Dharwad

ಫೆ.4 ರಂದು ಧಾರವಾಡದ ಗರಗ ಮಡಿವಾಳೇಶ್ವರ ರಥೋತ್ಸವ- ಚನ್ನಬಸವ ಮಹಾಸ್ವಾಮೀಜಿ.

Share

ಬರುವ ಫೆಬ್ರವರಿ 4 ರಂದು ಗರಗ ಶ್ರೀ ಮಡಿವಾಳೇಶ್ವರ ರಥೋತ್ಸವದ ಜರುಗಲಿದ್ದು, ಈ ಹಿನ್ನೆಲೆಯಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಗದ್ಗುರು ಮಡಿವಾಳೇಶ್ವರ ಕಲ್ಮಠದ ಚನ್ನಬಸವ ಮಹಾಸ್ವಾಮೀಜಿ ಹೇಳಿದರು.

ಧಾರವಾಡದಲ್ಲಿ ವಿ ವಿಚಾರವಾಗಿ ಮಾಧ್ಯಮಕ್ಕೆ ಮಾತನಾಡಿದ ಅವರು, ಪವಾಡ ಪುರುಷ ಹಾಗೂ ಮಹಾ ಶಿವಯೋಗಿಗಳಾದ ಮಡಿವಾಳೇಶ್ವರರ ರಥೋತ್ಸವವು ಫೆ.4 ರಂದು ಹಮ್ಮಿಕೊಳ್ಳಲಾಗಿದೆ. ಅದರ ಅಂಗವಾಗಿ ಜ.31 ರಂದು ಗೋವುಗಳ ಸಂರಕ್ಷಣೆ ಹಾಗೂ ಕೃಷಿ ವಿಷಯವಾಗಿ ಸಭೆ, ಫೆ.1 ರಂದು ಹಳ್ಳಿಯ ಸಾಹಿತ್ಯ ಮತ್ತು ಡಕ್ಕ ಸಾಹಿತ್ಯ ಮತ್ತು ಶಿವಧೀಕ್ಷೆ ನಡೆಯಲಿದೆ. ಇದರ ಜೊತೆಗೆ ಸಾಮೂಹಿಕ ವಿವಾಹಗಳೂ ನಡೆಯಲಿವೆ ಎಂದರು.

– ಚನ್ನಬಸವ ಮಹಾಸ್ವಾಮೀಜಿ,ಜಗದ್ಗುರು ಮಡಿವಾಳೇಶ್ವರ ಕಲ್ಮಠದ ಗರಗ.

Tags:

error: Content is protected !!