Belagavi

ಬಡಾಲ ಅಂಕಲಗಿ ಮರಗಳ ಮಾರಣಹೋಮಕ್ಕೆ ಧನಂಜಯ ಜಾಧವ್ ತೀವ್ರ ಆಕ್ರೋಶ ಬುಧವಾರದೊಳಗೆ ಬಂಧಿಸದಿದ್ದರೆ ಡಿಎಫ್‌ಒ ಕಚೇರಿ ಮುತ್ತಿಗೆಯ ಎಚ್ಚರಿಕೆ

Share

• ಬಡಾಲ ಅಂಕಲಗಿಯಲ್ಲಿ ಭೀಕರ ಅರಣ್ಯ ನಾಶ
• ಸೋಲಾರ್ ಯೋಜನೆ ಹೆಸರಲ್ಲಿ ಮರಗಳ ಬಲಿ
• ಅನುಮತಿಯಿಲ್ಲದೆ ಹತ್ತು ಸಾವಿರ ಮರಗಳ ಕಡಿತ
• ಬುಧವಾರದೊಳಗೆ ಬಂಧಿಸದಿದ್ದರೆ ಡಿಎಫ್‌ಒ ಕಚೇರಿ ಮುತ್ತಿಗೆ


ಬೆಳಗಾವಿ ತಾಲೂಕಿನ ಬಡಾಲ ಅಂಕಲಗಿಯ ಶ್ರೀ ಕೌರಿಗುಡಾ ರೇಣುಕಾ ದೇವಿ ದೇವಸ್ಥಾನದ ಆವರಣದಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಪರಿಸರ ವಿನಾಶ ನಡೆದಿದೆ. ಸೋಲಾರ್ ಯೋಜನೆಗಾಗಿ ಅರಣ್ಯ ಇಲಾಖೆಯ ಅನುಮತಿಯಿಲ್ಲದೆ ಹತ್ತಾರು ಸಾವಿರ ಮರಗಳನ್ನು ನೆಲಸಮಗೊಳಿಸಿರುವ ಘಟನೆ ಈಗ ಜಿಲ್ಲಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಈ ಅಕ್ರಮದ ವಿಷಯ ತಿಳಿಯುತ್ತಿದ್ದಂತೆಯೇ ಬಿಜೆಪಿ ಬೆಳಗಾವಿ ಗ್ರಾಮೀಣ ಮಾಜಿ ಮಂಡಲ ಅಧ್ಯಕ್ಷರಾದ ಧನಂಜಯ ಜಾಧವ್ ಹಾಗೂ ಗ್ರಾಮಸ್ಥರು ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಬೆಳಗಾವಿ ತಾಲೂಕಿನ ಬಡಾಲ ಅಂಕಲಗಿ ಗ್ರಾಮದ ವ್ಯಾಪ್ತಿಯಲ್ಲಿರುವ ಶ್ರೀ ಕೌರಿಗುಡಾ ರೇಣುಕಾ ದೇವಿ ದೇವಸ್ಥಾನದ ಅರಣ್ಯ ಪ್ರದೇಶದಲ್ಲಿ ಸೋಲಾರ್ ಯೋಜನೆ ಹೆಸರಿನಲ್ಲಿ ಮಹಾನ್ ಪರಿಸರ ಹಾನಿ ನಡೆದಿದೆ. ಕೇವಲ ಒಂದು ಕಿಲೋಮೀಟರ್ ದೂರದಲ್ಲಿ 55 ಎಕರೆ ಬಂಜರು ಭೂಮಿ ಲಭ್ಯವಿದ್ದರೂ, ಅಧಿಕಾರಿಗಳು ಮತ್ತು ಗುತ್ತಿಗೆದಾರರು ದಟ್ಟ ಅರಣ್ಯವನ್ನೇ ಗುರಿಯಾಗಿಸಿಕೊಂಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಅರಣ್ಯ ಇಲಾಖೆಯ ಅನುಮತಿ ಪಡೆಯದೆಯೇ ಸುಮಾರು 10,000ಕ್ಕೂ ಹೆಚ್ಚು ಮರಗಳನ್ನು ಕಡಿಯಲಾಗಿದ್ದು, ಇದರಲ್ಲಿ ಶ್ರೀಗಂಧದಂತಹ ಅಮೂಲ್ಯ ಮರಗಳನ್ನು ಬೇರುಸಹಿತ ಕಿತ್ತು ಸಾಗಿಸಿರುವುದು ಕೋಟ್ಯಂತರ ರೂಪಾಯಿ ನಷ್ಟಕ್ಕೆ ಕಾರಣವಾಗಿದೆ.ಈ ಅಕ್ರಮದ ವಿಷಯ ತಿಳಿಯುತ್ತಿದ್ದಂತೆಯೇ ಬಿಜೆಪಿ ಬೆಳಗಾವಿ ಗ್ರಾಮೀಣ ಮಾಜಿ ಮಂಡಲ ಅಧ್ಯಕ್ಷರಾದ ಧನಂಜಯ ಜಾಧವ್ ಹಾಗೂ ಗ್ರಾಮಸ್ಥರು ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಪರಿಸರ ನಾಶಕ್ಕೆ ಕಾರಣರಾದ ಗುತ್ತಿಗೆದಾರರು ಮತ್ತು ಕಂಪನಿ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಒಂದು ವೇಳೆ ಬುಧವಾರದೊಳಗೆ ತಪ್ಪಿತಸ್ಥರನ್ನು ಬಂಧಿಸದಿದ್ದರೆ, ಗುರುವಾರ ಬೆಳಿಗ್ಗೆ ಡಿಎಫ್‌ಒ (DFO) ಕಚೇರಿಗೆ ಮುತ್ತಿಗೆ ಹಾಕಿ ಬೃಹತ್ ಪ್ರತಿಭಟನೆ ನಡೆಸುವುದಾಗಿ ಗ್ರಾಮಸ್ಥರು ಆಡಳಿತ ಮಂಡಳಿಗೆ ಗಡುವು ನೀಡಿದ್ದಾರೆ. ಅಭಿವೃದ್ಧಿ ಹೆಸರಿನಲ್ಲಿ ನಡೆಯುತ್ತಿರುವ ಈ ಅರಣ್ಯ ಮಾರಣಹೋಮಕ್ಕೆ ಈಗ ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ.

Tags:

error: Content is protected !!