Vijaypura

ಟಿಪ್ಪರ್‌ಗೆ ಬೈಕ್‌ ಡಿಕ್ಕಿ ; ಒಬ್ಬನ ಸಾವು; ಇನ್ನೊಬ್ಬ ಸವಾರರಿಬ್ಬನಿಗೆ ಗಂಭೀರ ಗಾಯ

Share

ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ಪಟ್ಟಣದ ಅಂಬೇಡ್ಕ‌ರ್ ವೃತ್ತದಲ್ಲಿ ಟಿಪ್ಪರ್ ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ ಸವಾರ ಅನೀಲ ಕೇಸು ರಾಠೋಡ (34) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ದೇವೂರ ತಾಂಡಾದಿಂದ ಪಡಗಾನೂರ ಗ್ರಾಮಕ್ಕೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಬೈಕ್ ನಲ್ಲಿದ್ದ ಮತ್ತೊಬ್ಬ ಸವಾರ ಅವಿನಾಶ ಮನೋಹರ ರಾಠೋಡ (26) ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಟಿಪ್ಪರ್ ಇಂಡಿ ಕಡೆಗೆ ತಿರುಗುವಾಗ ಈ ದುರ್ಘಟನೆ ಸಂಭವಿಸಿದೆ.

Tags:

error: Content is protected !!