ಅಪಘಾತದಲ್ಲಿ ಸಾವನ್ನಪ್ಪಿದ ಯುವಕನ ಕುಟುಂಬ ಮನೆ ಮಗನ ಸಾವಲ್ಲು ಸಾರ್ಥಕತೆ ಮೆರೆದಿದೆ. ನಿನ್ನೆ ವಿಜಯಪುರ ನಗರದ ಹೊರವಲಯದ ಹನುಮಗಿರಿ ಬಳಿಯಲ್ಲಿ ಅಪಘಾತದಲ್ಲಿ ಬಲರಾಮ್ ಬಾಗಲಕೋಟ ತೀವ್ರ ರಕ್ತಸ್ರಾವದಿಂದ ಗಂಭೀರವಾಗಿ ಗಾಯಗೊಂಡಿದ್ದ. ಬಳಿಕ ಆತನನ್ನ ಬಿಎಲ್ಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದ. ಬಳಿಕ ಬಲರಾಮ್ ಮೃತದೇಹವನ್ನ ಕುಟುಂಬಸ್ಥರು ಬಿಎಲ್ಡಿ ಮೆಡಿಕಲ್ ಕಾಲೇಜಿಗೆ ದಾನ ಮಾಡಿದ್ದಾರೆ. ಮನೆ ಮಗನ ಸಾವಿನ ನೋವಿನ ನಡುವೆಯೂ ದೇಹವನ್ನ ದಾನ ಮಾಡುವ ಮೂಲಕ ಬಾಗಲಕೋಟ ಕುಟುಂಬ ಸಾರ್ಥಕತೆಯನ್ನ ಮೆರೆದಿದೆ. ಈ ಮೂಲಕ ಸಾರ್ವಜನಿಕರಲ್ಲಿ ದೇಹದಾನ ಅರಿವನ್ನು ಮೂಡಿಸಿದೆ..

