Bagalkote

ಬಾಗಲಕೋಟೆಯಲ್ಲಿ ಹೈ ಅಲರ್ಟ್: ‘ಚಲೋ’ ಪ್ರತಿಭಟನೆ ಹಿನ್ನೆಲೆ ಮಂಗಳೂರಿನಿಂದ ಧಾವಿಸುತ್ತಿದೆ ವಿಶೇಷ ಫೋರ್ಸ್!

Share

• ಬಾಗಲಕೋಟೆಯಲ್ಲಿ ಪೊಲೀಸ್ ಇಲಾಖೆ ಹೈ ಅಲರ್ಟ್
• ಮಂಗಳೂರಿನಿಂದ ಆಗಮಿಸುತ್ತಿದೆ ವಿಶೇಷ ಆಕ್ಷನ್ ಫೋರ್ಸ್
• ಪ್ರತಿಭಟನೆ ಹಿನ್ನೆಲೆ ಹಳೆ ನಗರದಲ್ಲಿ ಪಥಸಂಚಲನ
• ಹಲವು ಹಿಂದೂ ಮುಖಂಡರಿಗೆ ಪೊಲೀಸ್ ನೋಟಿಸ್ ಜಾರ

ಬಾಗಲಕೋಟೆಯಲ್ಲಿ ಶಿವಾಜಿ ಜಯಂತಿ ವೇಳೆ ನಡೆದ ಕಲ್ಲು ತೂರಾಟದ ಕಿಡಿ ಈಗ ಪ್ರತಿಭಟನೆಯ ರೂಪ ಪಡೆದಿದೆ. ಫೆಬ್ರವರಿ 26ರಂದು ನಡೆಯಲಿರುವ ‘ಬಾಗಲಕೋಟೆ ಚಲೋ’ ಹಿನ್ನೆಲೆಯಲ್ಲಿ ಜಿಲ್ಲೆ ಈಗ ಪೊಲೀಸ್ ಕೋಟೆಯಾಗಿ ಮಾರ್ಪಟ್ಟಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಇಲಾಖೆ ಸರ್ಪಗಾವಲು ಹಾಕಿದೆ.
ಛತ್ರಪತಿ ಶಿವಾಜಿ ಜಯಂತಿ ಸಂದರ್ಭದಲ್ಲಿ ಸಂಭವಿಸಿದ ಕಲ್ಲು ತೂರಾಟ ಪ್ರಕರಣದ ಬೆನ್ನಲ್ಲೇ, ಫೆಬ್ರವರಿ 26ರಂದು ಬಾಗಲಕೋಟೆ ಚಲೋ ಪ್ರತಿಭಟನೆಗೆ ಕರೆ ನೀಡಲಾಗಿದ್ದು, ಜಿಲ್ಲಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದೆ. ಪರಿಸ್ಥಿತಿ ಕೈಮೀರದಂತೆ ತಡೆಯಲು ಮಂಗಳೂರಿನಿಂದ ಗಲಭೆ ನಿಯಂತ್ರಣದಲ್ಲಿ ವಿಶೇಷ ತರಬೇತಿ ಪಡೆದ ‘ಸ್ಪೆಷಲ್ ರ್ಯಾಪಿಡ್ ಆಕ್ಷನ್ ಫೋರ್ಸ್’ ನಾಳೆ ಜಿಲ್ಲೆಗೆ ಆಗಮಿಸಲಿದೆ. ಈಗಾಗಲೇ ಹಳೆ ನಗರದಲ್ಲಿ 500ಕ್ಕೂ ಹೆಚ್ಚು ಪೊಲೀಸರು ಪಥಸಂಚಲನ ನಡೆಸಿ ಶಕ್ತಿ ಪ್ರದರ್ಶನ ಮಾಡಿದ್ದು, ಎಸ್‌ಪಿಯವರು ಸ್ವತಃ ಭದ್ರತಾ ಸನ್ನದ್ಧತೆಯ ವಿಡಿಯೋ ಹಂಚಿಕೊಂಡಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಈಗಾಗಲೇ ಹಲವು ಹಿಂದೂ ಮುಖಂಡರಿಗೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದು, ಸಾರ್ವಜನಿಕ ಶಾಂತಿ ಕಣ್ಗಾವಲಿಗಾಗಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.

Tags:

error: Content is protected !!