Accident

ಧಾರವಾಡ ಹೊರವಲಯದ ರಾ.ಹೆದ್ದಾರಿಯಲ್ಲಿ ಭೀಕರ ಅಪಘಾತ, ಓರ್ವ ಚಾಲಕ ಸಾವು… ಗರಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ.

Share

ಕೆಟ್ಟು ನಿಂತ ಲಾರಿಯ ಚಾಲಕ ಬೇರೆ ವಾಹನ ಡೈವರ್ಟ್ ಮಾಡಲು ಹಿಂದೆ ನಿಂತು ನಿಂತು ಸಿಗ್ನಲ್ ತೋರುವ ವೇಳೆ ಹಿಂದೆ ಇಂದ ಬಂದ ಇನ್ನೊಂದು ಲಾರಿ ರಭಸವಾಗಿ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಸ್ಥಳದಲ್ಲಿಯೇ ದಾರುಣವಾಗಿ ಸಾವನಪ್ಪಿದ ಘಟನೆ ಧಾರವಾಡ ಹೊರವಲಯದ ರಾಷ್ಟ್ರೀಯ ಹೆದ್ದಾರಿಯ ಮುಮ್ಮಿಗಟ್ಟಿ ಬಳಿ ನಡೆದಿದೆ.

ವೈ- ಧಾರವಾಡ ಹೊರವಲಯದ ಮುಮ್ಮುಗಟ್ಟಿ ಬಳಿಯ ರಾಷ್ಟ್ರೀಯ ಹೆದ್ದಾರಿ ಬಳಿಯಲ್ಲಿ ಈ ದುರ್ಘಟನೆ ನಡೆದೆದ್ದು, ಧಾರವಾಡ ತಾಲ್ಲೂಕಿನ ಭದ್ರಾಪುರದ ಮೂಲದ ಮೃತ ಚಾಲಕನೆಂದು ತಿಳಿದು ಬಂದಿದೆ. ಮ್ಯಾಗ್ನಿಸ್ ತುಂಬಿದ ಲಾರಿ ಬೆಳಗಾವಿ ಕಡೆಗೆ ಹೊರಟ್ಟಿದ ವೇಳೆ ಲಾರಿ ತಾಂತ್ರಿಕ ದೋಷದಿಂದ ಕೆಟ್ಟು ನಿಂತಿದೆ. ಈ ವೇಳೆ ಚಾಲಕ ಬೇರೆ ವಾಹನಗಳ ಡೈವರ್ಸನಗೆ ಸಿಗ್ನಿಲ್ ಕೊಡಲು ಹಿಂಬದಿ ಬಂದಿದ್ದಾನೆ. ಈ ವೇಳೆ ವೇಗವಾಗಿ ಬಂದ ವಾಹಮ ರಭಸವಾಗಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿ ಮ್ಯಾಗ್ನೀಸ್ ಲಾರಿ ಚಾಲಕ ಕೊನೆಯುಸಿರೆಳೆದಿದ್ದಾನೆ. ಸ್ಥಳೀಯರ ಮಾಹಿತಿ ಮೇರೆಗೆ ಘಟನಾ ಸ್ಥಳಕ್ಕೆ ಬಂದ ಗರಗ ಠಾಣೆಯ ಪೊಲೀಸರು ಪರಿಶೀಲನೆ ಕೈಗೊಂಡು, ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾ ಆಸ್ಪತ್ರೆಗೆ ರವಾನಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ. ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:

error: Content is protected !!