Vijaypura

ಕೃಷ್ಣಾ ತೀರದ ಭಾಗದ ಗ್ರಾಮಗಳಲ್ಲಿ ಶುದ್ದ ಕುಡಿಯೋ ನೀರು ಮರೀಚಿಕೆ

Share

ಆ ಜಿಲ್ಲೆಯಲ್ಲಿ ಮೂರು ನದಿಗಳು ಹರಿಯುತ್ತವೆ. ಆದ್ರೆ ಗ್ರಾಮೀಣ ಭಾಗದ ಜನರಿಗೆ ಶುದ್ದ ಕುಡಿಯೋ ನೀರು ಸಿಗುತ್ತಿಲ್ಲಾ ಅನ್ನೊದು ದುರಂತ. ಸರ್ಕಾರ ಸಾವಿರಾರು ಕೋಟಿ ಯಾವುದ್ಯಾವುದೋ ಯೋಜನೆಗೆ ಖರ್ಚು ಮಾಡುತ್ತೆ. ಆದ್ರೆ ಶುದ್ಧ ಕುಡಿಯುವ ನೀರು ಕೊಡೊಕೆ ಆಗ್ತಿಲ್ಲಾ. ಅದರಲ್ಲೂ ಕೃಷ್ಣಾ ತೀರದ ಭಾಗದ ಗ್ರಾಮಗಳಲ್ಲಿ ಶುದ್ದ ಕುಡಿಯೋ ನೀರು ಮರೀಚಿಕೆಯಾಗಿದೆ. ಶುದ್ದ ಕುಡಿಯೋ ನೀರಿನ ಘಟಕಗಳು ಕೆಟ್ಟು ಹೋಗಿದ್ದು ಇದೆಲ್ಲದಕ್ಕೂ ಕಾರಣವಾಗಿದೆ. ಈ ಕುರಿತ ವರದಿ ಇಲ್ಲಿದೆ ನೋಡಿ…..

