1. ಸಾಂಬ್ರಾದ ಶಂಭು ಮಹಾದೇವ ಮಂದಿರಕ್ಕೆ 25ರ ಸಂಭ್ರಮ.
2. ನಾಳೆ ಮಂದಿರದಲ್ಲಿ ವಿಶೇಷ ರುದ್ರಹವನ, ಮಹಾಪೂಜೆ.
3. ಸಂಜೆ ಗಣ್ಯರಿಗೆ ಸತ್ಕಾರ ಹಾಗೂ ಮಹಾಮಂಗಳಾರತಿ.
4. ರಜತ ಮಹೋತ್ಸವದ ಅಂಗವಾಗಿ ಭರ್ಜರಿ ದಾಸೋಹ.

ಸಾಂಬ್ರಾ ಮಾರುತಿ ಗಲ್ಲಿಯ ಶ್ರೀ ಶಂಭು ಮಹಾದೇವ ಮಂದಿರದ ಜೀರ್ಣೋದ್ಧಾರಗೊಂಡು 25 ವರ್ಷಗಳು ಪೂರೈಸಿದ ಹಿನ್ನೆಲೆಯಲ್ಲಿ ಈ ರಜತ ಮಹೋತ್ಸವದ ಪ್ರಯುಕ್ತ ಬುಧವಾರ ಫೆಬ್ರವರಿ 25ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಮಹಾಪ್ರಸಾದದ ವ್ಯವಸ್ಥೆಯನ್ನು ಮಾಡಲಾಗಿದೆ.
ಈ ದಿನದಂದು ಮುಂಜಾನೆ 4.30ಕ್ಕೆ ರುದ್ರಾಭಿಷೇಕದೊಂದಿಗೆ ಕಾರ್ಯಕ್ರಮಗಳು ಪ್ರಾರಂಭವಾಗಲಿದ್ದು, ಬೆಳಿಗ್ಗೆ 7.00ಕ್ಕೆ ರುದ್ರಹವನ (ರುದ್ರಸ್ವಾಹಾಕಾರ) ನಡೆಯಲಿದೆ. ನಂತರ ಸಂಜೆ 4.00ಕ್ಕೆ ಗಣ್ಯರ ಸತ್ಕಾರ ಸಮಾರಂಭ ಮತ್ತು ಸಂಜೆ 6.30ಕ್ಕೆ ಮಹಾಮಂಗಳಾರತಿ ನೆರವೇರಲಿದ್ದು, ಆ ಬಳಿಕ ಭಕ್ತಾದಿಗಳಿಗೆ ಮಹಾಪ್ರಸಾದದ ವಿನಿಯೋಗವಿರುತ್ತದೆ. ಕಾರ್ಯಕ್ರಮದ ನಿಮಿತ್ತ ಮಂದಿರಕ್ಕೆ ಸುಣ್ಣ-ಬಣ್ಣ ಹಚ್ಚಿ ಆಕರ್ಷಕವಾಗಿ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಮಂದಿರದ ಕಮಿಟಿ ಸದಸ್ಯರು ಕಾರ್ಯಕ್ರಮದ ಯಶಸ್ಸಿಗಾಗಿ ಶ್ರಮಿಸುತ್ತಿದ್ದು, ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದರ್ಶನ ಪಡೆದು ಪ್ರಸಾದ ಸ್ವೀಕರಿಸಬೇಕೆಂದು ಶ್ರೀ ಶಂಭು ಮಹಾದೇವ ಮಂದಿರ ಕಮಿಟಿ ವತಿಯಿಂದ ವಿನಂತಿಸಲಾಗಿದೆ.
