ಬೆಳಗಾವಿ ಪೊಲೀಸ್ ಕೇಂದ್ರ ಸ್ಥಾನದಲ್ಲಿ ಈ ಬಾರಿ ಶಿವರಾತ್ರಿ ಆಚರಣೆ ವಿಶಿಷ್ಟವಾಗಿತ್ತು. ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಪೊಲೀಸ್ ತಂಡವು ‘ರೈತ ನಕ್ಕರೆ ಜಗವೆಲ್ಲ ಸಕ್ಕರೆ’ ಎಂಬ ಸಾಮಾಜಿಕ ನಾಟಕವನ್ನು ಪ್ರದರ್ಶಿಸಿ ಭಕ್ತರ ಮನ ಗೆದ್ದಿತು.

ಬೆಳಗಾವಿ ಪೊಲೀಸ್ ಸಿಬ್ಬಂದಿಯ ಕಲಾತ್ಮಕ ಪ್ರತಿಭೆಗೆ ಸಾಕ್ಷಿಯಾದ ‘100ನೇ ಕಲಾಕುಸುಮ’ ನಾಟಕ ಪ್ರದರ್ಶನವು ಶಿವರಾತ್ರಿಯಂದು ಅದ್ಧೂರಿಯಾಗಿ ನಡೆಯಿತು. ‘ರೈತ ನಕ್ಕರೆ ಜಗವೆಲ್ಲ ಸಕ್ಕರೆ’ ಎಂಬ ಸಾಮಾಜಿಕ ಸಂದೇಶ ಸಾರುವ ನಾಟಕವನ್ನು ಡಿಸಿಪಿ ಎನ್.ವಿ. ಬರಮನಿ ಅವರು ಉದ್ಘಾಟಿಸಿದರು. ನಾಟಕದ ಮೂಲಕ ಪೊಲೀಸರು ಸಮಾಜಕ್ಕೆ ಉತ್ತಮ ಸಂದೇಶವನ್ನು ಪರಿಣಾಮಕಾರಿಯಾಗಿ ತಲುಪಿಸಿದರು.
ಈ ಸಂದರ್ಭದಲ್ಲಿ ಸಮಾಜದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಕಾರ್ಯ ಮಾಡಿದ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಆರ್‌ಪಿಐ ಗಾಂಜಿ, ಸಮಾಜ ಸೇವಕ ಸದಾಶಿವ ಸಂಕಪ್‌ಗೋಳ್, ವೀರಭದ್ರ ಕಮಿಟಿಯ ಚನ್ನಬಸು ಚನ್ನಬಸಪ್ಪನವರ ಮತ್ತು ಅನೇಕ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದು ಕಲಾವಿದರನ್ನು ಹಾಗೂ ಸಾಧಕರನ್ನು ಅಭಿನಂದಿಸಿದರು.
