Belagavi

ಒಳಮೀಸಲಾತಿ ವಿಧೇಯಕ ತಿರಸ್ಕರಿಸಲು ಆಗ್ರಹ: ಬೆಳಗಾವಿ ಜಿಲ್ಲಾ ಛಲವಾದಿ ಮಹಾಸಭಾವತಿಯಿಂದ ರಾಜ್ಯಪಾಲರಿಗೆ ಮನವಿ

Share

1. ಒಳಮೀಸಲಾತಿ ವಿಧೇಯಕಕ್ಕೆ ಛಲವಾದಿ ಮಹಾಸಭಾ ವಿರೋಧ.
2. ರಾಜ್ಯಪಾಲರು ಈ ವಿಧೇಯಕವನ್ನು ತಿರಸ್ಕರಿಸಲು ಒತ್ತಾಯ.
3. ನಾಗಮೋಹನ್ ದಾಸ್ ವರದಿ ಅವೈಜ್ಞಾನಿಕವೆಂದು ಆಕ್ರೋಶ.
4. ಸಂವಿಧಾನದ ಮೂಲ ಆಶಯಕ್ಕೆ ಧಕ್ಕೆ ಎಂದು ಆರೋಪ.

ರಾಜ್ಯ ಸರ್ಕಾರವು ಅನುಮೋದನೆಗೆ ಸಲ್ಲಿಸಿರುವ ಅನುಸೂಚಿತ ಜಾತಿಗಳ ಉಪ ವರ್ಗೀಕರಣ ವಿಧೇಯಕ 2025ಕ್ಕೆ ಈಗ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಬೆಳಗಾವಿ ಜಿಲ್ಲಾ ಛಲವಾದಿ ಮಹಾಸಭಾವತಿಯಿಂದ ಈ ವಿಧೇಯಕವನ್ನು ತಿರಸ್ಕರಿಸುವಂತೆ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗಿದ್ದು, ಒಳಮೀಸಲಾತಿ ಹೆಸರಿನಲ್ಲಿ ಕೆಲವು ಸಮುದಾಯಗಳನ್ನು ವಂಚಿಸುವ ಸಂಚು ನಡೆಯುತ್ತಿದೆ ಎಂದು ಸಂಘಟನೆ ಗಂಭೀರ ಆರೋಪ ಮಾಡಿದೆ.
ಕರ್ನಾಟಕ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಒಳಮೀಸಲಾತಿ ವಿಧೇಯಕವು ಆದಿದ್ರಾವಿಡ, ಆದಿಆಂಧ್ರ ಹಾಗೂ ಆದಿಕರ್ನಾಟಕ ಸೇರಿದಂತೆ ಬಲಗೈ ವರ್ಗದ 19 ಜಾತಿಗಳಿಗೆ ಸಾಮಾಜಿಕ ಅನ್ಯಾಯ ಉಂಟುಮಾಡಲಿದೆ ಎಂದು ಛಲವಾದಿ ಮಹಾಸಭಾ ಆತಂಕ ವ್ಯಕ್ತಪಡಿಸಿದೆ. ಈ ಕುರಿತು ರಾಜ್ಯಪಾಲರಿಗೆ ಪತ್ರ ಬರೆದಿರುವ ಸಂಘಟನೆಯು, ನ್ಯಾಯಮೂರ್ತಿ ನಾಗಮೋಹನ್ ದಾಸ್ ಸಮಿತಿಯ ವರದಿಯು ಅವೈಜ್ಞಾನಿಕತೆಯಿಂದ ಕೂಡಿದೆ ಎಂದು ದೂರಿದೆ. ಮೀಸಲಾತಿ ಪ್ರಮಾಣ ಶೇ. 50 ಮೀರಬಾರದೆಂದು ಹೈಕೋರ್ಟ್ ಈಗಾಗಲೇ ತಡೆಯಾಜ್ಞೆ ನೀಡಿರುವಾಗ, ಸರ್ಕಾರವು ಅವಸರದಲ್ಲಿ ವಿಧೇಯಕ ಜಾರಿಗೆ ಮುಂದಾಗುತ್ತಿರುವುದು ಸರಿಯಲ್ಲ ಎಂದು ಮಹಾಸಭಾ ಆಕ್ರೋಶ ವ್ಯಕ್ತಪಡಿಸಿದೆ.
ಇನ್ನು ಒಳಮೀಸಲಾತಿ ಗೊಂದಲ ಬಗೆಹರಿಯುವ ಮುನ್ನವೇ ಕೆಲವು ಇಲಾಖೆಗಳಲ್ಲಿ ವರ್ಗೀಕರಣದ ಆಧಾರದ ಮೇಲೆ ನೇಮಕಾತಿ ಪ್ರಕ್ರಿಯೆ ನಡೆಯುತ್ತಿರುವುದು ರೋಸ್ಟರ್ ಬಿಂದುವಿನ ಉಲ್ಲಂಘನೆಯಾಗಿದೆ ಎಂದು ಜಿಲ್ಲಾ ಕಾರ್ಯಾಧ್ಯಕ್ಷರಾದ ದುರ್ಗೇಶ ಜಿ. ಮೇತ್ರಿ ದೂರಿದ್ದಾರೆ. ಕಾನೂನು ಪೂರ್ಣ ಪ್ರಮಾಣದಲ್ಲಿ ಜಾರಿಯಾಗುವವರೆಗೆ ಯಾವುದೇ ಶೈಕ್ಷಣಿಕ ಅಥವಾ ಔದ್ಯೋಗಿಕ ಪ್ರಕ್ರಿಯೆಗಳನ್ನು ನಡೆಸಬಾರದು ಮತ್ತು ಹಳೆಯ ಮೀಸಲಾತಿ ನಿಯಮಾವಳಿಗಳನ್ನೇ ಮುಂದುವರಿಸಬೇಕೆಂದು ಸಂಘಟನೆ ಒತ್ತಾಯಿಸಿದೆ. ಈ ವಿಧೇಯಕಕ್ಕೆ ರಾಜ್ಯಪಾಲರು ಅಂಕಿತ ಹಾಕಬಾರದು ಎಂದು ಮನವಿ ಮಾಡಲಾಗಿದೆ. ಬೈಟ್

ಈ ಸಂದರ್ಭದಲ್ಲಿ ಹನಮಂತ ಮದಾಳೆ. ದಯಾನಂದ, ಕುಮಾರ ದರಬಾರೆ, ಸಿದ್ದಪ್ಪ ಬೆಳಗಲಿ, ಗೋಪಾಲ್ ತಳವಾರ, ಕೃಷ್ಣಾ ಕಾಂಬಳೆ, ಸಿದ್ಧಪ್ಪ ಮಾದರ, ಅಶೋಕ ಕೋಲಕಾರ ಸೇರಿದಂತೆ ಇನ್ನುಳಿದವರು ಭಾಗಿಯಾಗಿದ್ಧರು.

Tags:

error: Content is protected !!