Belagavi

ಮೋದಿ ಸರ್ಕಾರದ ಬಜೆಟ್ ವಿಕಸಿತ ಭಾರತಕ್ಕೆ ಭದ್ರ ಬುನಾದಿ: ಬೆಳಗಾವಿಯಲ್ಲಿ ಬಿಜೆಪಿ ಮುಖಂಡರ ಶ್ಲಾಘನೆ

Share

• ಭಾರತ ವಿಶ್ವದ ಬಲಿಷ್ಠ ಆರ್ಥಿಕ ಶಕ್ತಿ
• ಉದ್ಯೋಗಾಧಾರಿತ ಶಿಕ್ಷಣಕ್ಕೆ ಬಜೆಟ್‌ನಲ್ಲಿ ಒತ್ತು
• ಬಡವರು ಮತ್ತು ವಂಚಿತರಿಗೆ ವಿಶೇಷ ಶಕ್ತಿ
• ಮೂಲಸೌಕರ್ಯ ವೃದ್ಧಿಗೆ ಸಿಕ್ಕಿದೆ ಭಾರಿ ವೇಗ
ಕೇಂದ್ರದ 2026ರ ಬಜೆಟ್ ವಿಕಸಿತ ಭಾರತದ ಕನಸನ್ನು ನನಸು ಮಾಡುವ ದೂರದೃಷ್ಟಿ ಹೊಂದಿದೆ ಎಂದು ಬಿಜೆಪಿ ನಾಯಕರು ಬೆಳಗಾವಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ವಿಧಾನ ಪರಿಷತ್ತಿನ ಮಾಜಿ ಸದಸ್ಯ ವಿಶ್ವದ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಭಾರತ ಹೊರಹೊಮ್ಮುತ್ತಿದೆ. ಭಾರತ ಸರ್ಕಾರವು ವಿಶೇಷವಾಗಿ 5 ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಿ ಶಿಕ್ಷಣಕ್ಕೆ ಒತ್ತು ನೀಡಿದೆ, ಉದ್ಯೋಗಕ್ಕಾಗಿ ಶಿಕ್ಷಣವನ್ನು ಸ್ವಾತಂತ್ರ್ಯ ನಂತರ ಮೊದಲ ಬಾರಿ ನೀಡಿದೆ. ಬಡವರು ವಂಚಿತರಿಗೆ ಶಕ್ತಿ ತುಂಬುವ ಕೆಲಸವನ್ನು ಈ ಬಜೆಟ್ ಮಾಡಿದೆ. ಎಲ್ಲ ಕುಟುಂಬಗಳಿಗೆ ಅವಕಾಶಗಳನ್ನು ಭಾರತ ಸರ್ಕಾರ ನೀಡುತ್ತಿದೆ. ಅಲ್ಲದೇ ಮೂಲಭೂತ ಸೌಕರ್ಯ, ರಸ್ತೆ, ರೇಲ್ವೆ, ವಿಮಾನಯಾಣ ಇನ್ನುಳಿದ ವಿಷಯಗಳಿಗೆ ಒತ್ತು ನೀಡಿದೆ ಎಂದರು. ಬೈಟ್

ಇನ್ನು ಬಿಜೆಪಿ ವಕ್ತಾರ ಎಂ.ಬಿ. ಝೀರಲಿ ಅವರು, ಕೇಂದ್ರದ 2026ರ ಬಜೆಟ್ ದೇಶಕ್ಕೆ ಅತ್ಯಂತ ಪೂರಕವಾಗಿದ್ದು, ಪಿಎಂ ಮೋದಿ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಮನ್ ಅವರನ್ನು ಅಭಿನಂದಿಸುತ್ತೇವೆ. ವಿಕಸಿತ ಭಾರತಕ್ಕೆ ಒತ್ತು ಕೊಡುವ ಬಜೆಟ್ ಇದಾಗಿದೆ. ಯುವಕರಿಗೆ ಉದ್ಯೋಗಕ್ಕೆ ಈ ಬಜೆಟ್ ಆದ್ಯತೆಯನ್ನು ನೀಡಿದೆ ಎಂದರು. ಬೈಟ್

ಮಾಧ್ಯಮಗೋಷ್ಟಿಯಲ್ಲಿ ಬಿಜೆಪಿ ನಗರಾಧ್ಯಕ್ಷೆ ಗೀತಾ ಸುತಾರ್, ಮಾಜಿ ಶಾಸಕ ಅನೀಲ್ ಬೆನಕೆ, ಉಜ್ವಲಾ ಬಡವಣ್ಣಾಚೆ, ನಗರಸೇವಕ ಹಣುಮಂತ ಕೊಂಗಾಲಿ ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ಧರು.

Tags:

error: Content is protected !!