ಹುಚ್ಚನಾಯಿ ಒಂದು ಸಿಕ್ಕ ಸಿಕ್ಕವರ ಮೇಲೆ ದಾಳಿ ಮಾಡಿದ ಪರಿಣಾಮ ಬರೊಬ್ಬರಿ 9ಜನ ಗಾಯಗೊಂಡಿರುವ ಘಟನೆ ಧಾರವಾಡದಲ್ಲಿ ಕಳೆದ ದಿನ ಬುಧುವಾರ ನಡೆದಿದ್ದು, ಹುಚ್ಚು ನಾಯಿ ದಾಳಿಯಿಂದ ಸ್ಥಳೀಯರು ಬೆಚ್ಚಿಬಿದಿದ್ದಾರೆ.

ಧಾರವಾಡದ ಶಿರಡಿನಗರದ ಇಡೀ ಬಡಾವಣೆಯಲ್ಲಿ ಓಡಾಡಿರುವ ನಾಯಿ ಸುಮಾರು 9 ಜನರ ಮೇಲೆ ಅಟ್ಯಾಕ್ ಮಾಡಿದೆ. ಶಾಲೆಯಿಂದ ಬರುತ್ತಿದ್ದ ರಿಶೀಕ್ ಎಂಬ ಬಾಲಕನ ಮೇಲೂ ನಾಯಿ ದಾಳಿ ಮಾಡಿದ್ದು, ಆತನ ಕಿವಿಗೆ ಗಂಭೀರ ಗಾಯವಾಗಿದೆ. ಗಂಗವ್ವ ಉಪ್ಪಾರ, ಲಕ್ಷ್ಮೀ ಮಾದರ, ಶೀತಲ ಕಬಾಡಿ, ಸೇರಿದಂತೆ 9 ಜನರ ಮೇಲೆ ನಾಯಿ ದಾಳಿ ನಡೆಸಿದೆ. ನಾಯಿ ಕಡಿತಕ್ಕೆ ಒಳಗಾದವರಿಗೆ ಧಾರವಾಡ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ನಾಯಿ ಈ ರೀತಿ ದಾಳಿ ನಡೆಸಿದ್ದರಿಂದ ಕಂಗಾಲಾದ ಬಡಾವಣೆ ಜನ ಆ ನಾಯಿಯನ್ನು ಬಡಿಗೆ ಮತ್ತು ರಾಡ್ನಿಂದ ಹೊಡೆದು ಕೊಂದು ಹಾಕಿದ್ದಾರೆ. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
