Dharwad

ಧಾರವಾಡದ ಸರ್ವೆ ಇಲಾಖೆ ಸೂಪರ್‌ವೈಸರ್ ಸೋಮಲಿಂಗಪ್ಪಗೆ ಲೋಕಾ ಶಾಕ್.

Share

ಧಾರವಾಡದ ಸರ್ವೆ ಇಲಾಖೆ ಸೂಪರ್‌ವೈಸರ್ ಆಗಿರುವ ಸೋಮಲಿಂಗಪ್ಪ ಅವರಿಗೆ ಗುರುವಾರ ಬೆಳ್ಳಂಬೆಳಿಗ್ಗೆ ಲೋಕಾಯುಕ್ತ ಪೊಲೀಸರು ಶಾಕ್ ನೀಡಿದ್ದಾರೆ.

ಆದಾಯ ಮೀರಿ ಆಸ್ತಿ ಗಳಿಕೆ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಧಾರವಾಡದ ಐಸ್ ಗೇಟ್ ಬಳಿ ಇರುವ ಸೋಮಲಿಂಗಪ್ಪ ಅವರ ಸರ್ವೆ ಇಲಾಖೆ ಕಚೇರಿ ಹಾಗೂ ಭಾರತಿನಗರದಲ್ಲಿರುವ ಅವರ ನಿವಾಸದ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಬೆಳಗಾವಿ ಜಿಲ್ಲೆ ಮುರಗೋಡದಲ್ಲಿನ ಮನೆ ಮೇಲೂ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಒಟ್ಟು ನಾಲ್ಕು ಕಡೆಗಳಲ್ಲಿ ಲೋಕಾಯುಕ್ತ ಎಸ್‌ಪಿ ಸಿದ್ಧಲಿಂಗಪ್ಪ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿದ್ದು, ಅಪಾರ ಪ್ರಮಾಣದ ಆಸ್ತಿಗೆ ಸಂಬಂಧಿಸಿದ ದಾಖಲೆಪತ್ರಗಳನ್ನು ಪರಿಶೀಲನೆ ನಡೆಸಿದ್ದಾರೆ.

Tags:

error: Content is protected !!