Athani

ಧರ್ಮಸ್ಥಳ ಸಂಸ್ಥೆಯಿಂದ ವಾತ್ಸಲ್ಯ ಮನೆ ಹಸ್ತಾಂತರ

Share

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಗ್ರಾಮಸ್ವರಾಜ್ಯದ ಕನಸು ನನಸು ಮಾಡುವ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಈ ನಿಟ್ಟಿನಲ್ಲಿ ಮನೆಯಿಲ್ಲದ ಫಲಾನುಭವಿಗಳಿಗೆ ಜ್ಞಾನವಿಕಾಸ ವಿಭಾಗದಿಂದ ಮನೆ ಕಟ್ಟಿಕೊಡ ಲಾಗುತ್ತಿದೆ ಎಂದು ಯೋಜನೆಯ ಜಿಲ್ಲಾ ನಿರ್ದೇಶಕಿ ನಾಗರತ್ನ ಹೆಗಡೆ ಹೇಳಿದರು.

ಅವರು ಬುಧವಾರ ತಾಲೂಕಿನ ಅರಟಾಳ ಗ್ರಾಮದಲ್ಲಿ ಲಕ್ಷ್ಮೀಬಾಯಿ ಕಾಸಪ್ಪ ಹಿರೇಕುರುಬರ ಎಂಬ ಫಲಾನುಭವಿಗೆ ವಾತ್ಸಲ್ಯ ಮನೆ ಹಸ್ತಾಂತರಿಸಿ ಮಾತನಾಡಿದರು. ಧರ್ಮಸ್ಥಳದ ಧರ್ಮಾಧಿಕಾರಿ ಪೂಜ್ಯ ವೀರೇಂದ್ರ ಹೆಗಡೆಯವರ ಮಾರ್ಗದರ್ಶನದಲ್ಲಿ ಗ್ರಾಮೀಣ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನ ಗೊಳಿಸಲಾಗುತ್ತದೆ. ರಾಜ್ಯದಲ್ಲಿ ಸುಮಾರು 1000 ಮನೆಗಳನ್ನು ನಿರ್ಗತಿಕರಿಗಾಗಿ ಕಟ್ಟುವ ಗುರಿಯನ್ನು ಹಮ್ಮಿಕೊಂ ಡಿದ್ದು, ಈಗಾಗಲೇ 800 ಮನೆಗಳ ಕಾಮಗಾರಿ ಪೂರ್ಣಗೊಂಡಿದ್ದು, ಇನ್ನು ಕೆಲವೇ ದಿನಗಳಲ್ಲಿ ಒಂದು ಸಾವಿರ ಮನೆಗಳನ್ನು ನಿರ್ಗತಿಕ ಕುಟುಂಬಗಳಿಗೆ ಹಸ್ತಾಂತರಿಸಲಾ ಗುವದು ಎಂದರು. ಪ್ರಾದೇಶಿಕ ಕಚೇರಿಯ ಜ್ಞಾನವಿಕಾಸ ವಿಭಾಗದ ಯೋಜನಾಧಿಕಾರಿ ಸುಧಾ ನಾಯಕ, ತಾಲೂಕಾ ಯೋಜನಾಧಿಕಾರಿ ರಜಬ್‌ ಅಲಿ ಮೇಲಿನ ಮನಿ, ಗ್ರಾಪಂ ಅಧ್ಯಕ್ಷ ಕಾಂತಾಬಾಯಿ ಹಟ್ಟಿ, ರಾಮಪ್ಪ ಪೂಜಾರಿ, ಸದಾನಂದ ಮಾಡಗ್ಯಾಳ, ಜ್ಞಾನವಿಕಾಸ ಸಮನ್ವಯಾಧಿಕಾರಿ ಆಶಾ ಬೋಗುರ, ವಲಯ ಮೇಲ್ವಿಚಾರಕ ಮಹಾಂತೇಶ ಮಠಪತಿ, ಸೇವಾ ಪ್ರತಿನಿಧಿ ಶಬಾನ ಮುಜಾವರ ಉಪಸ್ಥಿತರಿದ್ದರು.

Tags:

error: Content is protected !!