ಕೆ ಎಲ್ ಇ ಇಂಜಿನಿಯರಿಂಗ್ ಕಾಲೇಜಿನ ಎಮ್ ಸಿ ಎ ವಿಭಾಗದ ಮುಖ್ಯಸ್ಥರಾದ ಸುನೀಲ ಶಿಂಧೆ ಇವರು ಮಂಡಿಸಿದ “ಎ ಸ್ಟಡಿ ಆನ್ ಸ್ಕ್ರಿಪ್ಟ್ ಐಡೆಂಟಿಫಿಕೆಶನ್ ಇನ್ ಡಿಜಿಟಲ್ ಡಾಕ್ಯುಮೆಂಟ್ ಇಮೆಜಸ್ ಇನ್ ಮಲ್ಟಿಲಿಂಗ್ಯುವಲ್ ಎನ್ವಿರಾನಮೆಂಟ್” ವಿಷಯದ ಪ್ರಬಂಧಕ್ಕೆ ವಿಶ್ವೆಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಪಿ.ಎಚ್.ಡಿ ಪದವಿ ನೀಡಿದೆ ಎಂದು ಕಾಲೇಜಿನ ಪ್ರಾಚಾರ್ಯರಾದ ಡಾ. ದರ್ಶನಕುಮಾರ ಬಿಳ್ಳೂರ ತಿಳಿಸಿದ್ದಾರೆ.

ಇವರಿಗೆ ಕೆ ಎಲ್ ಇ ಎಮ್ ಎಸ್ ಶೆಷಗಿರಿ ತಾಂತ್ರಿಕ ಮಹಾವಿದ್ಯಾಲಯದ ಕಂಪ್ಯೂಟರ್ ಸಾಯನ್ಸ್ ವಿಭಾಗದ ಪ್ರಾಧ್ಯಾಪಕರಾದ ಡಾ. ವಿ. ಎಸ್. ಮಳಿಮಠ ಮಾರ್ಗದರ್ಶನ ನೀಡಿದ್ದರು.
ಫೋಟೋ ಶಿರ್ಷಿಕೆ: ಸುನೀಲ ಶಿಂಧೆ ಇವರನ್ನ ಅಭಿನಂದಿಸುತ್ತಿರುವ ಪ್ರಾಚಾರ್ಯರಾದ ಡಾ. ದರ್ಶನಕುಮಾರ ಬಿಳ್ಳೂರ. ಈ ಸಂದರ್ಭದಲ್ಲಿ ಕಾಲೇಜಿನ ವಿಭಾಗ ಮುಖ್ಯಸ್ಥರಾದ ಪ್ರೊ. ಕುಮಾರ ಚೌಗಲಾ, ಪ್ರೊ. ಪ್ರದೀಪ ಹೊದ್ಲೂರ, ಡಾ. ವಿರಣ್ಣಾ ಮೋದಿ, ಪ್ರೊ. ಸಂಗೀತಾ ವಾಟೆಗಾಂವಕರ, ಡಾ. ಸಂಜಯ ಅಂಕಲಿ, ಡಾ. ಜಗನ್ನಾಥ ಜಾಧವ, ಡಾ. ಸಂಜಯ ಹನಗಂಡಿ, ಡಾ. ಸಚೀನ ಮೆಕ್ಕಳಕಿ ಉಪಸ್ಥಿತರಿದ್ದರು.