ಹೌದು ವಿಜಯಪುರ ಜಿಲ್ಲೆಯಲ್ಲಿ ಬರೋಬ್ಬರಿ ಮೂರು ನದಿಗಳು ಹರಿಯುತ್ತವೆ. ಕೃಷ್ಣಾ, ಭೀಮಾ ಹಾಗೂ ಡೋಣಿ ನದಿ ಹರಿಯುತ್ತವೆ. ಕೃಷ್ಣಾ ಮೇಲ್ದಂಡೆ ಯೋಜನೆ ಹಾಗೂ ಇತರೆ ಏತ ನೀರಾವರಿ ಯೋಜನೆಯಿಂದಾಗಿ ಇನ್ನೂರಕ್ಕೂ ಕೆರೆಗಳಿಗೆ ನೀರು ಬಿಡಲಾಗಿದೆ. ಆದ್ರೆ ಗ್ರಾಮೀಣ ಭಾಗದಲ್ಲಿ ಶುದ್ದ ಕುಡಿಯೋ ನೀರಿನ ಸಮಸ್ಯೆಯಾಗಿದೆ. ಅದರಲ್ಲೂ ಮುಖ್ಯವಾಗಿ ಕೃಷ್ಣಾ ನದಿ ಪಾತ್ರದ ಗ್ರಾಮಗಳಲ್ಲಿ ಕುಡಿಯೋಕೆ ಶುದ್ದ ನೀರು ಸಿಗುತ್ತಿಲ್ಲಾ, ನದಿಯಲ್ಲಿನ ನೀರನ್ನೇ ಕುಡಿಯುವಂತಾಗಿದೆ. ಮುದ್ದೇಬಿಹಾಳ ತಾಲೂಕಿನ ನದಿಪಾತ್ರದ ಗ್ರಾಮಗಳಾದ ಅಮರಗೋಳ, ತಂಗಡಗಿ, ಕುಂಚಗನೂರು. ಕಮ್ಮಲ್ಲದಿನ್ನಿ. ಗಂಗೂರು ಗ್ರಾಮಗಳಲ್ಲಿ ಶುದ್ದ ಕುಡಿಯುವ ನೀರಿನ ಸಮಸ್ಯೆಯಾಗಿದೆ. ಗ್ರಾಮೀಣ ಭಾಗದ ಜನರು ನದಿ ಪಕ್ಕದಲ್ಲೇ ಇದ್ದರೂ ಕಲುಷಿತ ನೀರು ಸೇವಿಸಬೇಕಾದ ಅನಿವಾರ್ಯತೆಯುಂಟಾಗಿದೆ. ಎತ್ತಿನ ಬಂಡಿ, ಬೈಕ್ ಗಳಲ್ಲಿ ನದಿಗೆ ಹೋಗಿ ನೀರು ತರಬೇಕಾದ ಪರಿಸ್ಥಿತಿಯಾಗಿದೆ. ನದಿಪಾತ್ರಗಳಲ್ಲಿ ಮೊಸಳೆ ಕಾಟದ ಭಯದಲ್ಲೇ ನೀರು ತರುವುದು ಸಾಸಹದ ಕೆಲಸವಾಗಿದೆ. ಕೃಷ್ಣಾ ನದಿ ಪಾತ್ರದ ಗ್ರಾಮಗಳಲ್ಲಿ ಈ ಮುಂಚೆ ಸರ್ಕಾರದಿಂದ ಹಾಕಲಾಗಿದ್ದು ಶುದ್ದ ಕುಡಿಯೋ ನೀರಿನ ಘಟಕಗಳು ಬಂದ್ ಆಗಿವೆ. ಹಲವು ಭಾಗಶಃ ರಿಪೇರಿಯಲ್ಲಿವೆ. ಹೀಗಾಗಿ ಗ್ರಾಮೀಣ ಭಾಗದಲ್ಲಿ ಶುದ್ದ ಕುಡಿಯೋ ನೀರಿನ ಘಟಕಗಳು ಬಂದ್ ಆಗಿರೋದರಿಂದ ಅನಿವಾರ್ಯವಾಗಿ ಸುರಕ್ಷಿತವಲ್ಲದ ನದಿ ನೀರನ್ನೇ ಜನರು ಕುಡಿಯಬೇಕಿದೆ. ಆಯಾ ಗ್ರಾಮಗಳಲ್ಲಿ ಗ್ರಾಮ ಪಂಚಾಯತಿಗಳಿಂದ ನೀರು ಬಿಡುತ್ತಿದ್ದರೂ ಸಹ ಸಮರ್ಪಕವಾಗಿ ಸಿಗುತ್ತಿಲ್ಲ. ವಿಜಯಪುರ ಜಿಲ್ಲೆಯಲ್ಲಿ ಒಟ್ಟು 846 ಶುದ್ದ ಕುಡಿಯೋ ನೀರಿನ ಘಟಕಗಳನ್ನು ಹಾಕಲಾಗಿದೆ. ಈ ಪೈಕಿ 220 ಘಟಕಗಳನ್ನು ಆಯಾ ಗ್ರಾಮ ಪಂಚಾಯತಿಗಳ ಸುಪರ್ಧಿಗೆ ನೀಡಲಾಗಿದೆ. ಇನ್ನು 596 ಘಟಕಗಳು ಭಾಗಶಃ ಚಾಲನೆಯಲ್ಲಿವೆ. 250 ಶುದ್ದ ಕುಡಿಯೋ ನೀರಿನ ಘಟಕಗಳು ಸಂಪೂರ್ಣ ಬಂದ್ ಆಗಿವೆ. ಇವೆಲ್ಲವುಗಳ ದುರಸ್ಥಿಯಾದರೆ ಮಾತ್ರ ಕಾರ್ಯನಿರ್ವಹಿಸುತ್ತವೆ.

