ಹುಬ್ಬಳ್ಳಿ ನಗರ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಮತ್ತೆ ಚಿರತೆ ಪ್ರತ್ಯಕ್ಷವಾಗಿದ್ದು, ಜನರಲ್ಲಿ ಆತಂಕ ಹೆಚ್ಚಾಗಿದೆ. ಕಳೆದ ಒಂದು ತಿಂಗಳುಗಳಿಂದ ಹುಬ್ಬಳ್ಳಿಯ ಸುತ್ತಲಿನ ಗ್ರಾಮಗಳಲ್ಲಿ ಚಿರತೆ ಕಾಣಿಸಿಕೊಳ್ಳುತ್ತಿದ್ದು, ಗಾಮನಗಟ್ಟಿ, ತಾರಿಹಾಳ ಮತ್ತು ಸುತಗಟ್ಟಿ ಗ್ರಾಮಗಳ ಜನರಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗಿದೆ.

ಗುರುವಾರ ರಾತ್ರಿ ಕೂಡ ಹುಬ್ಬಳ್ಳಿ ಹೊರವಲಯದ ಸುತಗಟ್ಟಿ ಗ್ರಾಮದ ಕಾನಕೋರ್ಡ್ ಲೇಔಟ್ ನಲ್ಲಿ ಮತ್ತೆ ಚಿರತೆ ಕಂಡುಬಂದಿದ್ದು, ಅದರ ಓಡಾಟವನ್ನು ಸ್ಥಳೀಯರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಇದರಿಂದ ಮತ್ತೆ ಗ್ರಾಮಸ್ಥರ ಆತಂಕ ಇನ್ನಷ್ಟು ಹೆಚ್ಚಾಗಿದೆ. ಇದಕ್ಕೂ ಮುನ್ನ ಕಳೆದ ಒಂದು ವಾರದ ಹಿಂದೆ ಗಾಮನಗಟ್ಟಿ ಗ್ರಾಮದ ಹೊಲದ ಶೆಡ್ ನಲ್ಲಿದ್ದ ಹಸು ಮೇಲೆ ಚಿರತೆ ದಾಳಿ ನಡೆಸಿದ್ದ ಘಟನೆ ನಡೆದಿತ್ತು. ಇದರಿಂದ ಹೊಲಗಳಿಗೆ ತೆರಳುವ ರೈತರಲ್ಲೂ ಭಯ ಹೆಚ್ಚಿದ್ದು, ಜಾನುವಾರುಗಳ ಸುರಕ್ಷತೆ ಬಗ್ಗೆ ಚಿಂತೆ ವ್ಯಕ್ತವಾಗಿದೆ.
