ಸೆಕ್ಯೂರಿಟಿ ಕೆಲಸಕ್ಕೆ ಬಂದಿದ್ದ ಯುವಕನೊಬ್ಬ ನಿರ್ಜನ ಪ್ರದೇಶದಲ್ಲಿ ಮರಕ್ಕೆ ನೇಣು ಬೀಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾದ ಘಟನೆ ಧಾರವಾಡ ಜಿಲ್ಲೆಯ ನವನಗರದ ಹೊರವಲಯದಲ್ಲಿ ಇಂದು ನಡೆದಿದೆ.

ಕಳಸ ಗ್ರಾಮದ ರಮೇಶ (20) ಯುವಕ ಮೃತನೆಂದು ಗುರುತಿಸಲಾಗಿದೆ. ಇನ್ನೂ ಯುವಕ ವಾಚ್ ಮೆನ್ ಕೆಲ್ಸಕ್ಕೆ ನವನಗರಕ್ಕೆ ಬಂದಿದ್ದನು ಎನ್ನಲಾಗಿದೆ. ಸ್ಥಳೀಯರ ಮಾಹಿತಿ ಮೇರೆಗೆ ಘಟನಾ ಸ್ಥಳಕ್ಕೆ ಎಪಿಎಂಸಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಯುವಕನ ಸಾವೀನ ನಿಖರ ಕಾರಣ ಪೊಲೀಸರ ಪ್ರಾಥಮಿಕ ತನಿಖೆಯ ಬಳಿಕ ಯುವಕನ ಸಾವಿನ ಅಸಲಿ ವಿಚಾರ ಹೊರಬರಬೇಕಾಗಿದೆ. ನವನಗರ ಪೊಲೀಸ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