ಮುದ್ದೇಬಿಹಾಳ ತಾಲೂಕಿನ ಕೃಷ್ಣಾ ನದಿ ತಟದಲ್ಲಿರೋ ಗ್ರಾಮಗಳು ಸೇರಿದಂತೆ ಜಿಲ್ಲೆಯ ಇತರೆ ಎಲ್ಲಾ ತಾಲೂಕುಗಳಲ್ಲಿ ಕೆಟ್ಟು ಹೋಗಿರೋ 250 ಶುದ್ದ ಕುಡಿಯೋ ನೀರಿನ ಘಟಕಗಳ ದುರಸ್ಥಿ ಮಾಡಿಸಬೇಕಿದೆ. ಇನ್ನೇನು ಬಿರು ಬೇಸಿಗೆ ಆರಂಭವಾಗಿದೆ. ಜನರಿಗೆ ಕುಡಿಯೋ ನೀರಿನ ಅವಶ್ಯಕತೆ ಹೆಚ್ಚದೆ. ಹೀಗಾಗಿ ಜಿಲ್ಲೆಯಲ್ಲಿ ಕುಟ್ಟು ಹೋಗಿರೋ 250 ಶುದ್ದ ಕುಡಿಯೋ ನೀರಿನ ಘಟಕಗಳನ್ನು ತುರ್ತಾಗಿ ದುರಸ್ಥಿ ಮಾಡಬೇಕಿದೆ. ಗೆ 26 ಕೋಟಿ ರೂಪಾಯಿ ಅನುದಾನದ ಅಗತ್ಯವಿದೆ. ವಿಜಯಪುರ ಜಿಲ್ಲೆಯ ಗ್ರಾಮೀಣ ಕುಡಿಯೋ ನೀರು ಹಾಗೂ ನೈರ್ಮಲ್ಯ ಇಲಾಖೆ ಅಧಿಕಾರಿಗಳು ಈ ಘಟಕಗಳ ದುರಸ್ಥಿ ಮಾಡಿಸೋಕೆ 26 ಕೋಟಿ ರೂಪಾಯಿ ನೀಡಬೇಕೆಂದು ಕಳೆದ 2025 ರ ಡಿಸೆಂಬರ್ ನಲ್ಲೇ ಇಲಾಖೆಯ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಆದರೆ ಇಲಾಖೆ ಆಯುಕ್ತರು ಹಾಗೂ ಸರ್ಕಾರ ಮಾತ್ರ ಅನುದಾನ ನೀಡಿಲ್ಲಾ.

ಈಗ ಬೇಸಿಗೆ ಆರಂಭವಾಗುತ್ತಿದೆ‌. ವಿಜಯಪುರದಲ್ಲಿ ಬಿಸಿಲಿನ ತಾಪಮಾನ ಅಧಿಕವಾಗಿರುತ್ತದೆ. ಜಿಲ್ಲೆಯಲ್ಲಿ ಶುದ್ದ ಕುಡಿಯೋ ನೀರಿನ ಸಮಸ್ಯೆ ಉಲ್ಬಣವಾಗುತ್ತಿದೆ. ಶುದ್ದ ಕುಡಿಯೋ ನೀರಿನ ಘಟಕಗಳು ದುರಸ್ಥಿಯಾದರೆ ಮಾತ್ರ ಜನರಿಗೆ ಶುದ್ದ ಕುಡಿಯುವ ನೀರು ಸಿಗುತ್ತದೆ. ಇಲ್ಲವಾದರೆ ಅಶುದ್ದ ನೀರನ್ನೇ ಸೇವನೆ ಮಾಡಬೇಕಾದ ಅನಿವಾರ್ಯತೆಯಾಗಲಿದೆ. ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ರಿಪಬ್ಲಿಕ್ ವರದಿಯ ನಂತರ ಎಚ್ಚೆತ್ತುಕೊಂಡು ಶುದ್ಧ ಕುಡಿಯುವ ನೀರಿನ ಘಟಕಗಳ ದುರಸ್ಥಿ ಮಾಡಿಸಬೇಕು. ಇಲ್ಲವಾದರೆ ಜನರ ಆರೋಗ್ಯದ ಜೊತೆಗೆ ಚೆಲ್ಲಾಟವಾಡುವ ಸರ್ಕಾರದ ವಿರುದ್ದ ಜನರು ರೊಚ್ಚಿಗೇಳುವ ಪರಿಸ್ಥಿತಿ ಇದೆ. .

Tags:

error: Content is protected !!