ತಾಮ್ರಪರ್ಣಿ ನದಿಯ ದಡದಲ್ಲಿರುವ ಶ್ರೀ ಸದಾಶಿವ ಮಂದಿರದ ಆವರಣಲ್ಲಿ ಸರ್ವಲೋಕ ಸೇವಾ ಫೌಂಡೇಶನನ ಸಂಸ್ಥಾಪಕ ವಿರೇಶ್ ಹಿರೇಮಠ ಅವರ ನೇತೃತ್ವದಲ್ಲಿ ರುದ್ರಾಕ್ಷಿ ಸಸಿಯನ್ನು ನೆಡಲಾಯಿತು.

ಕೊಲ್ಹಾಪುರ ಜಿಲ್ಲೆಯ ಚಂದಗಡ ತಾಲೂಕಿನ ರಾಜಗೋಳಿಯಲ್ಲಿರುವ ತಾಮ್ರಪರ್ಣಿ ನದಿಯ ದಡದಲ್ಲಿರುವ ಶ್ರೀ ಸದಾಶಿವ ಮಂದಿರದ ಆವರಣದಲ್ಲಿ ಸರ್ವಲೋಕ ಸೇವಾ ಫೌಂಡೇಶನನ ಸಂಸ್ಥಾಪಕ ವಿರೇಶ್ ಹಿರೇಮಠ ಅವರ ನೇತೃತ್ವದಲ್ಲಿ ರುದ್ರಾಕ್ಷಿ ಸಸಿಯನ್ನು ನೆಡಲಾಯಿತು.
ಈ ವೇಳೆ ಮಾತನಾಡಿದ ಸರ್ವಲೋಕ ಸೇವಾ ಫೌಂಡೇಶನನ ಸಂಸ್ಥಾಪಕ ವಿರೇಶ್ ಹಿರೇಮಠ ಅವರು, ತಾಮಪರ್ಣಿ ನದಿಯ ದಡದಲ್ಲಿರುವ ಸದಾಶಿವ ಮಂದಿರವಿದ್ದು, ಅಲ್ಲಿ ಇಂದು ಪವಿತ್ರ ರುದ್ರಾಕ್ಷಿಯ ಸಸಿಯನ್ನು ನೆಡಲಾಗಿದೆ. ಇಂದಿನಿಂದ ನನ್ನ ಅಂತಿಮ ಶ್ವಾಸದ ವರೆಗೂ ಮಂದಿರಗಳ ಮತ್ತು ಶಾಲೆಗಳ ಆವರಣದಲ್ಲಿ ರುದ್ರಾಕ್ಷಿಯ ಸಸಿಯನ್ನು ನೆಡಲಾಗುವುದು ಎಂದರು.
ಇನ್ನು ಆತ್ಮಾ ಮಾಲೀಕ ಬಾಬಾ ಅವರು ಮಾತನಾಡಿ, ಕೇವಲ ದೇವರು ದೇವರು ಎಂದು ಮಂದಿರದಲ್ಲೇ ಕುಳಿತರೇ ಭಗವಂತನ ಸಾಕ್ಷಾತ್ಕಾರವನ್ನು ಕಾಣಲು ಸಾಧ್ಯವಿಲ್ಲ. ಜನಸೇವೆಯೇ ಈಶನ ಸೇವೆಯಾಗಿದೆ. ಸೇವಾಧರ್ಮದಲ್ಲಿಯೇ ಸದಾಶಿವನನ್ನು ಕಾಣಿರಿ ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಗಜಾನನ ಪಾಟೀಲ್, ಸಿದ್ಧಾರ್ಥ ನಲವಡೆ, ಸುಶಾಂತ್ ಕುಂಡೇಕರ ಸೇರಿದಂತೆ ರಾಜಗೋಳಿ ಗ್ರಾಮದ ಪ್ರಮುಖರು ಭಾಗಿಯಾಗಿದ್ಧರು.
