Dharwad

ಧಾರವಾಡ ಜಿಲ್ಲಾಧಿಕಾರಿ ದಿವ್ಯ ಪ್ರಭು ವರ್ಗಾವಣೆ, ನೂತನ ಡಿಸಿಯಾಗಿ ಆರ್ ಸ್ನೇಹಲ್ ನಿಯೋಜನೆ….

Share

ಧಾರವಾಡ ಜಿಲ್ಲಾಧಿಕಾರಿ ದಿವ್ಯ ಫ್ರಭು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಮಾಡಿದ್ದು, ಅವರ ಜಾಗಕ್ಕೆ ನೂತನ ಡಿಸಿಯಾಗಿ ಆರ್ ಸ್ನೇಹಲ್ ಅವರನ್ನು ನಿಯೋಜನೆ ಮಾಡಲಾಗಿದೆ.

ವೈ- ಈ ಹಿಂದೆ ಧಾರವಾಡ ಜಿಲ್ಲಾ ಪಂಚಾಯತ್ ಸಿಇಓ ಆಗಿ ಕರ್ತವ್ಯ ನಿರ್ವಹಿಸಿದ್ದ ಆರ್ ಸ್ನೇಹಲ್ ಅವರು, ಈಗ ಧಾರವಾಡಕ್ಕೆ ನೂತನ ಜಿಲ್ಲಾಧಿಕಾರಿಯಾಗಿ ನಿಯೋಜನೆಗೊಂಡಿದ್ದಾರೆ. ಯುಪಿಎಸ್‌ 2013ನೇ ಸಾಲಿನ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಇವರು ಅಖಿಲ ಭಾರತ ಮಟ್ಟದಲ್ಲಿ 410ನೇ ರ್ಯಾಂಕ್ ಪಡೆದಿದ್ದರು. ಕರ್ನಾಟಕ ಕೆಡರ್‌ನ 2014ನೇ ಬ್ಯಾಚನ್ ಐಎಎಸ್ ಅಧಿಕಾರಿಯಾಗಿರುವ ಆರ್ ಸ್ನೇಹಲ್ ಕರ್ನಾಟಕ ಸರ್ಕಾರದ ವಿವಿಧ ಪ್ರಮುಖ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಸೈಕಾಲಜಿಯಲ್ಲಿ ವಿಜ್ಞಾನದ ಸ್ನಾತಕೋತ್ತರ ಪದವಿಯನ್ನು ಹೊಂದಿರುವ ಇವರು, ಕರ್ನಾಟಕ ರಾಷ್ಟ್ರೀಯ ಜೀವನೋಪಾಯ ಮಿಷನ್‌ನ ಮಿಷನ್ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದು, ಸದ್ಯ ಈಗ ಇವರು ಧಾರವಾಡ ಜಿಲ್ಲಾಧಿಕಾರಿಯಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಮಾಡಿದೆ.‌

Tags:

error: Content is protected !!