Vijaypura

ಮದ್ಯದ ಅಮಲಿನಲ್ಲಿ ‘ಲೋಗೋ’ ದರ್ಬಾರ್: ವಿಜಯಪುರದಲ್ಲಿ ನಕಲಿ ಪತ್ರಕರ್ತರ ಅಸಲಿ ಆಟ!”

Share

ವಿಜಯಪುರದಲ್ಲಿ ಈಗ ನಕಲಿ ಪತ್ರಕರ್ತರ ಹಾವಳಿ ಮಿತಿಮೀರಿದೆ. ಜಿಲ್ಲಾ ಕೇಂದ್ರದ ರೇಡಿಯೋ ಕೇಂದ್ರದ ಬಳಿಯಿರುವ ಬಾರ್‌ವೊಂದಕ್ಕೆ ನುಗ್ಗಿದ ಕಿಡಿಗೇಡಿಗಳು, ಮದ್ಯ ಸೇವಿಸಿ ಹಣ ನೀಡದೆ ಉದ್ಧಟತನ ತೋರಿದ್ದಾರೆ. ಅಷ್ಟೇ ಅಲ್ಲದೆ, ಹಣ ಕೇಳಿದ ಮಾಲೀಕನಿಗೆ ತಮ್ಮ ವಾಹನದ ಮೇಲಿರುವ ಪ್ರೆಸ್ ಲೋಗೋ ತೋರಿಸಿ ಧಮ್ಕಿ ಹಾಕಿದ್ದಾರೆ.

ವಿಜಯಪುರ ನಗರದ ರೇಡಿಯೋ ಕೇಂದ್ರದ ಹತ್ತಿರವಿರುವ ಬಾರ್ ಒಂದರಲ್ಲಿ ಈ ನಕಲಿ ಗ್ಯಾಂಗ್ ತಮ್ಮ ಅಸಲಿ ಬುದ್ಧಿ ತೋರಿಸಿದೆ.
ಬಾರ್‌ಗೆ ಬಂದ ಇಬ್ಬರು ವ್ಯಕ್ತಿಗಳು ಮದ್ಯದ ಬಾಟಲಿಯನ್ನು ಪಡೆದುಕೊಂಡಿದ್ದಾರೆ. ಆದರೆ, ಬಿಲ್ ಪಾವತಿಸುವಂತೆ ಸಿಬ್ಬಂದಿ ಕೇಳಿದಾಗ ಅಸಭ್ಯವಾಗಿ ವರ್ತಿಸಲು ಶುರು ಮಾಡಿದ್ದಾರೆ. ಬಾರ್ ಮಾಲೀಕರು ಮಧ್ಯಪ್ರವೇಶಿಸಿ ಹಣಕ್ಕಾಗಿ ಒತ್ತಾಯಿಸಿದಾಗ, ತಮ್ಮ ಗಾಡಿಯ ಮೇಲಿದ್ದ ‘Press’ ಲೋಗೋ ತೋರಿಸಿ, “ನಾವ್ಯಾರು ಗೊತ್ತಾ? ನಿಮ್ಮ ಬಾರ್ ಮೇಲೆ ಕೇಸ್ ಮಾಡಿಸುತ್ತೇವೆ” ಎಂದು ಬೆದರಿಕೆ ಒಡ್ಡಿದ್ದಾರೆ ಎನ್ನಲಾಗಿದೆ.
ಲೋಗೋ ಇಟ್ಟುಕೊಂಡು ಪುಂಡಾಟಿಕೆ ನಡೆಸುತ್ತಿರುವ ಇಂತಹ ನಕಲಿಗಳ ವಿರುದ್ಧ ಪೊಲೀಸ್ ಇಲಾಖೆ ಹಾಗೂ ವಾರ್ತಾ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

Tags:

error: Content is protected !!