Hukkeri

ಹುಕ್ಕೇರಿ – ಶಿವಶರಣ ಮಾದಾರ ಚೆನ್ನಯ್ಯ ಸೇವಾ ಸಮಿತಿಯ ಉಪಾಧ್ಯಕ್ಷರಾಗಿ ಅರುಣ ಐಹೊಳೆ ಆಯ್ಕೆ.

Share

ಚಿತ್ರದುರ್ಗದ ಮಾದಾರ ಚೆನ್ನಯ್ಯ ಮಹಾಪೀಠದ ಮಾದಾರ ಚೆನ್ನಯ್ಯ ಸೇವಾ ಸಮಿತಿಯ ರಾಜ್ಯ ಉಪಾಧ್ಯಕ್ಷರನ್ನಾಗಿ ಮಾದಾರ ಚೆನ್ನಯ್ಯ ಗುರುಪೀಠದ ಜಗದ್ಗುರು ಡಾ. ಬಸವ ಮೂರ್ತಿ ಮಾದಾರ ಚೆನ್ನಯ್ಯ ಮಹಾಸ್ವಾಮಿಗಳವರು ರಾಯಭಾಗದ ಯುವ ಧುರಿಣ ಅರುಣ ಐಹೊಳೆ ಅವರನ್ನು ರಾಜ್ಯ ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ.

ಹುಕ್ಕೇರಿ ಗುರುಶಾoತೇಶ್ವರ ಸಂಸ್ಥಾನದಿಂದ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳವರು ಅರುಣ ಐಹೊಳೆ ಅವರಿಗೆ ಸತ್ಕರಿಸಿ
ಮಾತನಾಡಿದ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳವರು ಮಾದಾರ ಚೆನ್ನಯ್ಯ ಗುರುಪೀಠದ ಜಗದ್ಗುರು ಡಾ. ಬಸವ ಮೂರ್ತಿ ಮಾದಾರ ಚೆನ್ನಯ್ಯ ಮಹಾಸ್ವಾಮಿಗಳು ಮಾದಾರ ಚೆನ್ನಯ್ಯ ಪರಂಪರೆಯ ಜನಾಂಗವೆಲ್ಲವೂ ಮೊದಲು ಸಂಸ್ಕಾರವಂತ ರಾಗಬೇಕು. ಶಿಕ್ಷಣವಂತರಾಗಬೇಕು. ಜೊತೆಗೆ ದೇಶಭಕ್ತ ರಾಗಬೇಕು ಎನ್ನುವ ದೃಷ್ಟಿಕೋನದಿಂದ ಈ ಸೇವಾ ಸಮಿತಿಯನ್ನು ಹುಟ್ಟು ಹಾಕಿದ್ದಾರೆ. ಆ ನಿಟ್ಟಿನ ಜವಾಬ್ದಾರಿಯನ್ನು ಅರುಣ ಐಹೊಳೆ ಅವರಿಗೆ ನೀಡಿದ್ದು, ಗುರುಗಳು ನೀಡಿರುವಂತಹ ಜವಾಬ್ದಾರಿಯನ್ನು ಅಚ್ಚು ಕಟ್ಟಾಗಿ ನಿರ್ವಹಿಸುವುದರ ಮುಖಾಂತರ ಸಮಾಜದ ಕಲ್ಯಾಣಕ್ಕಾಗಿ ಹೆಚ್ಚು ಶ್ರಮಿಸಲಿ ಎಂದರು.

ಜವಾಬ್ದಾರಿಯನ್ನು ಸ್ವೀಕರಿಸಿದ ಶಿವಶರಣ ಮಾದಾರ ಚೆನ್ನಯ್ಯ ಸೇವಾ ಸಮಿತಿಯ ಉಪಾಧ್ಯಕ್ಷರಾಗಿ ಆಯ್ಕೆ ಆದ ಅರುಣ ಐಹೊಳೆ ಮಾತನಾಡಿ, ನನಗೆ ಎರಡು ಕಣ್ಣುಗಳು. ಒಂದು ಹುಕ್ಕೇರಿಯ ಚಂದ್ರಶೇಖರ ಶಿವಾಚಾರ್ಯರು, ಇನ್ನೊಂದು ಕಣ್ಣು ಮಾದಾರ ಚೆನ್ನಯ್ಯ ಪೀಠದ ಬಸವ ಮೂರ್ತಿ
ಮಾದಾರ ಚೆನ್ನಯ್ಯ ಸ್ವಾಮಿಗಳು ಮತ್ತು ಹುಕ್ಕೇರಿ ಚಂದ್ರಶೇಖರ ಮಹಾಸ್ವಾಮಿಗಳು ಹೇಳಿದ ಆಜ್ಞೆಯನ್ನು ಶಿರಸಾ ವಹಿಸಿ ನಾನು ಪಾಲಿಸುತ್ತೇನೆ. ಎಲ್ಲಾ ಜನಾಂಗದ ಸೇವೆಯ ಜೊತೆ ಜೊತೆಗೆ ನಮ್ಮ ಜನಾಂಗದ ಸೇವೆಯನ್ನು ಕೂಡ ರಾಜ್ಯದಾದ್ಯoತ ನಾನು ಮಾಡುತ್ತೇನೆ ಎಂದರು.
ಈ ಸಂದರ್ಭದಲ್ಲಿ ಮಾದಾರ ಚನ್ನಯ್ಯ ಸೇವಾ ಸಮಿತಿ ಸದಸಸ್ಯರು ಸಾರ್ವಜನಿಕರು ಉಪಸ್ಥಿತರಿದ್ದರು.

Tags:

error: Content is protected !!