hubbali

ಭಾರತ ಹಿಂದೂ ರಾಷ್ಟ್ರ ಮೋಹನ್ ಭಾಗವತ್ ಹೇಳಿದ್ದು ಸತ್ಯೆ : ಸಂಸದ ಜಗದೀಶ್ ಶೆಟ್ಟರ್

Share

ಆ‌ರ್.ಎಸ್‌.ಎಸ್ ಪ್ರಮುಖರಾದ ಮೋಹನ್ ಭಾಗವತ್‌ ಹೇಳಿದ್ದು ‘ಭಾರತ ಹಿಂದೂ ರಾಷ್ಟ್ರ, ಅದಕ್ಕೆ ಅನುಮೋದನೆ ಅಗತ್ಯವಿಲ್ಲ ಎಂಬ ವಿಚಾರ, ಹೌದು ಇದರಲ್ಲಿ ಯಾವುದೇ ಪ್ರಶ್ನೆ ಇಲ್ಲ. ಖಂಡಿತವಾಗಿಯೂ ಮೋಹನ್ ಭಾಗವತ್ ಹೇಳಿಕೆಯಲ್ಲಿ ಸತ್ಯಾಂಶ ಇದೆ ಎಂದು ಸಂಸದ ಜಗದೀಶ್‌ ಶೆಟ್ಟರ್ ಹೇಳಿದರು.

ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಭಾರತ ದೇಶದಲ್ಲಿ ಬಹುಜನ ಸಂಖ್ಯೆಯಲ್ಲಿ ಹಿಂದೂಗಳು ಇದ್ದಾರೆ. ಅಧಿಕೃತ ಹಿಂದೂ ರಾಷ್ಟ್ರ ಅಂತ ಕರೆಯಲ್ಲ, ಆದರೆ ಇಲ್ಲಿ ಬಹುಸಂಖ್ಯಾವುಳ್ಳವರು ಹಿಂದುಗಳು, ಹಿಂದೂ ರಾಷ್ಟ್ರ ಅಂತ ಜಗತ್ತಿನಲ್ಲಿ ಮಾನ್ಯತೆ ಇದೆ. ಅಂದು ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರೂ ಗಟ್ಟಿಯಾಗಿ ಹಿಡಿದು ದೇಶ ವಿಭಜನೆಗೆ ಅವಕಾಶ ಕೊಡಬಾರದಿತ್ತು, ಅಂದು ಬ್ರಿಟಿಷರು ಭಾರತ ಪಾಕಿಸ್ತಾನ ಅಂತ ಡೆವೈಡ್ ಮಾಡಿದರು. ಮಹಾತ್ಮ ಗಾಂಧಿ ಅವರು ವಿಭಜನೆ ಮಾಡಿದರೆ ನನ್ನ ಹೆಣದ ಮೇಲೆ ಮಾಡಿ ಅಂದಿದ್ದರು. ಬ್ರಿಟಿಷರ ನೀತಿ ಒಡೆದು ಆಳುವ ನೀತಿ ಆಯಿತು, ದೇಶ ವಿಭಜನೆ ಮಾಡುವಾಗ ಭಾರತದಲ್ಲಿನ ಮುಸ್ಲಿಮರನ್ನ ಪಾಕಿಸ್ತಾನಕ್ಕೆ ಕಳುಹಿಸಿ, ಪಾಕಿಸ್ತಾನದಲ್ಲಿನ ಹಿಂದೂಗಳನ್ನ ಭಾರತಕ್ಕೆ ಕಳುಹಿಸಬೇಕಾಗಿತ್ತು, ಹೀಗೆ ಮಾಡಿದ್ದರೆ ಯಾವುದೇ ಪ್ರಶ್ನೆ ಬರತಿರಲಿಲ್ಲ ಎಂದರು.

ರಾಜ್ಯಪಾಲರಿಗೆ ಕಾಂಗ್ರೆಸ್ ನಿಂದ ಅವಮಾನ ಮಾಡಿದ ಪ್ರಕರಣ ವಿಚಾರ, ರಾಜ್ಯಪಾಲರಿಗೆ ಅವಮಾನ ಮಾಡುವುದು ಸರಿಯಲ್ಲ. ರಾಜ್ಯಪಾಲರು ಯಾವುದೇ ರೀತಿಯ ಸಂವಿಧಾನ ಬಾಹಿರ ಕೆಲಸ ಮಾಡಿಲ್ಲ, ಸಂವಿಧಾನ ಅನ್ವಯ ಕೆಲಸ ಮಾಡಿದ್ದಾರೆಂದರು. ಸರಕಾರದ ಭಾಷಣ ಅಡ್ರೆಸ್ ಮಾಡಿದ್ದಾರೆ. ಭಾಷಣದ ಮೊದಲ ಹಾಗೂ ಕೊನೆಯ ಪುಟ ಓದಿ ಹೋಗಿದ್ದಾರೆ. ರಾಜ್ಯಪಾಲರಿಂದ ಯಾವುದೇ ಅವಮಾನ ಮಾಡಿಲ್ಲ. ರಾಜ್ಯಪಾಲರ ಮೇಲೆ ಕೈ ಮಾಡುವುದು ಅವಮಾನ ಸರಿಯಲ್ಲ, ಹರಿಪ್ರಸಾದ್ ಹಿರಿಯ ನಾಯಕರು ಸರಿಯಾಗಿ ನಡೆದುಕೊಳ್ಳಬೇಕು ಎಂದು ಗರಂ ಆದರು.

Tags:

error: Content is protected !!