• ಹಳೆಯ ವೈಷಮ್ಯಕ್ಕೆ ತಲವಾರಿನಿಂದ ಹಲ್ಲೆ
• ಜಿಲ್ಲಾಸ್ಪತ್ರೆಗೆ ದಾಖಲಾದ ಅಫ್ಜಲ್ ದೇಸಾಯಿ
• ಆಸ್ಪತ್ರೆಗೆ ಬರುವಾಗ ಅಪಘಾತದಲ್ಲಿ ಸಹೋದರನ ಮಗನ ಸಾವು
• ದೇಸಾಯಿ ಕುಟುಂಬದಲ್ಲಿ ಆವರಿಸಿದ ಶೋಕ

ಬೆಳಗಾವಿಯಲ್ಲಿ ಒಂದೇ ಕುಟುಂಬದ ಮೇಲೆ ದುಃಖದ ಮಳೆ ಸುರಿದಿದೆ. ಹಳೆಯ ವೈಷಮ್ಯದ ಹಿನ್ನೆಲೆ ಯುವಕನ ಮೇಲೆ ತಲವಾರಿನಿಂದ ಮಾರಣಾಂತಿಕ ಹಲ್ಲೆ ನಡೆದ ಬೆನ್ನಲ್ಲೇ, ಗಾಯಾಳುವನ್ನು ನೋಡಲು ಬಂದಿದ್ದ ಸಂಬಂಧಿ ಯುವಕ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಸಂಭವಿಸಿದೆ.

ಬೆಳಗಾವಿಯ ಕಸಾಯಿ ಗಲ್ಲಿಯ ನಿವಾಸಿ ಅಫ್ಜಲ್ ಅಮಜದ್ ದೇಸಾಯಿ (29) ಎಂಬುವವರ ಮೇಲೆ ಸುಭಾಷ ನಗರದ ಬಳಿ ನಾಲ್ವರು ದುಷ್ಕರ್ಮಿಗಳು ತಲವಾರಿನಿಂದ ಹಲ್ಲೆ ನಡೆಸಿದ್ದಾರೆ. ಕಳೆದ ರಂಜಾನ್ ವೇಳೆ ನಡೆದಿದ್ದ ಸಣ್ಣ ವಾಗ್ವಾದವು ಸಮಾಜದ ಮುಖಂಡರ ಸಮ್ಮುಖದಲ್ಲಿ ಬಗೆಹರಿದಿತ್ತಾದರೂ, ಹಳೆಯ ದ್ವೇಷವನ್ನು ಮನಸ್ಸಿನಲ್ಲಿಟ್ಟುಕೊಂಡ ತಂಡವು ಈ ಕೃತ್ಯ ಎಸಗಿದೆ ಎನ್ನಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಅಫ್ಜಲ್ ಸದ್ಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಳಗಾವಿಯ ಕಸಾಯಿ ಗಲ್ಲಿಯ ರಹಿವಾಸಿ ಅಮಜದ್ ದೇಸಾಯಿ ಅವರು ಮಾತನಾಡಿ ಕಳೆದ ರಮಜಾನ್ ವೇಳೆ ವಾಗ್ವಾದ ನಡೆದಿತ್ತು. ಸಮಾಜ ಮುಖಂಡರ ಬಳಿ ಹೋದಾಗ ಅವರು ಸಮಸ್ಯೆ ಬಗೆಹರಿಸಿದ್ದರು. ಆದರೇ, ಕಳೆದ ರಾತ್ರಿ ನಾಲ್ವರು ಕೂಡಿ ನನ್ನ ಮಗ ಅಫ್ಜಲ್ ಅಮಜದ್ ದೇಸಾಯಿ (29) ಮೇಲೆ ಬೆಳಗಾವಿಯ ಸುಭಾಷ ನಗರದ ಹತ್ತಿರ ತಲವಾರನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಕೂಡಲೇ ಗಾಯಾಳುವನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆಗೆ ದಾಖಲಿಸಲಾಗಿದೆ. ಹಳೆಯ ವೈಷ್ಯಮ್ಯದ ಹಿನ್ನೆಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಗಂಭೀರ ಗಾಯವಾಗಿದೆ. ಇಲ್ಲಿಯ ವರೆಗೂ ಪೊಲೀಸರು ಯಾರನ್ನು ಬಂಧಿಸಿಲ್ಲ. ಸಹೋದರನ ಮಗ ಸಾವನ್ನಪ್ಪಿದರೇ, ನನ್ನ ಮಗನ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಒಂದೇ ದಿನ ದೇಸಾಯಿ ಕುಟುಂಬದ ಮೇಲೆ ಶೋಕದ ಛಾಯೆ ಆವರಿಸಿದೆ. ನಮ್ಮ ಮಕ್ಕಳ ಜೀವಕ್ಕೆ ಹಾನಿಯಿದೆ. ನಮಗೆ ರಕ್ಷಣೆ ನೀಡಿ ಎಂದರು.
ಇತ್ತ ಅಫ್ಜಲ್ ಮೇಲೆ ಹಲ್ಲೆಯಾದ ವಿಷಯ ತಿಳಿದು ಆಸ್ಪತ್ರೆಗೆ ಭೇಟಿ ನೀಡಿದ್ದ ಸಹೋದರನ ಮಗ, ಪಂತ ಬಾಳೇಕುಂದ್ರಿಯ ಸೋಹೇಲ್ ಇಮ್ತಿಯಾಜ್ ದೇಸಾಯಿ (22), ಮರಳಿ ಮನೆಗೆ ತೆರಳುವಾಗ ಸಾಂಬ್ರಾ ಬಳಿ ಲಾರಿ ಡಿಕ್ಕಿಯಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಒಂದೇ ದಿನದಲ್ಲಿ ಕುಟುಂಬದ ಇಬ್ಬರು ಯುವಕರು ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿರುವುದು ಮತ್ತು ಒಬ್ಬರು ಮೃತಪಟ್ಟಿರುವುದು ದೇಸಾಯಿ ಕುಟುಂಬದಲ್ಲಿ ಕತ್ತಲು ಆವರಿಸುವಂತೆ ಮಾಡಿದೆ.
