ಕೇಂದ್ರ ನರೇಗಾ ಹೆಸರು ಬದಲಾವಣೆ ವಿರೋಧಿಸಿ ವಿಜಯಪುರದಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್ ವಿನೂತನವಾಗಿ ಹೋರಾಟ ನಡೆಸಿದೆ. ನಗರದ ಅಂಬೇಡ್ಕರ್ ವೃತ್ತದಲ್ಲಿ ಸೇರಿದ ಕಾಂಗ್ರೆಸ್ ಕಾರ್ಯಕರ್ತೆಯರು ತಲೆಯ ಮೇಲೆ ಟವೇಲ್, ಬುಟ್ಟಿ ಹೊತ್ತು ಪ್ರತಿಭಟನೆ ನಡೆಸಿದರು. ಈ ವೇಳೆ ನರೇಗಾ ಉಳಿಸಿ ಎಂದು ಕೇಂದ್ರದ ವಿರುದ್ಧ ದಿಕ್ಕಾರ ಕೂಗಿದ್ರು. ಕೇಂದ್ರ ಬಿಜೆಪಿ ಗಾಂಧಿಜೀ ಹೆಸ್ರು ತೆಗೆಯುವ ಕಾರಣಕ್ಕಾಗಿಯೇ ಯೋಜನೆಯನ್ನ ಹಳ್ಳ ಹಿಡಿಸೋ ಕೆಲಸವಾಗಿದೆ ಎಂದು ಆಕ್ರೋಶ ಹೊರಹಾಕಿದ್ರು..

