ಬೆಳಗಾವಿ : ಬೆಳಗಾವಿ ಹವ್ಯಕರ ಕ್ಷೇಮಾಭಿವೃದ್ಧಿ ಸಂಘದಿಂದ ವೈವಿದ್ಯಮಯ ಕಾರ್ಯಕ್ರಮಗಳೊಂದಿಗೆ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಯಿತು.
ಶ್ರೀಕೃಷ್ಣ ದೇವರಾಯ ವೃತ್ತದ ಹತ್ತಿರವಿರುವ ಗೀತ-ಗಂಗಾ ಕಟ್ಟಡದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ವಿವಿಧ ಮನರಂಜನೆ ಕಾರ್ಯಕ್ರಮ, ಸಾಂಪ್ರದಾಯಿಕ ಹಾಡು, ಪ್ರತಿಭಾ ಪುರಸ್ಕಾರ, ಸಹಭೋಜನ ಮೊದಲಾದ ಕಾರ್ಯಕ್ರಮಗಳು ನಡೆದವು.
ವಿದ್ಯಾವತಿ ಹೆಗಡೆ ಪ್ರಾರ್ಥನೆ ಹಾಡಿದರು. ಸಂಘದ ಉಪಾಧ್ಯಕ್ಷ ಗಣೇಶ ಹೆಗಡೆ ಸ್ವಾಗತಿಸಿದರು. ಅಧ್ಯಕ್ಷೆ ಪೂರ್ಣಿಮಾ ಹೆಗಡೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪರಮೇಶ್ವರ ಹೆಗಡೆ ಮತ್ತು ಸತ್ಯನಾರಾಯಣ ಭಟ್ ಹವ್ಯಕರ ಸಂಘಟನೆ ಕುರಿತು ಸಲಹೆಗಳನ್ನು ನೀಡಿದರು. ಸುಶೀಲಾ ಭಟ್, ಸರಸ್ವತಿ ಹೆಗಡೆ, ಸುಪ್ರಿಯಾ ಬಾವಿಮನೆ ಸಾಂಪ್ರದಾಯಿಕ ಹಾಡುಗಳನ್ನು ಹಾಡಿದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ರಶ್ಮಿ ಹೆಗಡೆ, ಡಾ.ವಿಶಾಖಾ ಹೆಗಡೆ, ಧೀರಜ್ ಭಾವಿಮನೆ, ಪೂರ್ಣಾ ಹೆಗಡೆ, ರಾಜೇಶ್ವರಿ ಹೆಗಡೆ, ಡಾ.ಸಿಂಧೂರ ಜೋಶಿ ಮೊದಲಾದವರನ್ನು ಅಭಿನಂದಿಸಲಾಯಿತು. ಎಂ.ಎಸ್.ಭಟ್, ಸುರೇಶ ಕೆ., ರಾಮಚಂದ್ರ ಯಾಜಿ ದಂಪತಿ ಸೇರಿದಂತೆ ನೂತನವಾಗಿ ಆಗಮಿಸಿದ ಸದಸ್ಯರನ್ನು ಸಭೆಗೆ

ಪರಿಚಯಿಸಲಾಯಿತು. ಎಂ.ಟಿ. ಹೆಗಡೆ, ಸಿ.ಜಿ.ಶಾಸ್ತ್ರಿ, ಸುಬ್ರಹ್ಮಣ್ಯ ಹೆಗಡೆ, ಡಾ. ಜಿ.ಎಸ್.ಮಂಜುನಾಥ ದಂಪತಿ ಪ್ರಾಯೋಜಕತ್ವ ವಹಿಸಿದ್ದರು. ಎಂ.ಕೆ.ಹೆಗಡೆ, ಚಂದ್ರಶೇಖರ ಶಾಸ್ತ್ರಿ, ಎಂ.ಐ.ಹೆಗಡೆ, ವಿ.ಎನ್.ಹೆಗಡೆ, ಜಿ.ಎಸ್.ಬೈಲಕೇರಿ, ವಿದ್ವಾನ್ ಅರುಣ ಹೆಗಡೆ, ಸೀತಾರಾಮ ಭಾಗ್ವತ, ಶ್ರೀಮತಿ ಹೆಗಡೆ ಸೇರಿದಂತೆ ಸಂಘದ ನೂರಾರು ಸದಸ್ಯರು ಇದ್ದರು. ಸುಬ್ರಹ್ಮಣ್ಯ ಭಟ್ ಕಾರ್ಯಕ್ರಮ ನಿರೂಪಿಸಿದರು
