• ಹುಕ್ಕೇರಿ ಶ್ರೀಗಳಿಗೆ ಕಲ್ಪವೃಕ್ಷ ಶ್ರೀ ಗೌರವ
• ಸವಣೂರು ಮಠದಿಂದ ಅದ್ದೂರಿ ಪ್ರಶಸ್ತಿ ಪ್ರದಾನ
• ಗಡಿ ಭಾಗದ ಕನ್ನಡದ ಕಾಯಕಕ್ಕೆ ಮನ್ನಣೆ
• ಬೊಮ್ಮಾಯಿ ಹಾಗೂ ಗಣ್ಯರಿಂದ ಶ್ರೀಗಳ ಅಭಿನಂದನೆ

ಕಾಯಕ ಯೋಗಿ ಗಡಿ ಭಾಗದಲ್ಲಿ ಕನ್ನಡ ಉಳಿಸಿ, ಬೆಳೆಸುವಲ್ಲಿ ನಿರಂತರ ಶ್ರಮಿಸುತ್ತಿರುವ ಅಕ್ಷರ ದಾಸೋಹ ಮೂರ್ತಿ ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯ ರಾಷ್ಟ್ರೀಯ ಉಪಾಧ್ಯಕ್ಷ, ಹುಕ್ಕೇರಿ ಹಿರೇಮಠದ ಅಧಿಪತಿ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರಿಗೆ ನಮ್ಮ ಸವಣೂರು ದೊಡ್ಡ ಹುಣಸಿಕಲ್ಮಠದ ಪ್ರತಿಷ್ಠಿತ ಕಲ್ಪ ವಕ್ಷ ಶ್ರೀ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ನಮಗೆಲ್ಲ ಅಭಿಮಾನ ತಂದಿದೆ ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಸವಣೂರು ನಲ್ಲಿ ನಡೆದ ದೊಡ್ಡ ಹುಣಸಿಕಲ್ಮಠದ ಶ್ರೀ ಗುರು ರಾಚೂಟಿಶ್ವರ ಮಹಾಸ್ವಾಮಿಗಳ 49ನೇ ಸ್ಮರಣೋತ್ಸವದಲ್ಲಿ ಹುಕ್ಕೇರಿ ಶ್ರೀಗಳಿಗೆ ಕಲ್ಪ ವೃಕ್ಷ ಶ್ರೀ ಪ್ರಶಸ್ತಿ ನೀಡಿ ಮಾತನಾಡಿದರು. ಕಾಯಕ ಯೋಗಿಗೆ ಕಲ್ಪ ವೃಕ್ಷ ಶ್ತೀ ಪ್ರಶಸ್ತಿಯ ಒಂದು ಗರಿ ಬಂದಿರುವುದು ನಮಗೆ ಸಂತಸ ತಂದಿದೆ ಎಂದರು.
ಕರ್ನಾಟಕ ಸರಕಾರದ ವಿಧಾನ ಸಭೆಯ ಉಪಸಭಾಪತಿ ರುದ್ರಪ್ಪ ಲಮಾಣಿ ಮಾತನಾಡಿ, ನಾನು ಮುಜರಾಯಿ ಸಚಿವನಾಗಿದ್ದಾಗ ಹುಕ್ಕೇರಿ ಹಿರೇಮಠದ ಶ್ರೀಗಳ ರಜತ ಮಹೋತ್ಸವದಲ್ಲಿ ಭಾಗಿಯಾಗಿದ್ದೇನೆ. ಪರಮಪೂಜ್ಯರು ಎಲ್ಲ ಧರ್ಮಿಯರೊಂದಿಗೆ ಅವಿನಾಭಾವ ಸಂಬಂಧ ಇಟ್ಟುಕೊಂಡಿರುವುದು ಅಭಿಮಾನದ ಸಂಗತಿ. ಶ್ರೀಗಳಿಗೆ ನಮ್ಮ ಜಿಲ್ಲೆಯ ಪ್ರತಿಷ್ಠಿತ ಪ್ರಶಸ್ತಿ ನೀಡುತ್ತಿರುವುದು ಅತೀವ ಸಂತೋಷ ತಂದಿದೆ ಎಂದರು.
ದೊಡ್ಡ ಹುಣಸಿಕಲ್ಮಠದ ಅಧಿಪತಿಗಳಾದ ಶ್ರೀ ಚನ್ನಬಸವ ಸ್ವಾಮೀಜಿ ಮಾತನಾಡಿ, ಹುಕ್ಕೇರಿಯ ಚಂದ್ರಶೇಖರ ಶಿವಾಚಾರ್ಯರು ಎಂದರೆ ಗುರು ವಿರಕ್ತರ ನಡುವೆ ಕೊಂಡೆ ಇದ್ದ ಹಾಗೆ. ಶ್ರೀ ರೇಣುಕಾದಿ ಪಂಚಾಚಾರ್ಯರ ವಿಚಾರಗಳನ್ನು ಸಮನ್ವಯತೆಯಿಂದ ಬೋಧಿಸುವ ಶ್ರೀಗಳಿಗೆ ನಮ್ಮ ಶ್ರೀಮಠ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ಸಂತಸ ತಂದಿದೆ ಎಂದರು.
