ದೇವರ ಫೋಟೋಗಳನ್ನು ಮನೆಯಲ್ಲಿ ಇಟ್ಟು ಪೂಜೆ ಮಾಡಿ ಶೃದ್ಧೆ, ಭಕ್ತಿಯಿಂದ ನಡೆದುಕೊಳ್ಳುವ ಜನರು ಮುಕ್ಕಾದ ದೇವರ ಫೋಟೋಗಳನ್ನು ದೇವಸ್ಥಾನದ ಆವರಣ ಹಾಗೂ ಮರಗಳ ಕೆಳಗೆ ಇರುವುದು ಅಪರಾಧವಾಗಿದೆ ಎಂದು ಸರ್ವಲೋಕಾ ಸೇವಾ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ವೀರೇಶ ಬಸಯ್ಯ ಹಿರೇಮಠ ಹೇಳಿದರು.


ಶನಿವಾರ ಬೆಳಗಾವಿ ನಗರದ ಚನ್ನಮ್ಮ ಸೊಸೈಟಿಯ ಬಳಿ ಮುಕ್ಕಾದ ದೇವರ ಫೋಟೋ ಸಂಗ್ರಹಿಸಿದ ಬಳಿಕ ಮಾತನಾಡಿದ ಅವರು, ಹಿಂದುಗಳ ಮನೆಯಲ್ಲಿ ಸಾಕಷ್ಟು ದೇವರುಗಳ ಫೋಟೋ ಇಟ್ಟು ಭಕ್ತಿಯಿಂದ ಪೂಜಿಸುತ್ತೇವೆ. ಅದೇ ಮುಕ್ಕಾದ ಕೂಡಲೇ ಗಿಡ ಮರಗಳಲ್ಲಿ ಎಸೆದು ಹೋಗುವುದು ಅಪರಾಧ. ಮುಕ್ಕಾದ ಫೋಟೋಗಳನ್ನು ಶಾಸ್ತ್ರೋಕ್ತವಾಗಿ ವಿಧಿ ವಿಧಾನ ಮಾಡಿ ವಿಸರ್ಜನೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ನಿಮಗೆ ಸಾಧ್ಯವಾಗದಿದ್ದಲ್ಲಿ ನಮ್ಮ ಸರ್ವಲೋಕ ಫೌಂಡೇಶನ್ ಗೆ ಕರೆ ಮಾಡಿದರೆ ನಾವೇ ಆ ಫೋಟೋಗಳನ್ನು ತೆಗೆದುಕೊಂಡು ಹೋಗಿ ವಿಸರ್ಜನೆ ಮಾಡುತ್ತೇವೆ ಎಂದರು.
ಮಹಾದೇವ ರಾಠೋಡ ಮಾತನಾಡಿ, ಮನೆಯಲ್ಲಿ ಪೂಜೆ ಮಾಡುವ ದೇವರನ್ನು ಮುಕ್ಕಾದ ಕೂಡಲೇ ಎಸೆಯುವ ಬದಲು ಅದನ್ನು ವಿಧಿ ವಿಧಾನದಿಂದ ವಿಸರ್ಜನೆ ಮಾಡುತ್ತ ಜನರಿಗೆ ಅರಿವು ಮೂಡಿಸುತ್ತಿರುವ ವೀರೇಶ ಬಸಯ್ಯ ಹಿರೇಮಠ ಅವರ ಕಾರ್ಯ ನಿಜಕ್ಕೂ ಶ್ಲಾಘನೀಯ ಬೆಳಗಾವಿ ನಗರದ ಜನರು ಅವರು ಮಾಡುವ ಸಾಮಾಜಿಕ ಕೆಲಸಕ್ಕೆ ಎಲ್ಲರೂ ಕೈ ಜೋಡಿಸಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಅರುಣ, ಶ್ರೀಕಾಂತ್ ಶಾಸ್ತ್ರೀ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
