Hukkeri

ವಿದ್ಯಾರ್ಥಿಗಳು ಗುರಿ ಇಟ್ಟು ವಿದ್ಯಾರ್ಜನೆ ಮಾಡಿದರೇ ಯಶಸ್ವು ಕಟ್ಟಿಟ್ಟ ಬುತ್ತಿ – ಪಿ ಐ ಜಾವೀದ್ ಮುಶಾಪುರೆ

Share

ವಿದ್ಯಾರ್ಥಿಗಳು ಗುರಿ ಇಟ್ಟು ವಿದ್ಯಾರ್ಜನೆ ಮಾಡಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಯಮಕನಮರ್ಡಿ ಪೋಲಿಸ್ ಇನ್ಸಪೇಕ್ಟರ ಜಾವೀದ್ ಮುಶಾಪೂರೆ ಹೇಳಿದರು.

ಹುಕ್ಕೇರಿ ನಗರದ ಟಿಪ್ಪು ಸುಲ್ತಾನ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯ ವಿದ್ಯಾಥಿಗಳಿಗೆ ಪರೀಕ್ಷೆ ಭಯ ಹೋಗಲಾಡಿಸಲು ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಮನೊದೈರ್ಯ ತುಂಬಲು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಯಮಕನಮರ್ಡಿ ಪೋಲಿಸ್ ಇನ್ಸಪೇಕ್ಟರ ಜಾವೀದ್ ಮುಶಾಪುರೆ ಮಾತನಾಡಿ ವಿದ್ಯಾರ್ಥಿಗಳು ಮೊಬೈಲ್ ಮತ್ತು ಶೋಕಿ ವಸ್ತುಗಳಿಗೆ ಮಾರು ಹೋಗದೆ ಸತತ ತಮ್ಮ ಕಠಿಣ ಪರಿಶ್ರಮದಿಂದ ಗುರಿ ಇಟ್ಟು ವಿದ್ಯಾಭ್ಯಾಸ ಮಾಡಿದರೆ ಯಶಸ್ಸು ಕಟ್ಟಿಟ್ಟ ಬುತ್ತಿಯಾಗಿದೆ ಕಾರಣ ತಮ್ಮ ವಿದ್ಯಾರ್ಥಿ ಜೀವನ ವ್ಯರ್ಥ ಮಾಡದೆ ನಿರಂತರ ಅಭ್ಯಾಸ ಮಾಡಿ ತಮ್ಮ ತಂದೆ ತಾಯಿಗಳಿಗೆ ಮತ್ತು ಕಲಿತ ಶಾಲೆಗೆ ಕಿರ್ತಿ ತರುವ ಕೇಲಸ ಮಾಡಬೇಕು ಎಂದರು.

ವೇದಿಕೆ ಮೇಲೆ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಶಾಹಿದರಜಾ ಪೀರಜಾದೆ,ಪ್ರಾಚಾರ್ಯ ರಾಜು ಇಂಗೋಲಿ ಉಪಸ್ಥಿತರಿದ್ದರು.
ನಂತರ ಬೆಳಗಾವಿ ಜಿಲ್ಲಾ ಮುಸ್ಲಿಂ ಕಲದಯಾಣ ಹಾಗೂ ಶಿಕ್ಷಣ ಸಂಸ್ಥೆಗಳ ಅದ್ಯಕ್ಷ ಇಕ್ಬಾಲ್ ಅಹಮ್ಮದ ಪೀರಜಾದೆ ಯವರಿಗೆ ಸತ್ಕರಿಸಿ ಅಭಿನಂದಿಸಲಾಯಿತು.

ಸತ್ಕಾರ ಸ್ವೀಕರಿಸಿ ಮಾತನಾಡಿದ ಪೀರಜಾದೆ ವಿದ್ಯಾರ್ಥಿ ಜೀವನದಲ್ಲಿ ಪರಿಶ್ರಮ ಬಹುಮುಖ್ಯವಾಗಿದೆ ಕಾರಣ ಪ್ರಯತ್ನದಿಂದ ಉನ್ನದ ವಿದ್ಯಾಭ್ಯಾಸ ಮಾಡಿ ಮಾದರಿಯಾಗ ಬೇಕು ಎಂದರು

ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಸದಸ್ಯರಾದ ಹಸನಸಾಬ ಮುಜಾವರ, ಕಲಂದರ ಮೋಕಾಶಿ, ಮಾಮು ಮೊಕಾಶಿ, ಹಜರತ್ ಪೀರಜಾದೆ, ಅಸ್ಲಂ ಶೇಖಬಡೆ, ಜಾಂಗೀರ ಇನಾಮದಾರ ಹಾಗೂ ಟಿಪ್ಪು ಸುಲ್ತಾನ ಪದವಿ ಪೂರ್ವ ಮಹಾವಿದ್ಯಾಲಯ ಉಪನ್ಯಾಸಕರು,ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Tags:

error: Content is protected !!