ಕರ್ನಾಟಕ ಸರಕಾರದ ಮುಖ್ಯಸಚೇತಕ ಸಲೀಂ ಅಹ್ಮದ್ ಮಾತನಾಡಿ, ಹುಕ್ಕೇರಿಯ ಶ್ರೀ ಚಂದ್ರಶೇಖರ ಶಿವಾಚಾರ್ಯರ ಬಗ್ಗೆ ಕೇಳಿದ್ದೇನೆ. ಅವರ ಹುಕ್ಕೇರಿಶ ಎಂಬ ಅಂಕಿತನಾಮ ವಚನಗಳು ಕನ್ನಡ, ಮರಾಠಿ, ಇಂಗ್ಲಿಷ್ ನಲ್ಲಿ ಅನುವಾಗಿರುವುದಷ್ಟೆ ಅಲ್ಲ, ಉರ್ದು ಭಾಷೆಯಲ್ಲಿ ಅನುವಾದವಾಗಿರುವುದು ಅಭಿಮಾನದ ಸಂಗತಿ ಎಂದರು.
ಪ್ರಶಸ್ತಿ ಪ್ರಧಾನವನ್ನು ನೆರವೆರಿಸಿದ ಧಾರವಾಡ ಮುರುಘಾಮಠದ ಶ್ರೀ. ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಹುಕ್ಕೇರಿಯ ಚಂದ್ರಶೇಖರ ಶಿವಾಚಾರ್ಯರು ಆ ಭಾಗದಲ್ಲಿ ಎಲ್ಲರೊಂದಿಗೆ ಬೆರೆತು ನಡೆದಾಡುವ ದೇವರಾಗಿದ್ದಾರೆ ಎಂದರು.
ಅಥಣಿ ಮೋಟಗಿಮಠದ ಶ್ರೀ ಪ್ರಭು ಚನ್ನಬಸವ ಸ್ವಾಮೀಜಿ ಮಾತನಾಡಿ, ಹುಕ್ಕೇರಿ ಶ್ರೀಗಳು ಎಂದರೆ ಎಲ್ಲರಿಗೂ ಪ್ರೀತಿ ಕಾರಣ ಅವರಿಗೆ ಎಲ್ಲರನ್ನು ಕಂಡರೆ ಪ್ರೇಮ. ಇಂಥ ಪೂಜ್ಯರಿಗೆ ಪ್ರಶಸ್ತಿ ಸಿಕ್ಕಿರುವುದು ಹೆಮ್ಮೆಯ ಸಂಗತಿ ಎಂದರು.
ಹಾವೇರಿ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾಮಣ್ಣವರ ಮಾತನಾಡಿ,ಹುಕ್ಕೇರಿ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರು ಬಹಳಷ್ಟು ಕಾರ್ಯ ಮಾಡಿದ್ದಾರೆ. ಅವರ ಬಗ್ಗೆ ಕೇಳಿದ್ದೇವೆ. ಅವರಿಗೆ ನಮ್ಮ ಹಾವೇರಿ ಜಿಲ್ಲೆಯ ಶ್ರೀಮಠದಿಂದ ಪ್ರಶಸ್ತಿ ಸಿಕ್ಕಿರುವುದು ಹೆಮ್ಮೆಯ ಸಂಗತಿ ಎಂದರು.
ಅಕ್ಕಿಆಲೂರಿನ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಪುಣ್ಯಕೋಟಿ ಮಠದ ಜಗದೀಶ್ ಜಗದೀಶ್ವರ ಸ್ವಾಮೀಜಿ ಸೇರಿದಂತೆ ಸಾಕಷ್ಟು ಜನ ಉಪಸ್ಥಿತರಿದ್ದರು.
ಹಾವೇರಿಯ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಗಂಗಾಧರ ಬಾಣದ ಮಾತನಾಡಿ, ಹುಕ್ಕೇರಿ ಹಿರೇಮಠ ಎಂದರೆ ಹಾವೇರಿ ಜಿಲ್ಲೆಯಲ್ಲಿರುವ ಬಾಣದ ಬಂಧುಗಳ ಗುರುಮಠ ಇವತ್ತು ನಮ್ಮ ಗುರುಗಳಿಗೆ ಶ್ರೀಮಠ ಪ್ರಶಸ್ತಿ ನೀಡುತ್ತಿರುವುದು ಸಂತಸ ತಂದಿದೆ ಎಂದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಸವಣೂರು ದೊಡ್ಡ ಹುಣಸಿಕಲ್ಮಠದ ಕಲ್ಪ ವೃಕ್ಷ ಶ್ರೀ ಪ್ರಶಸ್ತಿ ಬಂದಿರುವುದು ಭಕ್ತರ ಬಾಳಿಗೆ ಕಲ್ಪ ವೃಕ್ಷ ಶ್ರೀ ವನ್ನು ನೀಡಿ ಹರಿಸುವಂತ ಶಕ್ತಿಯನ್ನು ಗುರುಗಳು ನೀಡಲಿ ಎಂದರು.
