Kittur

ಪತ್ನಿಯ ಕೊಲೆಗೈದು ಪತಿಯೂ ಆತ್ಮಹತ್ಯೆ!!! ತವರು ಮನೆಗೆ ಹೊರಟಿದ್ದೇ ಸಾವಿಗೆ ಕಾರಣವಾಯ್ತೇ?

Share

ತವರು ಮನೆಗೆ ಹೋಗಬೇಡ ಎಂದರೂ ಕೇಳದೆ ಪತ್ನಿ ಹೊರಟಿದ್ದಾಳೆಂಬ ಕೋಪದಲ್ಲಿ ಪತಿಯೊಬ್ಬ ಕೊಡಲಿಯಿಂದ ಹೊಡೆದು ಆಕೆಯನ್ನು ಕೊಲೆ ಮಾಡಿ, ಬಳಿಕ ತಾನು ನೇಣಿಗೆ ಶರಣಾಗಿರುವ ಘಟನೆ ಕಿತ್ತೂರು ಪೊಲೀಸ್ ಠಾಣಾ ವ್ಯಾಪ್ತಿಯ ತುರಕರಕೀಗಿಹಳ್ಳಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.

ಯಲ್ಲವ್ವ ಶಿವಪ್ಪ ಕಂಬಳಿ (43) ಕೊಲೆಯಾದ ದುರ್ದೈವಿ ಹಾಗೂ ಶಿವಪ್ಪ ಸಣ್ಣಬಸಪ್ಪ ಕಂಬಳಿ (52) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಮೃತರಿಗೆ ಇಬ್ಬರು ಮಕ್ಕಳಿದ್ದು, ಈ ಘಟನೆಯಿಂದ ಇಡೀ ಕುಟುಂಬವೇ ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ.

ಯಲ್ಲವ್ವ ಅವರ ತಾಯಿ ಕಳೆದ ವಾರವಷ್ಟೇ ನಿಧನರಾಗಿದ್ದರು. ತಾಯಿಯ ಅಗಲಿಕೆಯ ನೋವಿನಲ್ಲಿದ್ದ ಯಲ್ಲವ್ವ ಶುಕ್ರವಾರ ಅಡುಗೆ ಮಾಡಿಕೊಂಡು ತವರು ಮನೆಗೆ ಹೊರಡಲು ಸಿದ್ಧರಾಗಿದ್ದರು. ಆದರೆ ಪತ್ನಿ ತವರಿಗೆ ಹೋಗುವುದು ಶಿವಪ್ಪನಿಗೆ ಇಷ್ಟವಿರಲಿಲ್ಲ. ಇದೇ ವಿಷಯವಾಗಿ ಇಬ್ಬರ ನಡುವೆ ಜಗಳವಾಗಿದ್ದು, ಆಕ್ರೋಶಗೊಂಡ ಶಿವಪ್ಪ ಕೊಡಲಿಯಿಂದ ಪತ್ನಿಯ ಮೇಲೆ ಹಲ್ಲೆ ನಡೆಸಿದ್ದಾನೆ. ತೀವ್ರವಾಗಿ ಗಾಯಗೊಂಡ ಯಲ್ಲವ್ವ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪತ್ನಿಯ ಸಾವಿನಿಂದ ಬೆದರಿದ ಅಥವಾ ಪಶ್ಚಾತ್ತಾಪಕ್ಕೊಳಗಾದ ಶಿವಪ್ಪ ತಾನೂ ಮನೆಯಲ್ಲಿಯೇ ನೇಣು ಹಾಕಿಕೊಂಡು ಜೀವನ ಅಂತ್ಯಗೊಳಿಸಿದ್ದಾನೆ.

ದಂಪತಿಗಳ ನಡುವೆ ಈ ಮೊದಲಿನಿಂದಲೂ ಸಣ್ಣಪುಟ್ಟ ಕಲಹಗಳಿದ್ದವು ಎಂದು ತಿಳಿದುಬಂದಿದೆ. ಯಲ್ಲವ್ವ ತವರಿಗೆ ಹೋಗಲು ತಯಾರಾಗಿ ಮನೆಯ ಬಾಗಿಲು ತೆಗೆಯದಿದ್ದಾಗ ಮಕ್ಕಳು ಹಾಗೂ ಸ್ಥಳೀಯರು ಬಂದು ನೋಡಿದಾಗ ಈ ಭೀಕರ ಪ್ರಕರಣ ಬೆಳಕಿಗೆ ಬಂದಿದೆ.

ಅಣ್ಣ ತಮ್ಮಂದಿರಾದರೂ ತಮಗೆ ಯಾವುದೇ ಧ್ವನಿ ಬಂದಿಲ್ಲ. ತಾಯಿ ತೀರಿಕೊಂಡ ಹಿನ್ನೆಲೆ ಕೆಲ ಜನರೊಂದಿಗೆ ಯಲ್ಲವ್ವ ತವರಿಗೆ ತೆರಳುತ್ತಿದ್ದಳು. ಆದರೇ, ಮನೆಯ ಬಾಗಿಲು ತೆರೆಯದ ಹಿನ್ನೆಲೆ ಆಕೆಯ ಮಕ್ಕಳು ಜನರು ಕೂಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಮೃತರಿಗೆ ಇಬ್ಬರೂ ಮಕ್ಕಳಿದ್ದು, ಇಬ್ಬರು ಜನರು ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಾರೆ. ನನ್ನ ಸಹೋದರ ಗೌಂಡಿ ಕೆಲಸ ಮಾಡುತ್ತಿದ್ದ. ಯಾವಾಗಾದರೂ ಮದ್ಯ ಸೇವಿಸುತ್ತಿದ್ದ ಎಂದು ಶಂಕರಪ್ಪ ಕಾಂಬಳೆ ತಿಳಿಸಿದರು.

ಹಿಂದಿನಿಂದಲೂ ಸತಿಪತಿಯ ಕಲಹವಿತ್ತು. ಆದರೇ ಇಂದು ಬೆಳಿಗ್ಗೆ ಪತ್ನಿಯನ್ನು ಕೊಲೆ ಮಾಡಿ ಶಿವಪ್ಪ ನೇಣಿಗೆ ಶರಣಾಗಿದ್ದಾನೆಂದು ಬಸಪ್ಪ ಅವರು ತಿಳಿಸಿದರು.

ಬೆಳಿಗ್ಗೆ ಈ ಪ್ರಕರಣ ಬೆಳಕಿಗೆ ಬಂದಿದೆ. ಪತ್ನಿಯನ್ನು ಕಡಿದು ಶಿವಪ್ಪ ನೇಣಿಗೆ ಶರಣಾಗಿದ್ದಾನೆ. ಯಲ್ಲವ್ವ ತಾಯಿ ತೀರಿಕೊಂಡ ಹಿನ್ನೆಲೆ ಇಂದು ತವರಿಗೆ ಊಟ ತೆಗೆದುಕೊಂಡು ಹೋಗುತ್ತಿದ್ದಳು. ಆದರೇ, ಇಂದು ಈ ಘಟನೆ ನಡೆದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದಾರೆಂದು ಬಾವುಸಾಹೇಬ್ ತೇಗೂರ್ ಹೇಳಿದರು.

ವಿಷಯ ತಿಳಿದ ಕಿತ್ತೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಬೆಳಗಾವಿ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಕುರಿತು ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Tags:

error: Content is protected !!