Belagavi

ಬೆಳಗಾವಿಯಲ್ಲಿ ನಿರ್ಮಾಣ ಲೋಕದ ಮಹಾಸಂಗಮ: ಫೆಬ್ರವರಿ 5ರಿಂದ 8ರವರೆಗೆ ಅದ್ದೂರಿ ‘ಬೆಲ್ಕಾನ್-2026’ ಪ್ರದರ್ಶನ!

Share

 

ಉತ್ತರ ಕರ್ನಾಟಕದ ನಿರ್ಮಾಣ ಕ್ಷೇತ್ರದ ಪ್ರಮುಖ ಪ್ರದರ್ಶನವಾಗಿ ಗುರುತಿಸಿಕೊಂಡಿರುವ ‘ಬೆಲ್ಕಾನ್ 2026’ ಭವ್ಯ ಕಟ್ಟಡ ಹಾಗೂ ಗೃಹ ನಿರ್ಮಾಣ ಪ್ರದರ್ಶನವನ್ನು ಕ್ರೆಡೈ ಬೆಳಗಾವಿ ಮತ್ತು ಯಶ್ ಇವೆಂಟ್ಸ್ ಸಂಯುಕ್ತವಾಗಿ ಆಯೋಜಿಸುತ್ತಿವೆ. ಈ ಮಾಹಿತಿ ಕಾರ್ಯಕ್ರಮದ ಇವೆಂಟ್ ಚೇರ್ಮನ್ ಪ್ರಶಾಂತ್ ವಾಂಡಕರ್ ಹಾಗೂ ಯಶ್ ಇವೆಂಟ್ಸ್‌ನ ನಿರ್ದೇಶಕ ಪ್ರಕಾಶ್ ಕಾಲಕುಂದ್ರಿಕರ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಉತ್ತರ ಕರ್ನಾಟಕದ ಅತಿದೊಡ್ಡ ಕಟ್ಟಡ ಹಾಗೂ ಗೃಹ ನಿರ್ಮಾಣ ಪ್ರದರ್ಶನವಾಗಿರುವ *‘ಬೆಲ್ಕಾನ್’*ನ ಎಂಟನೇ ಆವೃತ್ತಿಯನ್ನು ಫೆಬ್ರವರಿ 5ರಿಂದ 8, 2026ರ ವರೆಗೆ ನಾಲ್ಕು ದಿನಗಳ ಕಾಲ ಕ್ಲಬ್ ರೋಡ್‌ನ ಸಿ.ಪಿ. ಎಡ್ ಮೈದಾನದಲ್ಲಿ ಆಯೋಜಿಸಲಾಗಿದೆ. ಪ್ರದರ್ಶನವು ಪ್ರತಿದಿನ ಬೆಳಗ್ಗೆ 10.00ರಿಂದ ರಾತ್ರಿ 9.00ರವರೆಗೆ ಸಾರ್ವಜನಿಕರಿಗೆ ತೆರೆಯಲಾಗಿರುತ್ತದೆ.

ಸುಮಾರು 1 ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಿಸಲಾದ ಮಂಟಪದಲ್ಲಿ 180 ಸ್ಟಾಲ್‌ಗಳು ಇರಲಿದ್ದು, ಬೆಳಗಾವಿ ನಗರದ 300ಕ್ಕೂ ಹೆಚ್ಚು ರಿಯಲ್ ಎಸ್ಟೇಟ್ ಯೋಜನೆಗಳು ಇಲ್ಲಿ ಪ್ರದರ್ಶನಗೊಳ್ಳಲಿವೆ. ಜೊತೆಗೆ ಕಟ್ಟಡ ಸಾಮಗ್ರಿ, ಗೃಹ ಹಣಕಾಸು ಹಾಗೂ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸುವ ಪ್ರತಿಷ್ಠಿತ ಕಂಪನಿಗಳು ಮತ್ತು ಹಣಕಾಸು ಸಂಸ್ಥೆಗಳ 60ಕ್ಕೂ ಹೆಚ್ಚು ಸ್ಟಾಲ್‌ಗಳು ಲಭ್ಯವಿರಲಿವೆ. ಪ್ರದರ್ಶನದಲ್ಲಿ ನಿರ್ಮಾಣ ಕ್ಷೇತ್ರದ ಪ್ರಮುಖ ಬಿಲ್ಡರ್‌ಗಳು, ವಾಸ್ತುಶಿಲ್ಪಿಗಳು, ಇಂಜಿನಿಯರ್‌ಗಳು, ಬ್ಯಾಂಕರ್‌ಗಳು ಮತ್ತು ತಜ್ಞರು ಭಾಗವಹಿಸಲಿದ್ದಾರೆ.

ಸಾಮಾನ್ಯ ನಾಗರಿಕರು ಒಂದೇ ಛಾವಣಿಯಡಿ ವಿವಿಧ ಬಿಲ್ಡರ್ಸ್ ರೂಪಸಿರುವ ಮನೆಗಳು, ಫ್ಲಾಟ್‌ಗಳು, ವಾಣಿಜ್ಯ ಬಳಕೆಗೆ ಸೂಕ್ತ ಜಾಗಗಳು, ಸಂಕೀರ್ಣಗಳು, ಹೊಸ ಕಟ್ಟಡ ಸಾಮಗ್ರಿಗಳು ಹಾಗೂ ಆಧುನಿಕ ಇಂಟೀರಿಯರ್ ವಿನ್ಯಾಸಗಳನ್ನು ವೀಕ್ಷಿಸಿ ತಮ್ಮ ಆಯ್ಕೆಯಂತೆ ಖರೀದಿ ಮಾಡಿಕೊಳ್ಳಬಹುದಾಗಿದೆ. ಮನೆ ನಿರ್ಮಾಣದ ಕನಸು ಹೊಂದಿರುವ ಎಲ್ಲ ವರ್ಗದ ಜನರಿಗೆ ಈ ಪ್ರದರ್ಶನವು ಸಮಗ್ರ ಮಾಹಿತಿಯನ್ನು ನೀಡಲಿದೆ.

