DEATH

ಸಾವಿನಲ್ಲೂ ಒಂದಾದ ವೃದ್ಧ ದಂಪತಿ.

Share

ಅವ್ರು 58 ವರ್ಷದ ಹಿಂದೆ ಮದುವೆಯಾಗಿದ್ದ ವೃದ್ಧ ದಂಪತಿಗಳು. ಸತಿ-ಪತಿಯ ಪ್ರೀತಿಯ ದಾಂಪತ್ಯ ಬದುಕು ಆ ಗ್ರಾಮದ ಇತರರಿಗೆ ಮಾದರಿಯಾಗಿತ್ತು. ನಿನ್ನೆ ಎದೆ ನೂವು ಅಂತಾ ಆಸ್ಪತ್ರೆಗೆ ದಾಖಲಾಗಿದ್ದ ವೃದ್ಧ ಪತಿ ಹೃದಯಾಘಾತದಿಂದ ಸಾವನ್ನಪ್ಪಿದ್ರು.ಮನೆಗೆ ಮೃತನ ಶವ ತಂದು ಪೂಜೆ ಮಾಡ್ತಿದ್ದ ವೇಳೆ ಪತ್ನಿ ಕೂಡಾ ಕುಸಿದು ಬಿದ್ದು ಆಸ್ಪತ್ರೆ  ತಲುಪುವಷ್ಠರಲ್ಲಿ ಸಾವನ್ನಪ್ಪಿದ್ದಾಳೆ.ಸಾವಿನಲ್ಲೂ ಒಂದಾದ ವೃದ್ಧ ದಂಪತಿಗಳು.ಈ ಕುರಿತು ಒಂದು ರಿಪೋರ್ಟ್ ಇಲ್ಲಿದೆ ನೋಡಿ…..

ಹೌದು 58 ವರ್ಷದ ದಾಂಪತ್ಯ ಬದುಕಿಗೆ ವಿದಾಯ ಹೇಳಿದ ವೃದ್ಧ ದಂಪತಿಗಳು. ಮತ್ತೊಂದೆಡೆ ಸಾವಿನ್ನೂ ಒಂದಾಗಿ ಇಹಲೋಕ ತ್ಯೇಜಿಸಿದ ವೃದ್ಧ ದಂಪತಿಗಳಿಗೆ ಮರು ಮದುವೆ,ಅಕ್ಷತೆ ಹಾಕಿದ ಗ್ರಾಮಸ್ಥರು. ಇನ್ನೊಂದೆಡೆ ಮೃತ ವೃದ್ಧ ದಂಪತಿಗಳನ್ನ ಮೆರವಣಿಗೆ ಮೂಲಕ ಅಮಥ್ಯ ಸಂಸ್ಕಾರ ನೆರವೇರಿಸಿದ ಗ್ರಾಮಸ್ಥರು‌.ಇಂತಹ ಮನಕಲಕುವ ಭಾವುಕ ಘಟನೆಗೆ ಸಾಕ್ಷಿಯಾಗಿದ್ದು ಬಾಗಲಕೋಟೆ ಜಿಲ್ಲೆ ಬೀಳಗಿ ತಾಲ್ಲೂಕಿನ ಹೊಸರೊಳ್ಳಿ ಗ್ರಾಮದಲ್ಲಿ ಹೃದಯಾಘಾತ ದಿಂದ ವೃದ್ದ ಸತಿ-ಪತಿ ಒಂದೇ ದಿನ ಘಟಿಸಿದ ಅಪರೂಪದ ಸಾವು. ಹೌದು ಹೊಸರೊಳ್ಳಿ ಗ್ರಾಮದ ಅಪ್ಪಣ್ಣ ಗಲಗಲಿ (84), ಪತ್ನಿ ಯಲ್ಲವ್ವ ಅಪ್ಪಣ್ಣ ಗಲಗಲಿ (72)  ಸಾವಿನಲ್ಲಿ ಒಂದಾದ ಅಪರೂಪದ ದಂಪತಿಗಳು.ಇವರು ಮೃತ ಪಟ್ಟ ಬಳಿಕ ಮನೆ ಮುಂದೆ ಶಾಮಿಯಾನ ಹಾಕಿಸಿ,ಶಿವಭಜನೆ ಬಳಿಕ  ವೃದ್ಧ ಮೃತ ದಂಪತಿಗಳಿಗೆ  ಪೂಜೆ.ನಂಬರ ಮರು ಮದುವೆ ಮಾಡಿ ಅಕ್ಷೆತ ಹಾಕುವ ಮೂಲಕ ಸಾವಿನಲ್ಲೂ ಶುಭಕಾರ್ಯ ನೆರವೇರಿಸಿದ್ದಾರೆ…

