ಹುಬ್ಬಳ್ಳಿಯಲ್ಲಿ ಮನೆ ಹಸ್ತಾಂತರ ಮಾಡುವವರಿಗೂ ಲಿಕ್ಕರ್ ನೀಡಲಾಗ್ತಿದೆ. ಹುಬ್ಬಳ್ಳಿ 4 ರೇಂಜ್ ಇವೆ, ರೇಂಜ್ 1 ರಲ್ಲಿ ಒಂದು ಸೂಚನೆ ನೀಡಲಾಗಿದೆ.
ಹುಬ್ಬಳ್ಳಿಯ ಮದ್ಯದಂಗಡಿಗಳು ಹೆಚ್ಚಿನ ಮದ್ಯ ಇಟ್ಟು ಹೆಚ್ಚು ವ್ಯಾಪಾರ ಮಾಡಲು ಸೂಚಿಸಿದ್ದಾರೆ
ಇದರ ಅರ್ಥ ಏನು? ಎಂದು ಶಾಸಕ ಮಹೇಶ್ ಟೆಂಗಿನಕಾಯಿ ಪ್ರಶಿಸಿದ್ದಾರೆ.

ನಗರದಲ್ಲಿಂದು ಮಾತನಾಡಿದ ಅವರು. ರಾಜ್ಯ ಸರ್ಕಾರ ಇದಕ್ಕೆ ಉತ್ತರ ಕೊಡಬೇಕಿದೆ
ಸರ್ಕಾರ ಯಾವ ದಿಕ್ಕಿನಲ್ಲಿ ಹೊರಟಿದೆ ಕಾರ್ಯಕ್ರಮ ಬರುವಂತವರಿಗೆ ಮದ್ಯ ಹಂಚುತ್ತಿರಾ?. ಅಬಕಾರಿ ಇಲಾಖೆ ಯಾವ ಮಟ್ಟಕ್ಕೆ ಇಳಿದಿದೆ. ಬಿಜೆಪಿ ಪಕ್ಷ ಇದನ್ನ ಖಂಡನೆ ಮಾಡುತ್ತೆ ಎಂದರು.
ಸಿಎಂ ಸಿದ್ದರಾಮಯ್ಯ ಅವರ ಮೂಗಿನ ಅಡಿ ನಡೆದಿರುವ ಕಾರ್ಯಕ್ರಮ. ರಾಜ್ಯವನ್ನ ಯಾವ ಲೆಕ್ಕಕ್ಕೆ ಕೊಂಡೋಯ್ತಾ ಇದ್ದಾರೆ. ಸರ್ಕಾರಕ್ಕೆ ಆದಾಯ ಕಡಿಮೆ ಆಗಿದೆ, ಸರಿದೂಡಿಸಲು ಹೀಗೆ ಮಾಡಲಾಗ್ತಿದೆಯಾ ಎಂದರು.
2017 ರಲ್ಲಿ ಪಾಲಿಕೆ ಭೂಮಿ ಕೊಳಚೆ ನಿರ್ಮೂಲನೆ ಮಂಡಳಿಗೆ ಕೊಡಲಾಗ್ತಿತ್ತು . 2019ರಲ್ಲಿ ಯಡಿಯೂರಪ್ಪ ಸರ್ಕಾರದಲ್ಲಿ ಬದಲಾವಣೆ ತರೋಕೆ ಪ್ರಯತ್ನ ಮಾಡಿದ್ರು. ಇವೆಲ್ಲ ಮನೆಗಳು ಬಿಜೆಪಿ ಸರ್ಕಾರ ಇದ್ದಾಗ ಆಗಿದ್ದು. ನಮ್ಮ ಕಾಲದಲ್ಲಿ ಮುಗಿಯದ ಮನೆಗಳನ್ನ ಈಗ ಹಸ್ತಾಂತರ ಮಾಡಲಾಗ್ತಿದೆ. ಸರ್ಕಾರ ಬಂದಾಗಿನಿಂದ ನೀವು ಎಷ್ಟು ಮನೆ ಕೊಡಲು ನಿರ್ಧಾರ ಮಾಡಿದ್ದೀರಿ ಅದನ್ನ ಹೇಳಿ? ಕೇಂದ್ರ ಸರ್ಕಾರದಿಂದ ಪ್ರತಿ ಮನೆಗೆ 1.5 ಲಕ್ಷ ಕೊಡ್ತಿದೆ. ಕೇಂದ್ರದ ಪಾಲು ಇದೆ ಅಂತ ಹೇಳೋ ಕೆಲಸ ಕಾಂಗ್ರೆಸ್ ಸರ್ಕಾರ ಮಾಡಬೇಕಿತ್ತು
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರನ್ನ ಸಹ ಕಾರ್ಯಕ್ರಮಕ್ಕೆ ಕರೆಯುವ ಕೆಲಸ ಮಾಡಲಿಲ್ಲ
26ಕ್ಕೆ ಜೋಶಿ ಅವರು ಬರ್ತಿದ್ರು, ಅವಾಗ ಮಾಡಬಹುದಿತ್ತಲ್ಲ. ಕ್ರೆಡಿಟ್ ಬಿಜೆಪಿ ಹೋಗಬಾರದು ಅಂತ ಈ ರೀತಿ ಮಾಡಿದ್ದಾರೆ
ಈ ಹಿನ್ನೆಲೆ ಇವತ್ತು ಪ್ರತಿಭಟನೆಗೆ ನಾವು ಮುಂದಾಗಿದ್ದೇವೆ ಎಂದರು.
