Belagavi

ಕ್ಯಾನ್ಸರ್ ಮುಕ್ತ ಸಮಾಜಕ್ಕೆ ಮುನ್ನೆಚ್ಚರಿಕೆ ಅಗತ್ಯ: ಬೆಳಗಾವಿಯಲ್ಲಿ ತಾಲೂಕಾ ಆರೋಗ್ಯಾಧಿಕಾರಿ ರಮೇಶ್ ದಂಡಗಿ ಕರೆ

Share

• ಬೆಳಗಾವಿಯಲ್ಲಿ ಬೃಹತ್ ಉಚಿತ ಆರೋಗ್ಯ ಶಿಬಿರ
• ಮಹಿಳೆಯರ ಕ್ಯಾನ್ಸರ್ ತಪಾಸಣೆಗೆ ವಿಶೇಷ ಆದ್ಯತೆ
• ಆರಂಭಿಕ ಹಂತದ ಪತ್ತೆಯಿಂದ ಜೀವ ರಕ್ಷಣೆ
• ಶಿವಗಿರಿ ಸೊಸೈಟಿ ಹಾಗೂ ಆಯು ಫೌಂಡೇಶನ್

ಮಹಿಳೆಯರಲ್ಲಿ ಕಂಡುಬರುವ ಸ್ತನ ಮತ್ತು ಗರ್ಭಾಶಯದ ಕ್ಯಾನ್ಸರ್ ಅನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚುವುದರಿಂದ ಸಾವಿನ ಪ್ರಮಾಣವನ್ನು ಗಣನೀಯವಾಗಿ ಇಳಿಸಲು ಸಾಧ್ಯವಿದೆ” ಎಂದು ತಾಲೂಕಾ ಆರೋಗ್ಯಾಧಿಕಾರಿ ರಮೇಶ್ ದಂಡಗಿ ಅವರು ಪ್ರತಿಪಾದಿಸಿದರು.

ಬೆಳಗಾವಿಯ ಶಹಾಪೂರದ ಎಸ್.ಪಿ.ಎಂ ರಸ್ತೆಯಲ್ಲಿರುವ ವಿಶ್ವಕರ್ಮ ದೇವಸ್ಥಾನದ ಸಭಾಭವನದಲ್ಲಿ ಇಂದು ಶಿವಗಿರಿ ಕೋ-ಆಪ್ ಕ್ರೆಡಿಟ್ ಸೊಸೈಟಿ, ಬಿಲ್ಲವರ ಅಸೋಸಿಯೇಶನ್ ಹಾಗೂ ಆಯು ಫೌಂಡೇಶನ್ ಬೆಳಗಾವಿ ಇವರ ಜಂಟಿ ಆಶ್ರಯದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು. ಚೇರಮನ್ನರಾದ ಸಂಜಯಕುಮಾರ್ ಎಂ., ಆಯೂ ಫೌಂಡೇಶನನ ಅಧ್ಯಕ್ಷರಾದ ಮನೋಜ್ ಸುತಾರ್, ತಾಲೂಕಾ ಆರೋಗ್ಯಾಧಿಕಾರಿ ರಮೇಶ್ ದಂಡಗಿ, ಸುಂದರ ಕೋಟಿಯನ್, ಭರತ್ ಶಿರೋಳಕರ, ನೇತ್ರಾವತಿ ಸೇರಿದಂತೆ ಇನ್ನುಳಿದ ಗಣ್ಯರು ಸಮಾರಂಭಕ್ಕೆ ಚಾಲನೆಯನ್ನು ನೀಡಿದರು.