ಇನ್ನು ನಿನ್ನೆಯಷ್ಟೆ ಎದೆ ನೋವಿನಿಂದ ಅಪ್ಪಣ್ಣ ಗಲಗಲಿ ಬಾಡಗಂಡಿ ಆಸ್ಪತ್ರೆಗೆ ದಾಖಲಾಗಿದ್ರು.ಆಸ್ಪತ್ರೆಯಲ್ಲೆ ಹೃದಯಾಘಾತದಿಂದ ಮೃತರಾಗಿದ್ದು ವೈದ್ಯರು ದೃಡಪಡಿಸಿದ್ರು ಅಪ್ಪಣ್ಣನ  ಮೃತದೇಹ ಮನೆಗೆ ತಂದು ಕುಟುಂಬಸ್ಥರು ಪೂಜೆ ಸಲ್ಲಿಸ್ತಿದ್ರು,ಈ ವೇಳೆ ಮೃತ ಅಪ್ಪಣ್ಣ ಪತ್ನಿ ಯಲ್ಲವ್ವಳಿಗೂ ಎದೆ ನೋವು ಕಾಣಿಸಿಕೊಂಡಿದ್ದು ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋದ್ರು.ಆಸ್ಪತ್ರೆಯಲ್ಲಿ
ಪತ್ನಿ ಯಲ್ಲವ್ವ  ಹೃದಯಾಘಾತದಿಂದ ಸಾವು ಸಂಬವಿಸಿತು.ಬಳಿಕ ಇಬ್ಬರ ಮೃತದೇಹ ಒಟ್ಟಿಗೆ ಕೂರಿಸಿ ಮರು ಮದುವೆ,ಅಕ್ಷತೆ ಹಾಕಿದ್ರು.ಗ್ರಾಮದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ಮೂಲಕ ಸಾಗಿ ಬಂದು ಅಂತ್ಯಸಂಸ್ಕಾರ ಕಾರ್ಯವನ್ನ  ಗ್ರಾಮಸ್ಥರು ನೆರವೇರಿಸಿದ್ರು….

ಒಟ್ಟಿನಲ್ಲಿ ವೃದ್ದ ದಂಪತಿಗಳು ಪರಸ್ಪರ ಅಪಾರ ಪ್ರೀತಿ ಹೊಂದಿದ್ದರು. ಒಬ್ಬರಿಲ್ಲದೆ ಮತ್ತೊಬ್ಬರು ಬದುಕಲು ಸಾಧ್ಯವಿಲ್ಲ ಎನ್ನುವಂತಿದ್ದ ಅವರ ಜೀವನ ಸಾವಿನಲ್ಲೂ ಒಂದಾದಂತೆ ಕಂಡುಬಂದಿದ್ದು, ವೃದ್ಧ ದಂಪತಿಗಳ ದಾಂಪತ್ಯ ಬಾಂಧವ್ಯಕ್ಕೆ ಜನರು ಕಣ್ಣೀರಿನ ಗೌರವ ಸಲ್ಲಿಸಿದ್ದಂತೂ ಸುಳ್ಳಲ್ಲ…

Tags:

error: Content is protected !!