ವೇಗವಾಗಿ ಬೆಳೆಯುತ್ತಿರುವ ಬೆಳಗಾವಿ ನಗರದಲ್ಲಿ ಜನರ ಸ್ವಂತ ಮನೆ ಕನಸನ್ನು ಸಾಕಾರಗೊಳಿಸಲು ಇಂತಹ ಪ್ರದರ್ಶನಗಳ ಅಗತ್ಯವಿದೆ. ಇದರಿಂದ ರಾಜ್ಯದಾದ್ಯಂತ ಈ ಮಹಾನಗರದ ಬಗ್ಗೆ ಜಾಗೃತಿ ಹೆಚ್ಚುವ ಜೊತೆಗೆ ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸಲು ಸಹಕಾರಿಯಾಗಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ಬೆಲ್ಕಾನ್ ಪ್ರದರ್ಶನಕ್ಕೆ ಪ್ರಿಯಾ ಶಕ್ತಿ ಸ್ಟೀಲ್, ಓರಿಯಾನಿಸ್ ಬಿಲ್ಡರ್ಸ್, ಜಿಎಂ ಎಲೆಕ್ಟ್ರಿಕಲ್ಸ್, ಶ್ರೀರಾಮ್ ಇನೋವೇಷನ್, ವಿಶಾಲ್ ಇನ್ಫ್ರಾಬಿಲ್ಡ್, ವಿವಾ ಡೆವಲಪರ್ಸ್, ಅಮರ್ ಕನ್‌ಸ್ಟ್ರಕ್ಷನ್, ಸಾಯಿ ರಾಜ್ ಬಿಲ್ಡರ್ಸ್, ಚೈತನ್ಯ ಪ್ರಾಪರ್ಟೀಸ್, ನೂರಾಣಿ ಡೆವಲಪರ್ಸ್, ಪಾರ್ವತಿ ಕನ್‌ಸ್ಟ್ರಕ್ಷನ್, ಕೋಣೆ ಎಲಿವೇಟರ್ಸ್, ಯಶ್ ಪಾಲಿ, ವಿಜಯ ಧಾಮಣೆಕರ, ಫ್ಯಾಬ್ ಟೆಕ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪ್ರಾಯೋಜಕತ್ವ ನೀಡಿವೆ.

ಬೆಲ್ಕಾನ್ ಪ್ರದರ್ಶನಕ್ಕೆ ಸುಮಾರು 1.5 ಲಕ್ಷಕ್ಕೂ ಹೆಚ್ಚು ಮಂದಿ ಭೇಟಿ ನೀಡಲಿದ್ದಾರೆ ಎಂಬ ವಿಶ್ವಾಸವನ್ನು ಆಯೋಜಕರು ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಕ್ರೆಡೈ ಅಧ್ಯಕ್ಷ ಯುವರಾಜ್ ಹುಲ್ಜಿ, ಇವೆಂಟ್ ಉಪಾಧ್ಯಕ್ಷ ಪ್ರಶಾಂತ್ ಪಾಟೀಲ್, ಖಜಾಂಚಿ ಸುದೀರ್ ಪನಾರೆ, ಸಾರ್ವಜನಿಕ ಸಂಪರ್ಕ ಮುಖ್ಯಸ್ಥ ಸಚಿನ್ ಬೈಲವಾಡ, ಉಪಾಧ್ಯಕ್ಷ ಆನಂದ ಕುಲಕರ್ಣಿ, ಸಹ ಕಾರ್ಯದರ್ಶಿ ಸಚಿನ್ ಕಳ್ಳಿಮಣಿ, ಜ್ಞಾನೇಶ್ವರ ಸಾಯನೆಕರ, ವೀರೇಶ್ ಶೆಟ್ಟಣ್ಣವರ, ರಾಜೇಶ್ ಮಾಳಿ, ದೀಪಕುಮಾರ್ ಶೇಖ್, ದೀಪಕ್ ಗೊಜಗೇಕರ್, ಮಹಿಳಾ ವಿಭಾಗದ ಕರ್ನಾಟಕ ರಾಜ್ಯ ಸಂಯೋಜಕಿ ದೀಪಾ ವಾಂಡಕರ್, ಕರುಣಾ ಹಿರೇಮಠ, ಕಾರ್ಯದರ್ಶಿ ಸವಿತಾ ಸಾಯನೆಕರ, ಯೂತ್ ವಿಂಗ್ ಸಂಯೋಜಕ ಅಭಿಷೇಕ್ ಮುತ್ಕೆಕರ, ಕಾರ್ಯದರ್ಶಿ ಜಯರಾಜ್ ಮಾಳಿ ಹಾಗೂ ಯಶ್ ಇವೆಂಟ್ಸ್‌ನ ನಿರ್ದೇಶಕರಾದ ಅಜಿಂಕ್ಯ ಕಾಲಕುಂದ್ರಿಕರ್ ಮತ್ತು ವಿನಯ್ ಕದಮ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Tags:

error: Content is protected !!