Dharwad

ಧಾರವಾಡದಲ್ಲಿ ಕಸಾಯಿಖಾನೆ ಮೇಲೆ ಬಜರಂಗದಳ ಕಾರ್ಯಕರ್ತರ ದಾಳಿ…… ಸ್ಥಳಕ್ಕೆ ಧಾರವಾಡ ಎಸಿಪಿ ಪ್ರಶಾಂತ್ ಸಿದ್ಧನಗೌಡರ್ ಭೇಟಿ.

Share

ಅಕ್ರಮ ಗೋವುಗಳ ಸಾಗಾಟದ ಆರೋಪ ಕೇಳಿ ಬಂದ ಹಿನ್ನೆಲೆ ಧಾರವಾಡದ ಛತ್ರಪತಿ ಶಿವಾಜಿ ವೃತ್ತದ ಬಳಿ ಇರುವ ಕಸಾಯಿ ಖಾನೆ ಮೇಲೆ ಬಜರಂಗದಳ ಕಾರ್ಯರ್ತರು ತಡ ರಾತ್ರಿ ದಾಳಿ ನಡೆಸಿ, ಸಂಪೂರ್ಣ ಕಸಾಯಿ ಖಾನೆ ಬಂದ್ ಮಾಡುವಂತೆ ಆಗ್ರಹಿಸಿದರು.

ಧಾರವಾಡ ನಗರದ ಛತ್ರಪತಿ ಶಿವಾಜಿ ವೃತ್ತದ ಬಳಿಯ ಕಸಾಯಿಖಾನೆಗೆ ಬಜರಂಗದಳದ ಪ್ರಮುಖರು ಬರುತ್ತಿದಂತೆ, ಕಸಾಯಿ ಖಾನೆ ನಡೆಸುವವರು ಹಾಗೂ ಬಜರಂಗದಳ ಕಾರ್ಯಕರ್ತರ ನಡುವೆ ವಾಗ್ವಾದ ನಡೆದು ಕಸಾಯಿಖಾನೆ ನಡೆಸುವವರು ಬೇದರಿಕೆ ಹಾಕಿದ ಪ್ರಸಂಗ ಕೂಡ ನಡೆದಿದೆ ಎಂದು ತಿಳಿದು ಬಂದಿದ್ದು, ಕೈ ಕೈ ಮಿಲಾಯಿಸುವ ಹಂತ ತಲುಪಿದರು. ಸ್ಥಳದಲ್ಲಿದ್ದ ಪೊಲೀಸರು ಸದ್ಯ ಪರಿಸ್ಥಿತಿ ನಿಯಂತ್ರಿಸಿದ್ದು, ಕೆಲಕಾಲ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಬಜರಂಗದಳ ಕಾರ್ಯಕರ್ತರು ಗೋವುಗಳನ್ನು ಹೊರಗಡೆ ಬಿಡುವಂತೆ ಪಟ್ಟು ಹಿಡಿದು, ಸ್ಥಳದಲ್ಲಿ ಜೈ ಶ್ರೀರಾಮ ಎಂಬ ಘೋಷಣೆ ಕೂಗಿದ್ದಾರೆ. ಇನ್ನೂ ಪರಿಸ್ಥಿತಿ ಬಿಗಡಾಯಿಸುವ ಹಿನ್ನಲೆಯಲ್ಲಿ ಹು-ಧಾ ಕಮಿಷನರೇಟ್ ಡಿಸಿಪಿ ರವೀಶ್ ಹಾಗೂ ಧಾರವಾಡ ಎಸಿಪಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳುವುದಾಗಿ ಬಜರಂಗದಳದ ಕಾರ್ಯಕರ್ತರಿಗೆ ಭರವಸೆ ನೀಡಿದ ಬೆನ್ನಲ್ಲೇ ಕಾರ್ಯಕರ್ತರು ಪ್ರತಿಭಟನೆ ಕೈ ಬಿಟ್ಟಿದ್ದಾರೆ.

Tags:

error: Content is protected !!