arrest

ಬೆಳಗಾವಿ ಪೊಲೀಸರ ಮಿಂಚಿನ ಕಾರ್ಯಾಚರಣೆ: ಬೈಕ್ ಕಳ್ಳರು, ಮಟಕಾ ಬುಕ್ಕಿಗಳು ಹಾಗೂ ಗಾಂಜಾ ಪೇಡ್ಲರ್ಸ್’ಗಳ ಬಂಧನ!

Share

ಬೆಳಗಾವಿ ನಗರದಲ್ಲಿ ಅಪರಾಧ ಚಟುವಟಿಕೆಗಳ ವಿರುದ್ಧ ಪೊಲೀಸರು ಸಮರ ಸಾರಿದ್ದಾರೆ. ಒಂದೇ ದಿನ ನಡೆದ ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ಸಿಸಿಬಿ ಹಾಗೂ ಸ್ಥಳೀಯ ಠಾಣೆ ಪೊಲೀಸರು ಬೈಕ್ ಕಳ್ಳರು, ಜುಜಾಟದ ಬುಕ್ಕಿಗಳು ಮತ್ತು ಮಾದಕ ವ್ಯಸನಿಗಳನ್ನು ಹೆಡೆಮುರಿ ಕಟ್ಟಿದ್ದಾರೆ. ನಗರದ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಆಯುಕ್ತರ ಮಾರ್ಗದರ್ಶನದಲ್ಲಿ ಈ ಭರ್ಜರಿ ಬೇಟೆ ನಡೆದಿದೆ.

ಸುದ್ದಿ ವಿವರ: ಬೆಳಗಾವಿ ಸಿಸಿಬಿ ಪೊಲೀಸರು ನಗರದಲ್ಲಿ ಸರಣಿ ಬೈಕ್ ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ರಜತ ಶಿವಣಗೇಕರ ಮತ್ತು ವಿಠಲ ಆರೇರ ಎಂಬುವವರಿಂದ 1.20 ಲಕ್ಷ ರೂ. ಮೌಲ್ಯದ 5 ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಎಪಿಎಂಸಿ ಮತ್ತು ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಕಳ್ಳತನಗಳು ನಡೆದಿದ್ದವು. ಪಿಎಸ್‌ಐ ಮಂಜುನಾಥ ಭಜಂತ್ರಿ ನೇತೃತ್ವದ ವಿಶೇಷ ತಂಡದ ಈ ಕಾರ್ಯಕ್ಕೆ ಹಿರಿಯ ಅಧಿಕಾರಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.


ಮತ್ತೊಂದೆಡೆ, ಶಹಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಟಕಾ ದಂಧೆಯ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಮುಂಬೈ ಮಟಕಾ ಆಟದಲ್ಲಿ ತೊಡಗಿದ್ದ ಶುಭಂ ಕನ್ನೂಕಲೆ, ಮಿಲೀಂದ ಸುತಾರ್ ಸೇರಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದ್ದು, 11 ಸಾವಿರಕ್ಕೂ ಅಧಿಕ ನಗದು ಹಣವನ್ನು ಜಪ್ತಿ ಮಾಡಲಾಗಿದೆ. ಇದಲ್ಲದೆ, ತಿಲಕವಾಡಿಯ ಇಂದ್ರಪ್ರಸ್ಥ ನಗರದಲ್ಲಿ ಗಾಂಜಾ ಸೇವಿಸಿ ಸಾರ್ವಜನಿಕ ಸ್ಥಳದಲ್ಲಿ ಅಸಹಜವಾಗಿ ವರ್ತಿಸುತ್ತಿದ್ದ ವಿರಾಜ ಕಂಗ್ರಾಳಕರ ಮತ್ತು ಸುನೀಲ ಅಸಲಕರ ಎಂಬ ಇಬ್ಬರು ಯುವಕರನ್ನು ಮಾರ್ಕೆಟ್ ಪೊಲೀಸರು ಬಂಧಿಸಿ, ಎನ್‌ಡಿಪಿಎಸ್ ಕಾಯ್ದೆಯಡಿ ಕ್ರಮ ಜರುಗಿಸಿದ್ದಾರೆ. ಒಟ್ಟಾರೆ ಆರು ಜನ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ತನಿಖೆ ಮುಂದುವರಿಸಲಾಗಿದೆ.

Tags:

error: Content is protected !!