ಇಡೀ ವಿಶ್ವದಲ್ಲಿ ಲಯನ್ಸ್ ಕ್ಲಬ್ ಸದಸ್ಯರು ನಿಸ್ವಾರ್ಥ ಸಮಾಜ ಸೇವೆ ಸಲ್ಲಿಸುವ ಒಂದು ಅಗ್ರಸ್ಥಾನ ದಲ್ಲಿ ಇರುತ್ತಾರೆ. ಕಳೆದ 25 ವರ್ಷಗಳಿಂದ ಉಗಾರ್ ಲಯನ್ಸ್ ಕ್ಲಬ್ ಸದಸ್ಯರು ನಿಸ್ವಾರ್ಥ ಸೇವೆ ಸಲ್ಲಿಸಿ ಜಿಲ್ಲೆಯಲ್ಲಿ ಒಂದು ಮಾದರಿ ಶಾಖೆ ವಾಗಿದೆ ಎಂದು ಲೈನ್ಸ್ ಕ್ಲಬ್ ನ ಬೆಳಗಾವಿ ಜಿಲ್ಲಾ ಪ್ರಾದೇಶಿಕ ಅಧ್ಯಕ್ಷ ಭಾರತಿ ಒಡವಿ ಹೇಳಿದರು.
ಶನಿವಾರ ಸಂಜೆ ಉಗಾರ್ ಲೈನ್ಸ್ ಕ್ಲಬ್ಬಿನ ಶಾಖೆಗೆ ಭೇಟಿ ನೀಡಿ ಇಲ್ಲಿಯ ಕಾರ್ಯ ಚಟುವಟಿಗಳು ವೀಕ್ಷಿಸಿ ಮಾತನಾಡಿದರು.

ಉಗಾರ ಶಾಖೆ ಸಂಸ್ಥಾಪಕ ಹಾಗೂ ಸಕ್ಕರೆ ಉದ್ಯಮಿ ಹಿರಿಯರಾದ ರಾಜಾಭಾವು ಶಿರಗೌಕರ್ ಇವರು ಸ್ಥಾಪಿಸಿದು ಈ ಶಾಖೆಯಿಂದ ನಿರಂತರವಾಗಿ ಸಮಾಜ ಸೇವೆ ಕಾರ್ಯ ಸದಸ್ಯರು ಕೈಗೊಂಡಿದ್ದಾರೆ. ಇದೇ ರೀತಿ ಇನ್ನುಳಿದ ಶಾಖೆಗಳು ತಮ್ಮ ಕಾರ್ಯ ಚಟುವಟಿಕೆಗಳು ಮುಂದುವರಿಸಬೇಕು ಎಂದು ಶ್ರೀಮತಿ ಭಾರತಿ ಒಡವಿ ಹೆಮ್ಮೆಯಿಂದ ಹೇಳಿದರು.
ಉಗಾರ್ ಲೈನ್ಸ್ ಕ್ಲಬ್ ನ ಅಧ್ಯಕ್ಷ ಡಾಕ್ಟರ್ ಎನ್ ಹೆಚ್ ಸಾವಡೆ ಇವರು ಸ್ವಾಗತಿಸಿ ಸಂಸ್ಥೆ ಪ್ರಗತಿ ಬಗ್ಗೆ ಹೇಳಿದರು. ವಾರ್ಷಿಕ ವರದಿ ಕಾರ್ಯದರ್ಶಿ ಶುಭಾಷೆ ಹೆಬ್ಬಳ್ಳಿ ಮಂಡಿಸಿದರು. ಖಜಾಂಚಿ ಆನಂದ್ ಕುಮಾರ್ ಶಾಖೆಯ ಆರ್ಥಿಕ ಮಾಹಿತಿ ನೀಡಿದರು.
ಸಮಾರಂಭದಲ್ಲಿ ಉಗಾರ ಸಕ್ಕರೆ ಕಾರ್ಖಾನೆಯ ಆರೋಗ್ಯ ಮಂದಿರದ ವೈದ್ಯಾಧಿಕಾರಿ ಡಾಕ್ಟರ್ ಸಾಗರ್ ಮಾಳಿ ನೂತನ ಸದಸ್ಯರಾಗಿ ಆಯ್ಕೆಗೊಂಡರು.
ನಿಕಟ ಪೂರ್ವ ಅಧ್ಯಕ್ಷ ರಾಹುಲ್ ಶಹಾ, ಬೆಳಗಾವಿ ಸದಸ್ಯ ಉದಯ ಒಡವಿ, ಹಿರಿಯ ಸದಸ್ಯರಾದ ಡಾ. ಬಿ.ಎ. ಪಾಟೀಲ್ ಬಿ
ಬಿ. ಕಾಗೆ, ಜಗದೀಶ್ ಪಠವರ್ಧನ್, ಶಶಿಕಾಂತ ಜೋಶಿ, ಭೂಪಾಲ್ ಚೌಗುಲೆ, ಮನಿಷ ಶಹಾ, ಸಚಿನ್ ಪೊತ್ತದಾರ, ರಾಜೇಂದ್ರ ಪೋತದಾರ್, ಶ್ರೀಮತಿ ಉಜ್ವಲ ಮತದಾರ, ಪಾಯಪ್ಪಾ
ಕೂಡುಒಕಲಗಿ, ಮನೋಜ್ ಮಾಲಗತ್ತೆ, ಡಾಕ್ಟರ್ ಅಮೂಲ ಸರಡೆ, ಅಮೂಲ ಡಾಕ್ಟರ್ ಕಟಗೇರಿ ಶ್ರೀಮತಿ ಉಜ್ವಲಾ ಶೆಟ್ಟಿ ಶ್ರೀರಂಗ ಇದ್ದರು.
