Kagawad

ಐನಾಪುರದ ಸಿದ್ದೇಶ್ವರ ಜಾತ್ರೆ: ಎತ್ತಿನ ಗಾಡಿ ಸ್ಪರ್ಧೆಯಲ್ಲಿ ಸಿದ್ದೇಶ್ ಗಾಣಿಗೇರ್ ಪ್ರಥಮ

Share

ಐನಾಪುರದ ಸಿದ್ದೇಶ್ವರ ದೇವರ ಜಾತ್ರೆ ನಿಮಿತ್ಯ ಹಮ್ಮಿಕೊಂಡ ಎತ್ತಿನ ಗಾಡಿಗಳ ಶೆರೆತು ಅತ್ಯಂತ ತುರಿಸಿನಿಂದ ಜರುಗಿದೆ, ಇದರಲ್ಲಿ ಪ್ರಥಮ ಸ್ಥಾನದ ಬಹುಮಾನ ಇದೆ ಐನಾಪುರ್ ರೈತ ಸಿದ್ದೇಶ್ ಮಲ್ಲಪ್ಪಾ ಗಾಣಿಗೇರ್ ಇವರ ಎತ್ತಿನ ಗಾಡಿ ಪಡೆದುಕೊಂಡಿದ್ದು ಇವರಿಗೆ ಮಾಜಿ ಸಚಿವ ಶ್ರೀಮಂತ ಪಾಟೀಲ್ ಇವರ ನೀಡಿರುವ ಒಂದು ಲಕ್ಷ ರೂಪಾಯಿ ಬಹುಮಾನ ನೀಡಿ ಗೌರವಿಸಲಾಯಿತು.

ರವಿವಾರ ಸಂಜೆ ಐನಾಪುರ್- ಮೂಳೆ ಮಾರ್ಗದಲ್ಲಿ 12 ಕಿಮೀ ಅಂತರದ ಶೆರೆತು ನೆರ್ವೇರಿತು ಇದರಲ್ಲಿ ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳಿಂದ ಹೆಸರಾಂತ 9 ಜೋಡಿ ಎತ್ತಿನ ಗಾಡಿಗಳು ಸ್ಪರ್ಧಿಸಿದವು.

ಈ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಅಥಣಿ ತಾಲೂಕಿನ ಕಲೋತಿ ಗ್ರಾಮದ ಬಾಳು ನಾಯಕ್ ಇವರ ಎತ್ತುಗಳು ಪಡೆದುಕೊಂಡವು. ಇವರಿಗೆ ಮಾಜಿ ಶಾಸಕರು ಶಿರಗುಪ್ಪಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಕೆ ಪಿ ಮಗ್ಗೆನವರ್ ಇವರ ನೀಡಿರುವ 70ಸಾವಿರ ರೂಪಾಯಿ ಬಹುಮಾನ ನೀಡಿ ಗೌರವಿಸಿದರು.
ತೃತಿಯ ಸ್ಥಾನ ಶೀಡಬಾಳ ಪಟ್ಟಣದ ಆಕಾಶ್ ಪಾಟೀಲ್ ಇವರ ಎತ್ತಿನ ಗಾಡಿ ಪಡೆದುಕೊಂಡಿದೆ ಇವರಿಗೆ 40ಸೋವಿರ ರೂಪಾಯಿ ಬಹುಮಾನ ಈರಣ್ಣ ಬಾಗಾದಿ ಇವರು ನೀಡಿದರು ನಾಲ್ಕನೇ ಸ್ಥಾನ ಬಿಜಾಪುರ ಜಿಲ್ಲೆ ಅತಾಲಟ್ಟಿ ಗ್ರಾಮದ ತಾನಾಜಿ ಜಾದವ್ ಇವರ ಎತ್ತಿನ ಗಾಡಿ ಪಡೆದುಕೊಂಡಿದೆ ಇವರಿಗೆ ಇಲಾಹಿ ಮುಲಾ ಇವರೆ ನೀಡಿರುವ 20 ಸಾವಿರ ರೂಪಾಯಿ ಬಹುಮಾನ ನೀಡಿ ಗೌರವಿಸಲಾಯಿತು.

ಸ್ಪರ್ಧೆ ಯಶಸ್ಸು ಗೊಳಿಸಲು ಜಾತ್ರಾ ಕಮಿಟಿ ಅಧ್ಯಕ್ಷ ದಾದಾ ಜನ್ತನವರ್, ಉಪಾಧ್ಯಕ್ಷ ಸಂತೋಷ್ ಪಾಟೀಲ್, ತಾತ್ಯಾಸಾಹೇಬ ಕೊರುಬು, ಬಾಳು ಮಡಿವಾಳ,
ಅನ್ನಾಸಾಹೇಬ್ ಡುಗುನವರ್, ಬಾಬಾ ಪಾಟೀಲ್, ರಾಜೇಂದ್ರ ಪೋತದಾರ, ತಮ್ಮನಾ ಪಾರಶೆಟ್ಟಿ, ನ್ಯಾಯವಾದಿ ಸಂಜಯ್ ಕುಚುನೂರೆ ರಾಕೇಶ್,
ಅನ್ನಸಾಹೇಬ್ ಜಾದವ್ ನಿಖಿಲ್ ಮಹಾಜನ್, ಉದಯ್ ಬಾಳಿಕಾಯಿ, ಸಿದ್ದರಾಯ್ ಮಾಲಗಾವೆ ಸೇರಿದಂತೆ ಅನೇಕ ರೈತರು ಪಾಲ್ಗೊಂಡಿದ್ದರು.

Tags:

error: Content is protected !!