• ಕೆಎಲ್ಇ ಸಂಸ್ಥೆಯ ಶಿವಾಲಯದಲ್ಲಿ ಭಕ್ತಿ ಪರವಶತೆ
• 10 ಮಂದಿ ಪುರೋಹಿತರಿಂದ ಮಹಾರುದ್ರಾಭಿಷೇಕ
• ಸಂಗೀತ ಮತ್ತು ಭಜನೆಯ ಮೂಲಕ ಶಿವನಾಮ ಸ್ಮರಣೆ
• ನಾಳೆ ಭಕ್ತಾದಿಗಳಿಗೆ ಭರ್ಜರಿ ಮಹಾಪ್ರಸಾದ ಸೇವೆ
ಬೆಳಗಾವಿಯ ಜವಾಹರಲಾಲ್ ನೆಹರು ವೈದ್ಯಕೀಯ ಮಹಾವಿದ್ಯಾಲಯದ ಆವರಣದಲ್ಲಿರುವ ಜಾಗೃತ ಶಿವಾಲಯದಲ್ಲಿ ಇಂದು ಮಹಾಶಿವರಾತ್ರಿಯ ಸಂಭ್ರಮ ಮನೆಮಾಡಿದೆ. ಮುಂಜಾನೆಯಿಂದಲೇ ಶಿವನಿಗೆ ವಿವಿಧ ಧಾರ್ಮಿಕ ಕೈಂಕರ್ಯಗಳು ಜರುಗುತ್ತಿದ್ದು, ಕೆಎಲ್ಇ ಸಂಸ್ಥೆಯ ಗಣ್ಯರು ಹಾಗೂ ನೂರಾರು ವಿದ್ಯಾರ್ಥಿಗಳು ಭಕ್ತಿಯಿಂದ ಪಾಲ್ಗೊಂಡಿದ್ದಾರೆ.

ಬೆಳಗಾವಿಯ ಶಿವಬಸವ ನಗರದ ಕೆಎಲ್ಇ ಸಂಸ್ಥೆಯ ಜೆಎನ್ಎಂಸಿ ಆವರಣದಲ್ಲಿರುವ ಪುರಾತನ ಶಿವಾಲಯದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಇಂದು ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಬೆಳಿಗ್ಗೆ 5 ಗಂಟೆಯಿಂದಲೇ ಮಹಾರುದ್ರಾಭಿಷೇಕ ಮತ್ತು ಮಹಾಮಂಗಳಾರತಿ ನೆರವೇರಿತು.

ಬೆಳಗಾವಿ ಶಿವಬಸವ ನಗರದಲ್ಲಿರುವ ಜವಾಹರಲಾಲ್ ನೆಹರು ವೈದ್ಯಕೀಯ ಮಹಾವಿದ್ಯಾಲಯದ ಆವರಣದಲ್ಲಿರುವ ಶಿವಾಲಯವು ಅತ್ಯಂತ ಹಳೆಯ ಶಿವಾಲಯವು ಜಾಗೃತ ಶಿವಾಲಯವಾಗಿದೆ. ಶಿವರಾತ್ರಿಯಂದು ಬೆಳಿಗ್ಗೆ 5 ರಿಂದ ಅಭಿಷೇಕ, ಮಹಾಮಂಗಳಾರತಿ ನಡೆಯುತ್ತದೆ. ಕೆ.ಎಲ್.ಇ ಸಂಸ್ಥೆಯ ಸಂಗೀತ ಶಾಲೆಯಿಂದ ಶಿವನಾಮಸ್ಮರಣೆ ನಡೆಯಲಿದೆ. ನಾಳೆ ಮಧ್ಯಾನ್ಹ ಮಹಾಪ್ರಸಾದ ನಡೆಯಲಿದೆ. ದೇವರು ಭಕ್ತರಿಗೆ ಸನ್ಮಂಗಳವನ್ನು ಉಂಟು ಮಾಡಲಿ ಎಂದು ಕೆ.ಎಲ್.ಇ ಸಂಸ್ಥೆಯ ಅಧ್ಯಕ್ಷ ಮಹಾಂತೇಶ್ ಕವಟಗಿಮಠ ಇನ್ ನ್ಯೂಸ್’ಗೆ ತಿಳಿಸಿದರು. ಬೈಟ್
ಇನ್ನು ಕೆ.ಎಲ್.ಇ ಸಂಸ್ಥೆಯ ನಿರ್ದೇಶಕಿ ಡಾ. ಪ್ರೀತಿ ಕೋರೆ ಅವರು ಶಿವರಾತ್ರಿಯ ನಿಮಿತ್ಯ ಇಂದು ಶಿವನಿಗೆ ವಿಶೇಷ ಪುಜೆಯನ್ನು ನೆರವೇರಿಸಲಾಗಿದೆ. ಶಿವರಾತ್ರಿಯ ಹಿನ್ನೆಲೆ ಉಪವಾಸ ವ್ರತವನ್ನು ಆಚರಿಸಲಾಗುತ್ತದೆ. ಮನೆಗಳಲ್ಲಿಯೂ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಗುತ್ತದೆ ಎಂದರು. ಬೈಟ್
ಇನ್ನು ಶಿವಾಲಯದ ಅರ್ಚಕರಾದ ವೇದಮೂರ್ತಿ ಶಂಕ್ರಯ್ಯಾ ಶಾಸ್ತ್ರೀಗಳು ಶಿವರಾತ್ರಿಯ ಹಿನ್ನೆಲೆ ಶಿವನಿಗೆ ವಿಶೇಷವಾಗಿ 10 ಪುರೋಹಿತರಿಂದ ಮಹಾರುದ್ರಾಭಿಷೇಕವನ್ನು ನೆರವೇರಿಸಲಾಗಿದೆ. ನಂತರ ಅಲಂಕಾರ ಸೇವೆ, ಮಹಾಮಂಗಳಾರತಿಯನ್ನು ನಡೆಯಿತು. ಕೆ.ಎಲ್.ಇ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳಿಂದ ಭಜನಾ ಕಾರ್ಯಕ್ರಮ, ಸಂಗೀತ ಮಹಾವಿದ್ಯಾಲಯ ಮತ್ತು ಸಿಬ್ಬಂದಿಗಳಿಂದ ಸಂಗೀತ ಕಾರ್ಯಕ್ರಮಗಳು ನಡೆಯುತ್ತಿವೆ ಎಂದರು. ಬೈಟ್
ಇನ್ನು ಕೆ.ಎಲ್.ಇ ಮಹಾವಿದ್ಯಾಲಯಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಉಪವಾಸ ವ್ರತವನ್ನು ಆಚರಿಸಿ , ಶಿವಾಲಯಕ್ಕೆ ಬಂದು ಶಿವನ ದರ್ಶನ ಪಡೆದು ಪುನೀತರಾದರು. ಬೈಟ್
ಈ ಸಂದರ್ಭದಲ್ಲಿ ಸಾವಿರಾರು ಭಕ್ತರು ಈಶ್ವರನ ದರ್ಶನ ಪಡೆದುಕೊಂಡರು.
