Dharwad

ಫೆ.22 ರಂದು ಧಾರವಾಡದಲ್ಲಿ ಶ್ವಾನ ಪ್ರದರ್ಶನ, ಬೀದಿ ನಾಯಿಗಳ ದತ್ತು ಸ್ವೀಕಾರ ಕಾರ್ಯಕ್ರಮ.

Share

ಧಾರವಾಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಪಶುಪಾಲನೆ ಇಲಾಖೆ ಹಾಗೂ ಮಹಾನಗರ ಪಾಲಿಕೆ ಆಶ್ರಯದಲ್ಲಿ ಫೆ.22ರ ಬೆಳಿಗ್ಗೆ 9 ರಿಂದ ಕೆಸಿಡಿ ಆವರಣದಲ್ಲಿ ಶ್ವಾನ ಪ್ರದರ್ಶನ, ಬೀದಿ ನಾಯಿಗಳ ದತ್ತು ಸ್ವೀಕಾರ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಶ್ವಾನಗಳ ತಳಿಗಳ ಬಗ್ಗೆ ತಿಳುವಳಿಕೆ, ಶ್ವಾನ ಸಾಕಾಣಿಕೆ ಬಗ್ಗೆ ಅರಿವು ಮೂಡಿಸುವುದು, ಆರೋಗ್ಯ, ಪೋಷಣೆ, ಲಸಿಕೆ ಬಗ್ಗೆ ತಿಳುವಳಿಕೆ, ರೇಬಿಸ್ ನಿಯಂತ್ರಣ ಮತ್ತು ನಾಯಿ ಕಚ್ಚಿದ ನಂತರ ಪ್ರಥಮ ಚಿಕಿತ್ಸೆ-ಔಷಧೋಪಚಾರದ ಬಗ್ಗೆ ಅರಿವು ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು. ಜತೆಗೆ ಶ್ವಾನ ಪ್ರದರ್ಶನಕ್ಕೆ ಸ್ಥಳದಲ್ಲೇ ನೋಂದಣಿ ಇರಲಿದೆ. ಬೀದಿ ನಾಯಿ ಮರಿಗಳ ದತ್ತು ಪಡೆಯುವುದರಿಂದ ಬೀದಿ ನಾಯಿಗಳ ಸಂಖ್ಯೆ ತಗ್ಗಿಸುವುದು ಮಾನವ ಮತ್ತು ಬೀದಿ ನಾಯಿಗಳ ಸಂಘರ್ಷ ತಪ್ಪಿಸುವುದು ಕಾರ್ಯಕ್ರಮದ ಮುಖ್ಯ ಉದ್ದೇಶ. ದತ್ತು ಪಡೆಯುವವರಿಗೆ ಪ್ರಮಾಣಪತ್ರ ನೀಡಲಾಗುತ್ತದೆ. ಮರಿಗಳಿಗೆ ರೇಬಿಸ್ ವಿರುದ್ಧದ ಲಸಿಕೆ ಮತ್ತು ಇತರ ರೋಗಗಳ ಲಸಿಕೆಯನ್ನು ಹಾಕಿಯೇ ದತ್ತು ನೀಡಲಾಗುತ್ತದೆ. ಜಂತು ನಿವಾರಕ ಔಷಧಿ, ನೆಕ್ ಬೆಲ್ಟ್ ಹಾಗೂ ಸಾಕಾಣಿಕೆ ಪರಿಕರಗಳುಳ್ಳ ಕಿಟ್ ನೀಡಲಾಗುತ್ತದೆ. ಪ್ರದರ್ಶನದಲ್ಲಿ ಪಾಲ್ಗೊಳ್ಳುವ ಶ್ವಾನಗಳ ತಳಿ ಮತ್ತು ಲಿಂಗದ ಆಧಾರದ ಮೇಲೆ ಗುರುತಿಸಿ ಉತ್ತಮ ಶ್ವಾನ ಎಂಬ ಪ್ರಶಸ್ತಿ ಹಾಗೂ ಆಕರ್ಷಕ ಬಹುಮಾನ ಸಹ ನೀಡಲಾಗುವುದು ಎಂದು ತಿಳಿಸಿದರು.

Tags:

error: Content is protected !!