hubbali

ಬೋನಿಗೆ ಬಿದ್ದ ಚಿರತೆ

Share

ತಿಂಗಳಿಗೂ ಅಧಿಕ ಕಾಲ ಮಹಾನಗರದ ಜನತೆಯಲ್ಲಿ ಆತಂಕ ಸೃಷ್ಟಿಸಿದ್ದ ಚಿರತೆ ಕೊನೆಗೂ ಹುಬ್ಬಳ್ಳಿ ವಿಮಾನ ನಿಲ್ದಾಣದ ಆವರಣದಲ್ಲಿ ಇಡಲಾಗಿದ್ದ ಬೋನಿಗೆ ಬಿದ್ದಿದೆ. ಇದರಿಂದ ಆತಂಕದಲ್ಲಿ ಕಾಲ ಕಳೆಯುತ್ತಿದ್ದ ಈ ಭಾಗದ ಜನರು ಇದೀಗ ನಿರಾಳರಾಗಿದ್ದಾರೆ.

ಡಿ.17 ರಿಂದ ನಗರದ ವಿಮಾನ ನಿಲ್ದಾಣ, ಕಾರವಾರ ರಸ್ತೆ, ಸುತಗಟ್ಟಿ, ಗಾಮನಗಟ್ಟಿ, ಸತ್ತೂರು ಸೇರಿದಂತೆ ಅನೇಕ ಕಡೆಗಳಲ್ಲಿ 4-5 ಬಾರಿ ಈ ಚಿರತೆ ಕಾಣಿಸಿಕೊಂಡು, ಜನರಲ್ಲಿ ಆತಂಕಕ್ಕೆ ಕಾರಣವಾಗಿತ್ತು. ಮೈಸೂರು, ಗದಗ, ಬೆಳಗಾವಿಯಿಂದ ಆಗಮಿಸಿದ್ದ ಅರಣ್ಯ ಇಲಾಖೆ ತಂಡ ವಿಶೇಷ ಕಾರ್ಯಾಚರಣೆ ನಡೆಸಿದ್ದರೂ ಚಿರತೆ ಸೆರೆಯಾಗಿರಲಿಲ್ಲ.‌

ಚಿರತೆಯನ್ನು ಬೋನಿಗೆ ಬೀಳಿಸುವ ನಿಟ್ಟಿನಲ್ಲಿ ವಿಮಾನ ನಿಲ್ದಾಣದ ಆವರಣದಲ್ಲಿ 3 ಸಾಮಾನ್ಯ ಹಾಗೂ 1 ತುಮಕೂರು ಮಾದರಿ ವಿಶೇಷ ಬೋನನ್ನು (ಕೇಜ್)‌‌ ಇರಿಸಲಾಗಿತ್ತು. ಅದರಂತೆ ಸತ್ತೂರಿನಲ್ಲಿ ಒಂದು ಬೋನ್ ಇಡಲಾಗಿತ್ತು. ಚಿರತೆಯ ಚಲನವಲನ ತಿಳಿಯಲು ವಿವಿಧ ಕಡೆಗಳಲ್ಲಿ ಒಟ್ಟು 25ಕ್ಕೂ ಹೆಚ್ಚು ಟ್ರ್ಯಾಪ್ ಕ್ಯಾಮರಾಗಳನ್ನು ಅಳವಡಿಸಲಾಗಿತ್ತು.

ವಿಮಾನ ನಿಲ್ದಾಣದಲ್ಲಿ ಚಿರತೆ ಬಂದ ಮಾಹಿತಿ ಅರಿತ ಅರಣ್ಯ ಇಲಾಖೆಯ ತಂಡ ತುಮಕೂರು ಮಾದರಿಯ ಬೋನನ್ನು ಮೊದಲಿದ್ದ ಸ್ಥಳದಿಂದ ಬೇರೆ ಕಡೆ ಸ್ಥಳಾಂತರ ಮಾಡಿ, ಅದರಲ್ಲಿ ಪ್ರಾಣಿಯೊಂದನ್ನು ಹಾಕಿ ಚಿರತೆಗಾಗಿ ಕಾದು ಕುಳಿತಿದ್ದರು. ಸೋಮವಾರ ರಾತ್ರಿ ಆ ಪ್ರಾಣಿಯನ್ನು ತಿನ್ನಲು ಬಂದ ಚಿರತೆ ಬೋನ್​ಗೆ ಬಿದ್ದಿದೆ.

Tags:

error: Content is protected !!