ನಿಟ್ಟಿನಲ್ಲಿ ನಡೆದುಕೊಳ್ಳುತ್ತಿದ್ದು, ನಿದ್ದೆಗೆ ಜಾರಿರುವ ಬೆಳಗಾವಿ ಜಿಲ್ಲಾ ಅಬಕಾರಿ ಇಲಾಖೆಯ ಅಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಇಲ್ಲಿ ಕದ್ದು ಮುಚ್ಚಿ ಅಕ್ರಮ ಸರಾಯಿ ಮಾರಾಟ ಮಾಡುವ ಕೋಲ್ಡ್ರೀಂಕ್ಸ್ ಅಂಗಡಿಗಳ ಮೇಲೆ ದಾಳಿ ನಡೆಸಿ, ಸರಾಯಿ ಮಾರಾಟ ಮಾಡುವ ಅಂಗಡಿಗಳ ಕಿತ್ತು ಬಿಸಾಕಿ ಕಾನೂನು ಕ್ರಮ ಕೈಗೊಳ್ಳತ್ತಾರೋ ಇಲ್ವೊ ಅನ್ನೋದು ಕಾದು ನೋಡಬೇಕಾಗಿದೆ. ಇಲ್ಲಿ ಅಕ್ರಮ ಸರಾಯಿ ಮಾರಾಟಗಾರರ ವಿರುದ್ಧ ಕಠಿಣ ಕಾಮ ಜಾರಗೊಳಿಸುವ ಮೂಲಕ ಅಸಂಖ್ಯಾತ ಭಕ್ತ ಸಮೂಹ ಹೊಂದಿರುವ ರೇಣುಕಾ ಯಲ್ಲಮ್ಮನ ಸನ್ನಿಧಾನದ ಗುಡ್ಡವನ್ನು ಸರಾಯಿ ಮುಕ್ತ ಮಾಡಬೇಕಾಗಿದೆ.
