Dharwad

ಧಾರವಾಡದಲ್ಲಿ ಓಲಾ ಶೋ ರೂಮ್‌ನಿಂದ ಜನರಿಗೆ ಕಿರಿಕಿರಿ… ಫುಟ್‌ಪಾತ್ ಜಾಗ ಅತಿಕ್ರಮಿಸಿದ್ದ ಓಲಾ ಬೈಕ್‌ಗಳು ಸೀಜ್ ಮಾಡಿ ಬಿಸಿ ಮುಟ್ಟಿಸಿದ ಪೊಲೀಸರು.

Share

ಫುಟಪಾತ್ ಜಾಗವನ್ನು ಬೈಕ್‌ಗಳ ಪಾರ್ಕಿಂಗ್ ಜಾಗ ಮಾಡಿಕೊಂಡಿದ್ದ ಧಾರವಾಡ ಓಲಾ ಶೋ ರೂಮಗೆ ಧಾರವಾಡ ಸಂಚಾರಿ ಠಾಣೆಯ ಪೊಲೀಸರು ಫುಟಪಾತ್ ಮೇಲೆ ನಿಲ್ಲಿಸಿದ ಬೈಕಗಳ‌ಸೀಜ್ ಮಾಡುವ ಮೂಲಕ ಶೋ ರೂಮಗೆ ಬಿಸಿ ಮುಟ್ಟಿಸಲಾಯಿತ್ತು.

– ಧಾರವಾಡದ ಜ್ಯುಬಿಲಿ ವೃತ್ತದ ಬಳಿ ಓಲಾ ಶೋ ರೂಮ್ ಇದ್ದು, ಇಲ್ಲಿಗೆ ದುರಸ್ತಿಯಲ್ಲಿರುವ ಬೈಕ್‌ಗಳನ್ನು ತರಲಾಗುತ್ತದೆ. ದುರಸ್ತಿಗೊಳಗಾದ ಬೈಕ್‌ಗಳನ್ನು ಶೋ ರೂಮ್‌ನವರು ಫುಟಪಾತ್‌ ಮೇಲೆಯೇ ಹೇಗಬೇಕೋ ಹಾಗೇ ನಿಲ್ಲಿಸಿದ್ದರು.

ಧಾರವಾಡ ಸಂಚಾರ ಠಾಣೆಯವರು ಫುಟಪಾತ್‌ ಮೇಲೆ ಬೈಕ್ ನಿಲ್ಲಿಸಬೇಡಿ ಎಂದು ಶೋ ರೂಮ್‌ನವರಿಗೆ ಅನೇಕ ಬಾರಿ ತಿಳಿಹೇಳಿದರು. ಪೊಲೀಸರ ಎಚ್ಚರಿಕೆಗೆ ತಲೆಕೆಡಿಸಿಕೊಳ್ಳದ ಶೋ ರೂಮಗೆ

ಮಂಗಳವಾರ ಸಂಚಾರ ಠಾಣೆ ಇನ್‌ಸ್ಪೆಕ್ಟರ್ ಶ್ರೀನಿವಾಸ ಮೇಟಿ ಅವರು ಫುಟ್‌ಪಾತ್ ಮೇಲೆ ನಿಲ್ಲಿಸಿದ್ದ ಸುಮಾರು 19 ಓಲಾ ಬೈಕ್‌ಗಳನ್ನು ಸೀಜ್ ಮಾಡಿದ್ದಾರೆ. ಟಾಟಾ ಏಸ್ ವಾಹನ ತಂದು ಫುಟ್‌ಪಾತ್ ಮೇಲೆ ನಿಲ್ಲಿಸಿದ್ದ ಓಲಾ ಬೈಕ್‌ಗಳನ್ನು ಅದರಲ್ಲಿ ಹೊತ್ಕೋಂಡು ಹೋಗಲಾಗಿದೆ. ಅಷ್ಟೇ ಅಲ್ಲದೇ ಸಾರ್ವಜನಿಕರ ಸಂಚಾರಕ್ಕೆ ಆ ಜಾಗವನ್ನು ಸುಗಮಗೊಳಿಸಿದ್ದಾರೆ.

Tags:

error: Content is protected !!