Bagalkot

ವಿರಾಟ್ ಹಿಂದೂ ಸಮ್ಮೇಳನ ನಿಮಿತ್ತ ಕೇಸರಿ ಮಯವಾದ ಬಾಗಲಕೋಟೆಯ ನವನಗರ; ಭವ್ಯ ಶೋಭಾಯಾತ್ರೆಯಲ್ಲಿ ಸಾವಿರಾರು ಭಕ್ತರ ಭಾಗಿ

Share

ಬಾಗಲಕೋಟೆಯ ನವನಗರದಲ್ಲಿಂದು ಹಿಂದೂ ಶಕ್ತಿಯ ಜಾಗೃತಿ ಪರ್ವ ಆರಂಭವಾಗಿದೆ. ವಿರಾಟ್ ಹಿಂದೂ ಸಮ್ಮೇಳನದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಭವ್ಯ ಶೋಭಾಯಾತ್ರೆಯು ಇಡೀ ನಗರವನ್ನು ಕೇಸರಿಮಯಗೊಳಿಸಿತು.

ಬಾಗಲಕೋಟೆಯ ನವನಗರದಲ್ಲಿ ಇಂದು ‘ವಿರಾಟ್ ಹಿಂದೂ ಸಮ್ಮೇಳನ’ದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಭವ್ಯ ಶೋಭಾಯಾತ್ರೆಯು ಸಂಭ್ರಮದಿಂದ ಸಂಪನ್ನಗೊಂಡಿತು. ನವನಗರದ ಉದ್ಭವ ಗಣೇಶ ದೇವಾಲಯದಿಂದ ಆರಂಭವಾದ ಈ ಮೆರವಣಿಗೆಯಲ್ಲಿ ನೂರಾರು ಯುವಕರು ಹಾಗೂ ಮಹಿಳೆಯರು ಶ್ರದ್ಧಾ ಭಕ್ತಿಯಿಂದ ಪಾಲ್ಗೊಂಡಿದ್ದರು. ಯುವತಿಯರ ತಂಡದ ಆಕರ್ಷಕ ಡೊಳ್ಳು ಕುಣಿತ ಹಾಗೂ ವಿವಿಧ ಜಾನಪದ ಕಲಾತಂಡಗಳ ಮೇಳವು ಮೆರವಣಿಗೆಗೆ ಮತ್ತಷ್ಟು ಮೆರುಗು ನೀಡಿತು. ನವನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿದ ಈ ಶೋಭಾಯಾತ್ರೆಯುದ್ದಕ್ಕೂ ಹಿಂದೂ ಸಂಘಟನೆಯ ಘೋಷಣೆಗಳು ಮೊಳಗಿದವು.

ಮೆರವಣಿಗೆಯ ಬಳಿಕ ನವನಗರದ ಸೆಕ್ಟರ್ 52ರಲ್ಲಿ ಬಹಿರಂಗ ವೇದಿಕೆ ಕಾರ್ಯಕ್ರಮ ಆಯೋಜಿಸಲಾಗಿದ್ದು, ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖಂಡರಾದ ಹನಮಂತ ಮಳಲಿ ಅವರು ಮುಖ್ಯ ಭಾಷಣಕಾರರಾಗಿ ಪಾಲ್ಗೊಂಡು ಸಮಾಜ ಜಾಗೃತಿಯ ಕುರಿತು ಮಾತನಾಡಲಿದ್ದಾರೆ. ಶೋಭಾಯಾತ್ರೆ ಮತ್ತು ಸಮ್ಮೇಳನದ ಹಿನ್ನೆಲೆಯಲ್ಲಿ ಬಾಗಲಕೋಟೆ ಪೋಲಿಸರು ನಗರದಾದ್ಯಂತ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು. ಸದ್ಯ ಬಹಿರಂಗ ವೇದಿಕೆ ಕಾರ್ಯಕ್ರಮ ಆರಂಭವಾಗಿದ್ದು, ಸಾವಿರಾರು ಸಂಖ್ಯೆಯಲ್ಲಿ ಹಿಂದೂ ಬಾಂಧವರು ಪಾಲ್ಗೊಂಡಿದ್ದಾರೆ.

Tags:

error: Content is protected !!