1. ಕೈಮೇಲೆ ಲಕ್ಷ್ಮೀ ಹೆಬ್ಬಾಳಕರ್ ಟ್ಯಾಟೂ ಬಿಡಿಸಿದ ಅಭಿಮಾನಿ
2. ಮಾರಿಹಾಳದ ಸುನಿಲ್ ಸುಲದಾಳ ವಿಶಿಷ್ಟ ಅಭಿಮಾನ
3. ಅಭಿಮಾನಿಯ ಪ್ರೀತಿಗೆ ಬೆಲೆ ಕಟ್ಟಲಾಗದು ಎಂದ ಸಚಿವೆ
4. ಇಂತಹ ಅಭಿಮಾನಿಗಳೇ ನನ್ನ ಶಕ್ತಿ ಎಂದ ಲಕ್ಷ್ಮೀ ಹೆಬ್ಬಾಳಕರ್

ರಾಜಕಾರಣದಲ್ಲಿ ಅಭಿಮಾನಿಗಳು ನಾಯಕರಿಗಾಗಿ ಏನು ಬೇಕಾದರೂ ಮಾಡುತ್ತಾರೆ ಅನ್ನೋದಕ್ಕೆ ಬೆಳಗಾವಿಯ ಮಾರಿಹಾಳದಲ್ಲಿ ಒಂದು ಅಪರೂಪದ ಉದಾಹರಣೆ ಸಿಕ್ಕಿದೆ. ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮೇಲಿನ ಪ್ರೀತಿಗಾಗಿ ಯುವಕನೋರ್ವ ತನ್ನ ಕೈಮೇಲೆಯೇ ಅವರ ಭಾವಚಿತ್ರದ ಟ್ಯಾಟೂ ಬಿಡಿಸಿಕೊಂಡಿದ್ದಾನೆ.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಮಾರಿಹಾಳ ಗ್ರಾಮದ ಸುನಿಲ್ ಸುಲದಾಳ ಎಂಬ ಯುವಕ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ಕಟ್ಟಾ ಅಭಿಮಾನಿ. ತಮ್ಮ ನೆಚ್ಚಿನ ನಾಯಕಿಯ ಮೇಲಿನ ಅಪಾರ ಅಭಿಮಾನಕ್ಕೆ ಸಾಕ್ಷಿಯಾಗಿ ಸುನಿಲ್ ತಮ್ಮ ಕೈಮೇಲೆ ಲಕ್ಷ್ಮೀ ಹೆಬ್ಬಾಳಕರ್ ಅವರ ಟ್ಯಾಟೂವನ್ನು ಹಾಕಿಸಿಕೊಳ್ಳುವ ಮೂಲಕ ಸುದ್ದಿಯಾಗಿದ್ದಾರೆ. ಕ್ಷೇತ್ರದಲ್ಲಿ ಸಚಿವರು ಮಾಡುತ್ತಿರುವ ಅಭಿವೃದ್ಧಿ ಕೆಲಸಗಳು ಹಾಗೂ ಜನರ ಮೇಲಿನ ಅವರ ಕಾಳಜಿಗೆ ಮಾರುಹೋದ ಸುನಿಲ್, ಈ ರೀತಿ ವಿಭಿನ್ನವಾಗಿ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಇನ್ನು ಈ ಅಭಿಮಾನದ ಸಂಗತಿ ತಿಳಿದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಭಾವುಕರಾಗಿದ್ದಾರೆ. ಸುನಿಲ್ ಅವರ ಈ ನಿಷ್ಕಲ್ಮಶ ಪ್ರೀತಿಗೆ ಬೆಲೆ ಕಟ್ಟಲಾಗದು, ಇಂತಹ ಅಭಿಮಾನಿಗಳೇ ನನ್ನ ನಿಜವಾದ ಶಕ್ತಿ ಎಂದು ಅವರು ಹರ್ಷ ವ್ಯಕ್ತಪಡಿಸಿದ್ದಾರೆ. ತಮ್ಮ ಮೇಲೆ ಇಷ್ಟೊಂದು ಪ್ರೀತಿ ಮತ್ತು ವಾತ್ಸಲ್ಯ ತೋರಿ ಟ್ಯಾಟೂ ಹಾಕಿಸಿಕೊಂಡ ಸುನಿಲ್ ಅವರಿಗೆ ಸಚಿವರು ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಿದ್ದು, ಅಭಿಮಾನಿಯ ಈ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.

