ಬಾಗಲಕೋಟೆ ಜಿಲ್ಲೆಯ ಹೈನುಗಾರರ ಪಾಲಿಗೆ ಆಶಾದಾಯಕವಾಗಬೇಕಿದ್ದ ‘ಹೈಟೆಕ್ ಡೇರಿ’ ಯೋಜನೆ ಈಗ ಅಧಿಕಾರಿಗಳ ಮತ್ತು ರಾಜಕಾರಣಿಗಳ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ. 2013ರಲ್ಲಿ ಆರಂಭವಾದ ಕಾಮಗಾರಿ ಇಂದಿಗೂ ಅರ್ಧಂಬರ್ಧ ನಿಂತಿದ್ದು, ಜಿಲ್ಲೆಯ ಜನರ ಹಿತದೃಷ್ಟಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಕೂಡಲೇ ಈ ಕಡೆ ಕಣ್ಣು ಹರಿಸಬೇಕಿದೆ.


ಬಾಗಲಕೋಟೆ ಜಿಲ್ಲೆಯ ಹೈನುಗಾರರಿಗೆ ಆಸರೆಯಾಗಬೇಕಿದ್ದ ಹೈಟೆಕ್ ಹಾಲಿನ ಡೇರಿ ಕಾಮಗಾರಿ ಕಳೆದ 11 ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ. 2013ರಲ್ಲಿ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಈ ಡೇರಿಗೆ ನೀಡಲಾಗಿದ್ದ ಅನುದಾನದಲ್ಲಿ ಸುಮಾರು 28 ಕೋಟಿ ರೂಪಾಯಿಗಳನ್ನು ಚಾಮರಾಜನಗರದ ಡೇರಿ ನಿರ್ಮಾಣಕ್ಕೆ ವರ್ಗಾಯಿಸಲಾಗಿತ್ತು ಎಂಬ ಆರೋಪ ಈಗ ಮತ್ತೆ ಕೇಳಿಬರುತ್ತಿದೆ. ಇದರಿಂದಾಗಿ ಬಾಗಲಕೋಟೆಯ ಡೇರಿ ಕಟ್ಟಡದ ಕೆಲಸಗಳು ಅರ್ಧಕ್ಕೆ ನಿಂತು ಹೋಗಿದ್ದು, ಅಧಿಕಾರಿಗಳು ಹಾಗೂ ಗುತ್ತಿಗೆದಾರರ ನಿರ್ಲಕ್ಷ್ಯದಿಂದಾಗಿ ಹೈಟೆಕ್ ಡೇರಿ
ಇಲ್ಲಿಯವರೆಗೆ ಸಿವಿಲ್ ಕೆಲಸಗಳಿಗಾಗಿ ಗುತ್ತಿಗೆದಾರ 8 ಕೋಟಿ ರೂಪಾಯಿ ಪಡೆದಿದ್ದು, ಕೇವಲ 60% ಕೆಲಸ ಮಾತ್ರ ಪೂರ್ಣಗೊಂಡಿದೆ.

ಮಶಿನರಿ ಕೆಲಸಗಳಿಗಾಗಿ ಸುಮಾರು 12 ಕೋಟಿ ರೂಪಾಯಿ ಅನುದಾನ ಬಳಕೆಯಾಗಿದ್ದರೂ ಡೇರಿ ಮಾತ್ರ ಕಾರ್ಯಾಚರಣೆಗೆ ಸಿದ್ಧವಾಗಿಲ್ಲ. ಬಾಗಲಕೋಟೆ-ವಿಜಯಪುರ ಹಾಲು ಒಕ್ಕೂಟದಿಂದ 7 ಕೋಟಿ ರೂಪಾಯಿ ನೀಡಲಾಗಿದ್ದರೂ, ಉಳಿದ ಅನುದಾನಕ್ಕಾಗಿ ಸರ್ಕಾರದ ಮುಂದೆ ಮಾಡಿಕೊಂಡ ಮನವಿಗಳು ಇಂದಿಗೂ ಫಲ ನೀಡಿಲ್ಲ. ಈಗ ಪುನಃ ಹಾಲು ಒಕ್ಕೂಟವೇ ಕಾಮಗಾರಿ ಪ್ರಾರಂಭಿಸಿ 3-4 ತಿಂಗಳಲ್ಲಿ ಮುಗಿಸುವ ಭರವಸೆ ನೀಡಿದ್ದರೂ, ಜಿಲ್ಲೆಯ ಜನರು ಮಾತ್ರ “ನಮ್ಮ ಡೇರಿ ಯಾವಾಗ ಪೂರ್ಣಗೊಳ್ಳುತ್ತೆ?” ಎಂದು ಪ್ರಶ್ನಿಸುತ್ತಿದ್ದಾರೆ.

