ಸುಜಾತಾ ಹಂಡಿ ಮೇಲೆ ನಡೆದ ದೌರ್ಜನ್ಯ ಪ್ರಕರಣ
ಸಂಬಂಧಿಸಿದಂತೆ ಇಂದು ಹುಬ್ಬಳ್ಳಿ ಯಲ್ಲಿ ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಸಿ ಮಂಜುಳಾ ಅವರು ಸುಜಾತಾ ಹಂಡಿ ಮನೆಗೆ ಭೇಟಿನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ದೈರ್ಯ ತುಂಬಿದ್ದಾರೆ. ಇನ್ನು ಇತ್ತ ಕಾಂಗ್ರೆಸ ಮುಖಂಡರು ಹಾಗೂ ಕಾರ್ಯಕರ್ತರು ಕೇಶ್ವಾಪುರ ಪೊಲೀಸ್ ಠಾಣೆಗೆ ಬಿಟಿನೀಡಿ ಪ್ರಶಾಂತ ಎಂಬುವರು ಏಳು ಜನರ ಮೇಲೆ ದೂರು ನೀಡಿದ್ದರು ಆದರೆ ಸುಜಾತ ಮಾತ್ರ ಬಂಧನ ಮಾಡಲಾಗಿದೆ. ನಮ್ಮ ಕಾರ್ಯಕರ್ತರ ಮೇಲೆ ದಬ್ಬಾಳಿಕೆ ಮಾಡಿದರೆ ಸುಮ್ಮನೆ ಇರೋದಿಲ್ಲ ಎಂದಿದ್ದಾರೆ. ಈ ಕುರಿತು ಕಂಪ್ಲಿಟ್ ಡೀಟೈಲ್ ಇಲ್ಲಿದೆ ನೋಡಿ…

ಹೌದು ಇಂದು ಹುಬ್ಬಳ್ಳಿ ಯಲ್ಲಿ ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಸಿ ಮಂಜುಳಾ ಅವರು ಸುಜಾತಾ ಹಂಡಿ ಮನೆಗೆ ಬಿಟಿನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಮಾತನಾಡಿದ ಅವರು ಕಾಂಗ್ರೆಸ್ ಕುಮ್ಮಕ್ಕು ಬಗ್ಗೆ ವಾಸ್ತವಾಂಶ ತಿಳಿಯಲು ಬಂದಿದ್ದೇನೆ. ಈ ಬಗ್ಗೆ
ಧಾರವಾಡದಲ್ಲಿ ಜಿಲ್ಲಾಧಿಕಾರಿ ಕೂಡಾ ಭೇಟಿ ಮಾಡ್ತೇವೆ ಇದು ಪೊಲೀಸರ ದೌರ್ಜನ್ಯ
ಕಾಂಗ್ರೆಸ್ ಪ್ರಾಯೋಜಿತ ಗುಂಡಾಗಿರಿಯಾಗಿದೆ ಎಂದು ಆಟೋಪಿಸಿದ ಅವರು. ಪೊಲೀಸ್ ಯುನಿಪಾರ್ಮ್ ಹಾಕಿಕೊಂಡು ಸಿಪಿಐ ಹಟ್ಟಿ ಗುಂಡಾಗಿರಿ ಮಾಡಿದ್ದಾರೆ. ಅವಳೆ ಬಟ್ಟೆ ಹರಿದುಕೊಂಡಿದ್ದಾಳೆ ಅಂತ ಸಿಎಂ ಹಗರು ಮಾತು ಹೇಳಿದ್ದಾರೆ ಈ ರೀತಿ ಹೇಳಿಕೆ ನೀಡಲು ಮಾನ ಮರ್ಯಾದೆ ಇಲ್ವಾ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಪಾಲಿಕೆ ಸದಸ್ಯೆ ಸುವರ್ಣಾ ಕಲಕುಂಟ್ಲಾ ನಿರ್ದಾಕ್ಷಿಣ್ಯವಾಗಿ ಕ್ರಮವಾಗಬೇಕು.
ಆಕೆಯನ್ನು ಕೂಡಲೇ ಬಂಧಿಸಬೇಕು. ಈ ಬಗ್ಗೆ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ನಾವು ದೂರು ನೀಡ್ತೇವೆ ಎಂದರು.
ಇನ್ನು ಇತ್ತು ಕಂಗ್ರೆಸ್ ಮುಖಂಡರು ಕಾರ್ಯಕರ್ತರು. ಕೇಶ್ವಾಪುರ ಪೊಲೀಸ್ ಠಾಣೆಗೆ ಭೇಟಿನೀಡಿ. ಗಾಯಗೊಂಡ ಪ್ರಶಾಂತ ಎಂಬುವರು ಜನವರಿ 2 ರಂದು ಏಳು ಜನರ ವಿರುದ್ಧ ದೂರು ನೀಡಿದ್ದರು. ಆದರೆ ಸುಜಾತಾ ಹಂಡಿ ಮಾತ್ರ ಬಂಧನ ಮಾಡಲಾಗಿದೆ.ಇನ್ನುಳಿದವರ ಬಂಧನವಾಗಬೇಕು ಎಂದು ಅಗ್ರಸಿದ ಅವರು
ನಮ್ಮ ಕಾರ್ಯಕರ್ತರ ಮೇಲೆ ದಬ್ಬಾಳಿಕೆ ಮಾಡಿದ್ರೆ ಸುಮ್ಮನಿರಲ್ಲಾ ಎಂದಿದ್ದಾರೆ.
ಒಟ್ಟಿನಲ್ಲಿ ಮಹಿಳೆ ಮೇಲೆ ವಿವಸ್ತ್ರ ಹಲ್ಲೆ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದ್ದು. ಸಾರ್ವಜನಿ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು ಪ್ರಕರಣದ ಸತ್ಯಾಂಶ ಹೊರಬರಬೇಕಿದೆ.