ತಾಲೂಕಾ ಆರೋಗ್ಯಾಧಿಕಾರಿ ರಮೇಶ್ ದಂಡಗಿ ಅವರು ಈ ವೇಳೆ ಮಾತನಾಡಿ, ದೇಶದಲ್ಲಿ ಮಹಿಳೆಯರಲ್ಲಿ ಹೆಚ್ಚಾಗಿ ಕಂಡು ಬರುವ ಸ್ತನ ಮತ್ತು ಗರ್ಭಾಶಯದ ಕ್ಯಾನ್ಸರ್’ಗಳನ್ನು ಶೀಘ್ರದಲ್ಲೇ ಪತ್ತೆ ಹಚ್ಚಿ ಚಿಕಿತ್ಸೆ ನೀಡಿದರೇ, ಸಾವಿನ ಪ್ರಮಾಣಗಳನ್ನು ತಗ್ಗಿಸಬಹುದಾಗಿದೆ. ಇದಕ್ಕಾಗಿ ಆರೋಗ್ಯ ಇಲಾಖೆಯೂ ತಳಮಟ್ಟದಿಂದ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡುತ್ತಿದೆ. ಕ್ಯಾನ್ಸರ್ ರೋಗದ ಪತ್ತೆಗೆ ವಿಳಂಬವಾಗಲೂ ಹಿಂಜರಿಕೆಯೂ ಪ್ರಮುಖ ಕಾರಣವಾಗಿದೆ. ಆದರೇ, ಮೂರು ಹಂತದ ಚಿಕಿತ್ಸೆಯನ್ನು ತಕ್ಷಣ ಕೈಗೊಂಡರೇ, ಜೀವವನ್ನು ಉಳಿಸಲು ಸಾಧ್ಯವಾಗುತ್ತದೆ.

ಡಾ. ಶೀತಲ್ ಕೆಳಗಡೆ ಅವರು ಮಾತನಾಡಿ, ಕ್ಯಾನ್ಸರ್ ರೋಗ ಬಂತೆಂದರೇ ಅವರ ಜೀವನ ಕ್ಯಾನ್ಸಲ್ ಎಂಬ ಮನೋಭಾವ ಕಾಡುತ್ತದೆ. ಕ್ಯಾನ್ಸರ್ ರೋಗ ಹೆಸರು ಕೇಳುತ್ತಲೇ ಜನರು ಭಯಪಡುತ್ತಾರೆ. ಹಂತ ಹಂತವಾಗಿ ದೇಹವನ್ನು ಪಸರಿಸುವ ರೋಗ ಇದಾಗಿದೆ. ಬೇರೆ ದೇಶಗಳಲ್ಲಿ ರೋಗ ಹರಡುವ ಮುನ್ನವೇ ಮುನ್ನೆಚ್ಚರಿಕೆ ವಹಿಸಲಾಗುತ್ತದೆ. ಆದರೇ, ನಮ್ಮ ದೇಶದಲ್ಲಿ ರೋಗಕ್ಕಿಡಾದ ಮೇಲೆ ಅದರ ವಿರುದ್ಧ ಹೋರಾಡಲಾಗುತ್ತದೆ. ನಾವು ಕೂಡ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸುವುದು ಅತ್ಯವಶ್ಯ ಎಂದರು. ಬೈಟ್
ಈ ಶಿಬಿರದಲ್ಲಿ ವಿಶೇಷವಾಗಿ ಮಹಿಳೆಯರಿಗಾಗಿ ಬಾಯಿ ಕ್ಯಾನ್ಸರ್, ಸ್ತನ ಕ್ಯಾನ್ಸರ್ ಹಾಗೂ ಗರ್ಭಕಂಠದ ಕ್ಯಾನ್ಸರ್ ತಪಾಸಣೆಗಳನ್ನು ಅತ್ಯಾಧುನಿಕ ಉಪಕರಣಗಳ ಮೂಲಕ ಉಚಿತವಾಗಿ ನಡೆಸಲಾಯಿತು. ಇದರೊಂದಿಗೆ ಮಹಿಳೆಯರು ಹಾಗೂ ಪುರುಷರಿಬ್ಬರಿಗೂ ಕಣ್ಣಿನ ತಪಾಸಣೆಯನ್ನು ಆಯೋಜಿಸಲಾಗಿದ್ದು, ನೂರಾರು ಜನರಿಗೆ ತಜ್ಞ ವೈದ್ಯರು ಸೂಕ್ತ ಸಲಹೆ ಹಾಗೂ ಚಿಕಿತ್ಸೆಯನ್ನು ನೀಡಿದರು.

Tags:

error: Content is protected !!